ಮೋನೋ - ಸ್ಟೀರಿಯೋ - ಸರೌನ್ಡ್ ಇತ್ಯಾದಿ ಪದಗಳನ್ನು ನೀವು ಸಿನೆಮಾದ ಧ್ವನಿಯ ಸಂದರ್ಭದಲ್ಲಿ ಕೇಳಿರಬಹುದು. ಕೆಲವೊಮ್ಮೆ ಅದು ತಪ್ಪು ಬಳಕೆಯಲ್ಲಿರುವುದೂ ಉಂಟು. ಕಾರಿನಲ್ಲಿರುವ ಟೇಪ್-ಪ್ಲೇಯರ್ ಹೆಚ್ಚಿನ ಸಂದರ್ಭದಲ್ಲಿ ಸ್ಟೀರಿಯೋ ಎಂದೇ ಕರೆಸಿಕೊಳ್ಳುತ್ತದೆ. ಆದರೆ ಅದು ನಿಜವಾಗಿ ಸರೌನ್ಡ್ ಆಗಿರಬಹುದು. ಇತ್ಯಾದಿ. ಹಾಗಾಗಿ ಇವತ್ತಿನ ಚಿತ್ರ-ಧ್ವನಿ ಕಂತಿನಲ್ಲಿ ಈ ಪದಗಳ ಬಗ್ಗೆ ಒಂದಿಷ್ಟು ಮಾತು. ಹೀಗೆಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ಅದರ ಸೃಜನಾತ್ಮಕ ಬಳಕೆ ಹೇಗೆ ಸಾಧ್ಯ ಮತ್ತು ಅದರ ಗುಣ-ಅವಗುಣ ಏನು ಎನ್ನುವುದು ನಮ್ಮ ಕುತೂಹಲ.
(more…)
Entries categorized as ‘Technical writings’
ಚಿತ್ರ ಧ್ವನಿ (ಭಾಗ - ೬)
April 9, 2008 · 1 Comment
Categories: Technical writings
ಚಿತ್ರ ಧ್ವನಿ (ಭಾಗ - ೫ )
March 16, 2008 · 1 Comment
ನಿಜ ಜೀವನದಲ್ಲಿ ಅನೇಕ ಬಾರಿ ನಾವು ತುಂಬಾ ಸಂತೋಷಗೊಂಡಾಗ, ಹೆಮ್ಮೆಯಿಂದ ಹೆಜ್ಜೆ ಹಾಕುವಾಗ ಮನಸ್ಸಿನಲ್ಲಿ ಯಾವುದೋ ಒಂದು ಹಾಡು ಗುನುಗುತ್ತೇವೆ ನೆನಪಿದೆಯಾ? ಕೆಲವೊಂದು ಬಟ್ಟೆಹಾಕಿ ನಡೆಯುವಾಗ ನಾವು ತುಂಬಾ ಅಂದವಾಗಿ ಕಾಣುತ್ತಿದ್ದೇವೆ ಎಂದು ನಮಗೇ ಅನ್ನಿಸಿ ಯಾವುದೋ ಸಿನೆಮಾ ಹೀರೋನಿಗೆ ಹೋಲಿಸಿ ಹಿನ್ನೆಲೆ ಸಂಗೀತವನ್ನು ನಾವೇ ಕೊಟ್ಟು ಸ್ಟೈಲ್ ಮಾಡುತ್ತೇವೆ ನೆನಪಿದೆಯಾ? ಹಾಗಾದರೆ ಈ ಹಿನ್ನೆಲೆ ಸಂಗೀತ ಎಂಬ ವಿಷಯ ಕುತೂಹಲಕರ ಅಲ್ಲವೇ? ಇವತ್ತಿನ ಭಾಗದಲ್ಲಿ ಅದರ ಬಗ್ಗೆ ಒಂದಷ್ಟು ಯೋಚನೆಗಳು, ಒಂದಷ್ಟು ಒದರುವಿಕೆಗಳು.
ಹಿನ್ನೆಲೆ ಸಂಗೀತ ಯಾಕೆ ಚಿತ್ರಗಳಿಗೆ ಅಗತ್ಯ? ಅದರ ಕೆಲಸವೇನು? ಯಾವುದೇ ಸಂಗೀತಕ್ಕೂ ಅದರದೇ ಆದ ಒಂದು ಲಯ ಇರುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಚಿತ್ರವೊಂದಕ್ಕೆ ಈ ಲಯ ಕೂಡಿದಾಗ, ನಮಗೆ ಚಿತ್ರದಲ್ಲೂ ಒಂದು ಲಯದ ಅನುಭವ ಬರುತ್ತದೆ. ಸಂಗೀತಕಾರನೊಬ್ಬ ಹಾಡುಹೇಳುವಾಗ ತಾಳ ಹಾಕುವುದರಿಂದ ಸಂಗೀತ ಶಾಸ್ತ್ರದ ಗಂಧ-ಗಾಳಿ ಇಲ್ಲದವರಿಗೂ ತಾಳದ ಅನುಭವ ಆಗುತ್ತದೆ. ಇಲ್ಲಿ ದೃಶ್ಯದಿಂದ ನಾವು ಶಬ್ದದಲ್ಲಿ ಲಯವನ್ನು ಕಂಡುಕೊಳ್ಳುತ್ತಿರುತ್ತೇವೆ. ಸಿನೆಮಾದಲ್ಲಿ ಇದರ ವಿರುದ್ಧ ಪ್ರಕ್ರಿಯೆ ನಡೆಯುತ್ತದೆ. ಅಲ್ಲಿ ಒಂದು ಚಿತ್ರಕ್ಕೆ ಶಬ್ದದಿಂದಾಗಿ ಲಯ ಕಂಡು ಬರುತ್ತದೆ. ಇದನ್ನು ಹಿನ್ನೆಲೆ ಸಂಗೀತದ ಮೊದಲ ಉಪಯೋಗ ಎನ್ನಬಹುದು. ಮುಂದಿನ ಚಿತ್ರವನ್ನು ನೀವು ನೋಡುವಾಗ ಹಿನ್ನೆಲೆ ಸಂಗೀತಕ್ಕೆ ಒಂದಿಷ್ಟು ಗಮನ ಕೊಟ್ಟು ಅದಿಲ್ಲದಿದ್ದರೆ ಈ ದೃಶ್ಯ ಹೇಗೆ ಕಾಣಿಸುತ್ತಿತ್ತು ಎಂದು ಕಲ್ಪಿಸಿಕೊಳ್ಳಿ ಆಗ ಈ ಲಯದ ವಿಷಯ ಇನ್ನಷ್ಟು ವಿಷದವಾಗುತ್ತದೆ.
Categories: Technical writings
ಚಿತ್ರ ಹಾಗೂ ಧ್ವನಿ (ಭಾಗ - ೪)
March 9, 2008 · 4 Comments
ಧ್ವನಿಯನ್ನು ಮೆದುಳು ಗ್ರಹಿಸುವ ರೀತಿ ಹೇಗಿದೆಯೆಂದರೆ, ಕಿವಿಯ ಮೂಲಕ ಹಾದು ಬರುವ ಶಬ್ದ ರಾಶಿಯಲ್ಲಿ ಮೆದುಳು ಅದಕ್ಕೆ ಬೇಕಾದದ್ದನ್ನು ಮಾತ್ರ ಆಯ್ದು ಅರ್ಥೈಸಿಕೊಳ್ಳುತ್ತದೆ. ಅನೇಕ ಬಾರಿ ಕಿವಿಗೆ ಸರಿಯಾಗಿ ಕೇಳಿಸದೇ ಇರುವಂಥದ್ದು, ಸಂದರ್ಭದ, ಸನ್ನಿವೇಶ ಆಧರಿಸಿ, ಅಥವಾ ಹಿಂದೆ ಕೇಳಿರುವ ಪ್ರಯೋಗವನ್ನು ಆಧರಿಸಿ ಮೆದುಳು ಅರ್ಥೈಸಿಕೊಳ್ಳುತ್ತದೆ. ಇದೆಲ್ಲವೂ ನಮ್ಮ ಅರಿವಿಗೆ ಬರದೇ ನಡೆಯುವ ಕೆಲಸಗಳು. (ಇದನ್ನು psycho acoustics ಎಂದೂ ಕರೆಯುತ್ತಾರೆ) ಆದರೆ ಮತ್ತೆ ದಡ್ಡ ತಂತ್ರಜ್ಞಾನಕ್ಕೆ ಬಂದರೆ, ಅದಕ್ಕೆ ಪರಿಚಯ ಇರುವ ಧ್ವನಿಗಳೆಲ್ಲವೂ ಬೇರೆಬೇರೆ ಪ್ರಮಾಣದ ಕಂಪನಗಳು ಮಾತ್ರ (frequency) ಹಾಗಾಗಿ ಅದು ತನ್ನ ಮೇಲೆ ಬಿದ್ದ ಎಲ್ಲಾ ಕಂಪನಗಳನ್ನು ನಿಷ್ಟೆಯಿಂದ ದಾಖಲೀಕರಿಸಿಕೊಳ್ಳುತ್ತದೆ. ಮತ್ತೆ ನಾವು ಬೇಕೆಂದಾಗ ಮರಳಿ ಕೇಳಿಸುತ್ತದೆ. ಹಾಗಾದರೆ ಒಂದು ಸ್ಥಳದಲ್ಲಿ ನಿಂತಾಗ ಕೇಳಿ ಬರುವ ಶಬ್ದರಾಶಿಯಲ್ಲಿ ನಮಗೆ ಬೇಕಾಗಿರುವ ಶಬ್ದವನ್ನು ಮಾತ್ರ ದಾಖಲೀಕರಿಸಿಕೊಳ್ಳುವುದು ಅದರಿಂದ ಸಾಧ್ಯವಿಲ್ಲದ ಮಾತು. ಹಾಗಾಗಿ ಭಾರತದಲ್ಲಿನ ಅಗಾಧ ಜನ ಸಾಂದ್ರತೆಯಿಂದಾಗಿ, ವಾಹನ ದಟ್ಟಣೆಯಿಂದಾಗಿ ಹೆಚ್ಚಿನ ಸಂದರ್ಭಗಳಲ್ಲಿ ಸ್ಥಳದಲ್ಲಿ ಧ್ವನಿ ಮುದ್ರಿಸಿಕೊಳ್ಳುವುದು ಕಷ್ಟದ ಕೆಲಸವಾಗಿರುತ್ತದೆ. ಇಲ್ಲಿ ಒಂದು ಶಬ್ದದ ಕಂಪನಾಂಕಕ್ಕೂ ಇನ್ನೊಂದು ಶಬ್ದದ ಕಂಪನಾಂಕಕ್ಕೂ ವ್ಯತ್ಯಾಸ ತೀರಾ ಕಡಿಮೆ ಇರುತ್ತದೆ. ಇದರಿಂದ ದಾಖಲಾದ ಶಬ್ದ ತೀರಾ ಗೊಂದಲ ಹುಟ್ಟುಸಿವಂತಿರುತ್ತದೆ. ಹೊರದೇಶಗಳಲ್ಲಿ ಈ ಪರಿಸ್ಥಿತಿ ಇಲ್ಲದ ಕಾರಣ ಹೆಚ್ಚಿನ ಕಡೆಗಳಲ್ಲಿ ಸ್ಪಷ್ಟ ಧ್ವನಿಯನ್ನು ದಾಖಲಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮೇಲೆ ವಿವರಿಸಿದ ವಿಷಯಗಳಿಂದ, ಧ್ವನಿ ಸಂಯೋಜನೆ ಎಂದರೆ ಸ್ಪಷ್ಟವಾದ ಧ್ವನಿಯನ್ನು ದಾಖಲಿಸಿಕೊಳ್ಳುವುದೆಂದು ಮಾತ್ರ ಅರ್ಥವಲ್ಲ. ಕೆಲವೊಮ್ಮೆ ಅದು ಅಸ್ಪಷ್ಟ ಧ್ವನಿಯನ್ನು ದಾಖಲಿಸಿಕೊಳ್ಳುವುದೂ ಆಗಿರಬಹುದು. ಅಥವಾ ಸ್ಪಷ್ಟ ಧ್ವನಿಗೆ ಇನ್ನೇನೋ ಮಿಶ್ರಮಾಡುವುದಾಗಿರಬಹುದು. ಹೀಗೆ ಧ್ವನಿಯ ಎಲ್ಲಾ ಸಾಧ್ಯತೆ-ಅಸಾಧ್ಯತೆ, ಕೇಳಿಸುವ ಧ್ವನಿಗೂ ಮೆದುಳು ಅದಕ್ಕೆ ಪ್ರತಿಕ್ರಿಯೆ ಕೊಡುವ ವಿಧಾನಕ್ಕೂ ಇರುವ ಸಂಬಂಧ ಇವೆಲ್ಲವನ್ನೂ ಬಳಸಿಕೊಂಡು ಕೊಡುವ ಅನುಭವವನ್ನು ಧ್ವನಿ ಸಂಯೋಜನೆ ಎನ್ನಬಹುದಾಗಿದೆ.
