ಕಲೆಯಲ್ಲಿ ಶೀಲ-ಅಶ್ಲೀಲದ ಬಗ್ಗೆ ಚರ್ಚೆ ಬಹಳ ಕಾಲದಿಂದ ನಡೆಯುತ್ತಲೇ ಬಂದಿದೆ. ಚಲನಚಿತ್ರವೂ ಈ ಪ್ರಶ್ನೆಗಳಿಗೆ ಹೊರತಾಗಿಲ್ಲ. ದೇಹವನ್ನು ಹೇಗೆ ತೋರಿಸಲಾಗುತ್ತದೆ ಮತ್ತು ಹಾಗೆ ತೋರಿಸುವುದರ ಉದ್ದೇಶವನ್ನು ಆಧರಿಸಿ ಈ ಚರ್ಚೆಯ ಎರಡು ಮುಖಗಳೆಂದರೆ ಕಲಾತ್ಮಕ (Art) ಅಥವಾ ಅಶ್ಲೀಲ ಚಿತ್ರ (Pornography). ಉದ್ದೇಶ ಸರಿಯಾಗಿದ್ದಲ್ಲಿ ಕಲೆಯಲ್ಲೂ ಆ ಉದ್ದೇಶ ಕಂಡುಬರುವುದರಿಂದ ಅದು ಅಶ್ಲೀಲ ಎನಿಸುವುದಿಲ್ಲ. ನೋಡುವಾಗ ಅಸಹ್ಯ ಎನಿಸಿದರೂ, ಅಶ್ಲೀಲ ಎನಿಸಿದರೂ ಅವು ಹುಟ್ಟಿಸುವ ಧ್ವನಿಗಳಿಂದಾಗಿ ಅವು ಕೇವಲ ಕಾಮ ಪ್ರಚೋದಕ ವಸ್ತುವಾಗದೆ ಮೇಲಿನ ಮಟ್ಟಕ್ಕೇರುತ್ತವೆ. ಇಂಥಾ ಒಂದು ಚಿತ್ರ ‘ಇನ್ ದಿ ರೆಲ್ಮ್ ಆಫ್ ಸೆನ್ಸಸ್’ (೧೯೭೬ರಲ್ಲಿ ತಯಾರಾದ ಈ ಚಿತ್ರಕ್ಕೆ ‘ಎಂಪರರ್ ಆಫ್ ಸೆನ್ಸಸ್’ ಇತ್ಯಾದಿ ಇತರ ಹೆಸರುಗಳೂ ಬಳಕೆಯಲ್ಲಿ ಇವೆ).
Entries categorized as ‘Classic Films’
ಶೀಲಾಶ್ಲೀಲಗಳ ಸುಳಿಯಲ್ಲಿ…
February 17, 2008 · 10 Comments
Categories: Classic Films
ಗೋಡೆಯ ಆಚೆಯಿಂದ ಈಚಿನ ಕಥೆ
February 3, 2008 · No Comments
ಆಂಡೀ ಡುಫ್ರ್ರೆನ್ಸ್ ಒಬ್ಬ ಚತುರ, ಚಾಣಾಕ್ಷ ಬ್ಯಾಂಕ್ ಅಧಿಕಾರಿ. ಸುಂದರ ಪತ್ನಿ, ದೌಲತ್ತಿನ-ಸವಲತ್ತಿನ ಜೀವನ, ಅಮೇರಿಕಾದ ಮುಕ್ತ ಬದುಕಿನ ಸುಂದರ ಕನಸುಗಳು. ಜೀವನ ಇದಕ್ಕಿಂತ ಇನ್ನೇನು ತಾನೇ ಕೊಟ್ಟೀತು? ಜೀವನದಿಂದ ಇನ್ನೇನು ತಾನೇ ಕೇಳಬಹುದು? ಆಂಡೀ ಡುಫ್ರ್ರೆನ್ಸ್ ಸಂತುಷ್ಟನಾಗಿದ್ದ ಎನ್ನಲೇ? ಅಥವಾ ಅದೆಲ್ಲವೂ ಒಂದು ಸುಂದರ ಕನಸಾಗಿತ್ತು ಎನ್ನಲೇ? ಬಹುಷಃ ಕನಸು ಎಂಬುದೇ ಸರಿಯಾದ ಶಬ್ದ. ಏಕೆಂದರೆ ಕನಸುಗಳು ಕಣ್ಣುಬಿಡುತ್ತಿದ್ದಂತೆಯೇ ಕರಗಿಹೋಗುತ್ತವೆ. ಒಂದು ಸರಳವಾದ ಕೇಸ್. ಖಚಿತವಾಗಿ ಸಿಗುವ ಪುರಾವೆಗಳು. ದಕ್ಷ ಪೊಲೀಸರು, ಗೌರವಾನ್ವಿತ ಸಮಾಜ, ನಿಷ್ಟಾವಂತ ಅಧಿಕಾರಿಗಳು ಇವೆಲ್ಲಾ ಸೇರಿ ಸಂಶಯಕ್ಕೆಡೆಯಿಲ್ಲದಂತೆ ಆನ್ಡಿ ಡುಫ್ರ್ರೆನ್ಸನನ್ನು ೧೯೪೭ರಲ್ಲಿ ಸ್ವಶಾಂಕ್ ಎಂಬ ಅಮೇರಿಕಾದ ಜೈಲಿಗೆ ತಳ್ಳಿತು. ಸಮಾಜ ತನ್ನೊಳಗಿನೊಂದು ಮುಳ್ಳನ್ನು ಕಳೆಯಿತೆಂದು ಅಂದುಕೊಂಡು ನಿಟ್ಟುಸಿರಿಟ್ಟಿತು. ಇಲ್ಲಿಂದ ಆರಂಭವಾಗುತ್ತೆ ಒಂದು ಮಹಾಪಲಾಯನ ಕಥನ ಸ್ವಶಾಂಕ್ ರಿಡೆಂಪ್ಶನ್ ಎನ್ನುವ ಚಿತ್ರದ್ದು. (೧೯೯೪) Shawshank Redemption (1994)
Categories: Classic Films
ಕಟ್ಟೆಯೊಡೆಯುವ ಮುನ್ನ ಒಂದು ಚೆಸ್ ಆಟ
February 3, 2008 · No Comments
೧೯೧೮ರಲ್ಲಿ ಸ್ವೀಡನ್ನಿನಲ್ಲಿ ಜನಿಸಿದ ಇಂಗ್ಮಾರ್ ಬರ್ಗ್ಮನ್ ನೂರಕ್ಕೂ ಹೆಚ್ಚು ನಾಟಕಗಳನ್ನು, ೧೫೦ಕ್ಕೂ ಮಿಗಿಲಾದ ರೇಡಿಯೋ ಕಾರ್ಯಕ್ರಮಗಳನ್ನು, ಐವತ್ತರಷ್ಟು ಸಿನೆಮಾಗಳನ್ನು ನಿರ್ದೇಶಿಸಿದರೂ ಇವರು ತಮ್ಮ ಸಿನೆಮಾಗಳಿಂದ ಲೋಕ ಪ್ರಸಿದ್ಧಿಯನ್ನು ಪಡೆದವರು. ಇವರ ಅನೇಕ ಚಿತ್ರಗಳನ್ನು ನಾನು ನೋಡಿದ್ದರೂ, ಮತ್ತೆ ಮತ್ತೆ ಕಾಡುವ ಒಂದು ಚಿತ್ರ, `ಸೆವೆನ್ತ್ ಸೀಲ್’ ಕುರಿತು ನಾಲ್ಕು ಮಾತುಗಳನ್ನು ಇಲ್ಲಿ ಬರೆದಿದ್ದೇನೆ. (more…)
Categories: Classic Films