ಬೆಂಗಳೂರಿನ ಕ್ರೈಸ್ಟ್ ಕಾಲೇಜು ಪ್ರತಿವರುಷ ನಡೆಸುವ ವಿದ್ಯಾರ್ಥಿ ಕವನ ಸ್ಪರ್ಧೆಯಲ್ಲಿ ಈ ಬಾರಿ ನನ್ನ ಮಡದಿ ರಶ್ಮಿಯ ಕವನ ಆಯ್ಕೆಯಾಗಿತ್ತು. ಅದನ್ನಿಲ್ಲಿ ನಿಮಗಾಗಿ ಪ್ರಕಟಿಸಿದ್ದೇನೆ.
ಸುಡು ಸುಡುತ್ತಲಿತ್ತು
ನನ್ನ ಹೊಲಸು ದೇಹದೊಳಗೆ
ರಕ್ತ, ಹರಿದಾಡುತ್ತ ಎಲ್ಲೆ೦ದರಲ್ಲಿ
ಆಸೆಗಳ ಕೆರಳಿಸುತ್ತ.
ಯಾರು ಕೊಟ್ಟರು ನನಗೆ
ನಿನ್ನ ಹೆಣ್ತನದೊಳಗೆ
ಇಳಿವ ಹಕ್ಕನ್ನು?
ಯಾರು ಕೊಟ್ಟರು ನಿನಗೆ
ನನ್ನ ದಾಹದ ಬಿ೦ದು
ನಿನ್ನೊಡಲ ಗೂಡಿನಲಿ
ಮಿಸುಕಾಡಿದರೂ
ಹಿಸುಕುವ ಹಕ್ಕನ್ನು !
ರಕ್ತ ಮಾ೦ಸಗಳಿ೦ದ ರಚಿಸಲ್ಪಟ್ಟ
ಮನುಷ್ಯನೆ೦ಬ ನಾನು, ‘ಸುಡುವಿಕೆ’ಯ ಬೇಗುದಿಯೊಳಗೆ
ಬೆ೦ದು ಹೋಗಿದ್ದೇನೆ, ನನ್ನೊಳಗೆ ನಾನೇ ಬ೦ಧಿಯಾಗಿದ್ದೇನೆ.
ಹೆಣ್ಣು ನೀನು ! ಪ್ರಕ್ರುತಿಯ ಅಪರಾವತಾರವ೦ತೆ,
ಸುಟ್ಟುಬಿಡು ಹೀಗೆನ್ನ ಮುಕ್ತಗೊಳಿಸು..
ಬ್ರದರ್ ಪದ್ಯ ಚಂದ ಅದ, ಪದ್ಯ ಬರದ ವೈಣಿ ಅವರಿಗೂ ಅದನ್ನ ಓದಿಲಿಕ್ಕ ನೀಡಿದ ನಿಮ್ಗೂ ಧನ್ಯವಾದಗಳು
– ನಾಗು, ತಳವಾರ್.
Hi, I Just wen through yo blog an i liked yo poem…All d Best
Abhay, You had not informed Mrs. Rashmi is also a creative person like you. Convey my wishes to Rashmi. Wish you both good luck
Hey… sure sir… i will surely do that… thanks to you… 🙂