ಗೆಳೆಯರೇ,
ಗುಬ್ಬಚ್ಚಿಗಳು ಚಿತ್ರವು ಧ್ವನಿ ಮಿಶ್ರಣವನ್ನು ಮುಗಿಸಿಕೊಂಡಿದೆ. ನೋಡುತ್ತಾ… ನೋಡುತ್ತಾ… ಆರು ತಿಂಗಳುಗಳೇ ಉರುಳಿವೆ ಮತ್ತು ನನ್ನ ಗುಬ್ಬಚ್ಚಿಗಳು ರೆಕ್ಕೆ ಬಲಿತು ಹಾರಲು ತಯಾರಾಗಿ ನಿಂತಿವೆ. ಮರಿಗಳು ಮುದ್ದಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮನೆಯಂಗಳಕ್ಕೆ ಹಾರಿ ಬಂದು ನಿಮ್ಮ ಕಿಟಕಿಯ ಮೇಲೆ ಕೂರಲಿವೆ. ಅವನ್ನು ನೋಡಿ ನಿಮ್ಮ ಮನಕ್ಕಿಷ್ಟು ಮುದ ಸಿಗುತ್ತದೆ ಎಂಬ ಆಶಯ ನನ್ನದು ಮತ್ತು ನನ್ನ ತಂಡದ್ದು… ನಾಳೆ ರಾತ್ರಿ ನಾನು ಹಾಗೂ ಕ್ಯಾಮರಾಮ್ಯಾನ್ ವಿಕ್ರಂ ಶ್ರೀವಾಸ್ತವ, ಚೆನ್ನೈ ಪ್ರಸಾದ್ ಲ್ಯಾಬ್‍ನಲ್ಲಿ ವರ್ಣ ಸಂಸ್ಕರಣಕ್ಕಾಗಿ ಹೋಗುತ್ತಿದ್ದೇವೆ. ಹಾಗಾಗಿ ಇನ್ನೊಂದು ವಾರ ಬ್ಲಾಗು ಬರಹದಿಂದ ನಾನು ದೂರ. ಆದಷ್ಟು ಬೇಗ ಮತ್ತೆ ಸಿಗೋಣ…
ಇಂತು ನಿಮ್ಮವ
ಅಭಯ ಸಿಂಹ
ಬೆಂಗಳೂರಿಗೆ ಬಂದಾಗ ಪೋನು ಮಾಡಿದರೆ ಚೆನ್ನಾಗಿತ್ತು. ಸಾಧ್ಯವಾದರೆ ಕಸ್ತೂರಿ ಕಚೇರಿಗೂ ಭೇಟಿ ಇರಲಿ.
Abhay,
Wish you all the best!!
Keshav
ಗುಬ್ಬಚ್ಚಿಗಳು ಪ್ರಿನ್ಟ್ ತಯಾರಾಗಿದೆ. ನಾಳೆ ಚಿತ್ರದ ಸೆನ್ಸಾರ್! ಮತ್ತೆ ನಿಮ್ಮ ಮುಂದೆ ತರುತ್ತಿದ್ದೇವೆ.
– ಅಭಯ
ಗುಬ್ಬಚ್ಚಿಗಳು ಸೆನ್ಸಾರ್ ಆಯಿತು. ಯಾವುದೇ ಬದಲಾವಣೆ ಮಾಡದೇ, ಚಿತ್ರ ಚೆನ್ನಾಗಿದೆ ಎಂಬ ಪ್ರೋತ್ಸಾಹದೊಡನೆ ಸೆನ್ಸಾರ್ ಸಮಿತಿ ಒಪ್ಪಿದೆ. ಚಿತ್ರ ಅಲ್ಲಿಗೆ ತಯಾರಾಗಿ ಪ್ರದರ್ಶನಕ್ಕೆ ಸಿದ್ಧವಾದಂತಾಗಿದೆ. !
ಅಭಯವರೇ,
ಇಂತ ಒಂದು ಚಿತ್ರ ನಿರ್ಮಿಸಲು ಏಷ್ಟು ಖರ್ಚಾಯಿತು ಅಂತ ನಮಗೇ ತಿಳಿಸುತ್ತಿರಾ(ನಿಮಗೆ ಹೇಳಲು ಅಭ್ಯಂತರವಿಲ್ಲದಿದ್ದರೇ.)