Categories: Technical writings
ಚಿತ್ರ ಹಾಗೂ ಧ್ವನಿ (ಭಾಗ - ೩)
March 8, 2008 · No Comments
ಈ ಭಾಗದಲ್ಲಿ ಸಿಂಕ್-ಸೌನ್ಡ್ ಅಥವಾ ಚಿತ್ರೀಕರಣ ಸ್ಥಳದಲ್ಲಿಯೇ ಧ್ವನಿ ಮುದ್ರಿಸಿಕೊಳ್ಳುವ ವಿಧಾನದ ಕುರಿತು ಎರಡು ಮಾತು. ಭಾರತದಲ್ಲಿ ಹೆಚ್ಚಿನ ಚಿತ್ರಗಳು ಇಂದಿಗೂ ಡಬ್ಬಿಂಗ್ ಪ್ರಕ್ರಿಯೆಯ ಮೂಲಕವೇ ಮಾತುಗಳನ್ನು ಹೊಂದುತ್ತವೆ. ಆದರೆ ಹೊರದೇಶಗಳಲ್ಲಿ ಇಂದು ಹೆಚ್ಚಿನ ಚಿತ್ರಗಳು ಚಿತ್ರೀಕರಣ ಸಂದರ್ಭದಲ್ಲೇ ಮುದ್ರಿಸಿಕೊಂಡ ಧ್ವನಿಯನ್ನೇ ಅಂತಿಮ ತೆರೆಯಲ್ಲೂ ಬಳಸಿಕೊಳ್ಳುತ್ತಾರೆ. ಇದರ ಸಾಧ್ಯತೆ, ಬಾದ್ಯತೆ ಹಾಗೂ ನಮ್ಮಲ್ಲಿನ ವಿಧಾನಕ್ಕೂ ಇತರೆಡೆಯಲ್ಲಿನ ವಿಧಾನಗಳಿಗೂ ಇರುವ ವ್ಯತ್ಯಾಸ ನೋಡೋಣ.ಚಿತ್ರೀಕರಣ ಸ್ಥಳದಲ್ಲಿ ಮುದ್ರಿಸಿಕೊಂಡ ಧ್ವನಿಯ ಗುಣಗಳೇನು? ಅಲ್ಲಿ ನಟ ತಾನು ಬಳಸಿರುವ ಧ್ವನಿ ಏರಿಳಿತಗಳನ್ನು ಒಂದು ಸ್ಟುಡಿಯೋದಲ್ಲಿ ಮತ್ತೆ ಅಭಿನಯಿಸುವುದಕ್ಕೂ ಸ್ಥಳದಲ್ಲೇ ಅಭಿನಯಿಸಿದ ಧ್ವನಿಗಳಿಗೂ ವ್ಯತ್ಯಾಸ ಬಂದೇ ಬರುತ್ತದೆ. ಸ್ಥಳದಲ್ಲಿ, ನಟನು ಅಲ್ಲಿನ ಪರಿಸ್ಥಿತಿಗಳಿಂದ ಪ್ರೇರಿತನಾಗಿ ನೀಡಿರುವ ಧ್ವನಿಯ ಏರಿಳಿತಗಳು, ನಿಂತ್ರಿತ ಸ್ಟುಡಿಯೋದ ಒಳಗೆ ನೀಡುವುದು ಸ್ವಲ್ಪ ಕಷ್ಟ. ಆದರೆ ಇದನ್ನು ಒಂದು ಗುಣವಾಗಿಯೂ ನಾವು ನೋಡಬಹುದು. ಚಿತ್ರೀಕರಣ ಸ್ಥಳದಲ್ಲಿ ಇದ್ದಿರಬಹುದಾದ ಪರಿಸ್ಥಿತಿಗಳಿಂದಾಗಿ ನಟನ ಧ್ವನಿಯಲ್ಲಿ ಆಗಿರಬಹುದಾದ ತೊಂದರೆಗಳನ್ನು ಸರಿಪಡಿಸಿಕೊಳ್ಳಲು ಸ್ಟುಡಿಯೋದಲ್ಲಿ ಮಾತುಜೋಡಣೆಯ ಸಂದರ್ಭ ಒಂದು ಅವಕಾಶ ಎಂದೂ ನಾವು ಅಂದುಕೊಳ್ಳಬಹುದು.
Categories: Technical writings