ಪ್ರಿಯ ಸುಮ್ಮಕಿರ್ಲ್,
ಇಂಥಾ ಒಂದು ಚಿತ್ರ ನಿರ್ಮಿಸಲು ಎಷ್ಟು ಖರ್ಚಾಯಿತು ಎನ್ನುವುದಕ್ಕೆ ನಿರ್ದಿಷ್ಟ ಉತ್ತರ ಕೊಡುವುದು ತೀರಾ ಕಷ್ಟ (ನಾನು ಹೇಳಲು ಬಯಸದೇ ಹೀಗೆ ತಪ್ಪಿಸಿಕೊಳ್ಳುತ್ತಿದ್ದೇನೆ ಎಂದು ದಯವಿಟ್ಟು ಭಾವಿಸಬೇಡಿ) ಆದರೆ ಕಡಿಮೆ ಎಂದರೂ ಸುಮಾರು ೧೫ ಲಕ್ಷದಿಂದ ಹಿಡಿದು (ಇದರಲ್ಲಿ ತಾಂತ್ರಿಕ ವಿಭಾಗ, ಕಲಾವಿದರು ಇತ್ಯಾದಿ ಉಚಿತವಾಗಿ ಕೆಲಸ ಮಾಡಿದಲ್ಲಿ) ೮೦ ಲಕ್ಷದವರೆಗೂ ಖರ್ಚು ಬರಬಹುದು (ಸೂರಿ – ದುನಿಯಾ ೮೦ ಲಕ್ಷದಲ್ಲಿ ಮಾಡಿದ್ದರು ಎಂದು ಕೇಳಿದ್ದೆ) ಮತ್ತೆ ಬಜೆಟ್ ಎನ್ನುವುದು ಸಿಕ್ರಿಪ್ಟ್ ಮೇಲೆ ತುಂಬಾ ಅವಲಂಬಿಸಿದೆ. ಮತ್ತೆ ಕೆಲವೊಮ್ಮೆ ಸ್ಕ್ರಿಪ್ಟ್ ಬಜೆಟ್ ಮೇಲೆ ಅವಲಂಬಿಸಿರತ್ತದೆ! (ಹಣ ಇದ್ದರೆ, ಸಿನೆಮಾದ ಕೆಲವು ಭಾಗ ಸಿಂಗಪುರದಲ್ಲಿ ಚಿತ್ರಿಸಬಹುದಾಗಿದ್ದರೆ, ಹಣ ಇಲ್ಲದಿದ್ದರೆ, ಪಾತ್ರಗಳು ಸಿಂಗಪುರಕ್ಕೆ ಹೋದಂತೆ ಬೆಂಗಳೂರಿನ ಕಾಫಿ ಹೌಸಿನಲ್ಲಿ ಇಬ್ಬರು ಕುಳಿತು ಮಾತನಾಡಿದಂತೆ ಮಾಡಿ ಅಷ್ಟೇ ಸಹಜವಾಗಿ, ಸಂವಹನ ಸಾಧ್ಯ ಅಭಿವ್ಯಕ್ತಿ ಹಣದ ಬಂಧಿಯಲ್ಲಿ ನೆನಪಿರಲಿ) ಹಾಗಾಗಿ ನಿಮ್ಮ ಪ್ರಶ್ನೆಗೆ ಉತ್ತರ ಕಷ್ಟ ಸರ್.
ನಿಮ್ಮ ಚಿತ್ರ ನಮಗೆ ಮನರಂಜನೆ ಕೊಡುತ್ತಾ ಸಾರ್? ನಿಮ್ಮ ಮಾತಲ್ಲಿ ನಿಮ್ಮ ಚಿತ್ರದ ಬಗ್ಗೆ ಏರಡು ಮಾತುಗಳು ಪ್ಲೀಜ್.
ನಾನು ಸಿನೆಮಾ ಮಾಡಿದ್ದೇನೆ… ಮನರಂಜನೆ ಸಿಗುತ್ತಾ ಎನ್ನುವುದು ನಿಮಗೆ ಬಿಟ್ಟದ್ದು. ಇನ್ನು ಎರಡು ಮಾತು ಏನು? ಒಂದು ಚಿತ್ರ ಸಾವಿರ ಮಾತುಗಳಿಗೆ ಸಮವಲ್ಲವೇ? ನೀವೇ ನೋಡಿ… ನಾನು ಹೇಳುವುದು ಬೇಡ…