ಮಿಲಿಯನೇರ್‌ಗಳ ಪ್ರಶಸ್ತಿ ಹಾಗೂ ಸ್ಲಮ್ ಡಾಗ್


ವಾಲ್ಟರ್ ಮರ್ಚ್

‘ಸ್ಲಂ ಡಾಗ್ ಮಿಲಿಯನೇರ್’ ಬಗ್ಗೆ ಇದೇ ಬ್ಲಾಗಿನಲ್ಲಿ ಹಿಂದೆ ನಾನು ಬರೆದಿದ್ದ ವಿಶ್ಲೇಷಣೆಯ ಕೆಲವು ಭಾಗಗವಳನ್ನು ಮತ್ತೆ ಪರಿಷ್ಕರಿಸಿ, ಒಂದಷ್ಟು ಸೇರಿಸಿ ಒಂದಷ್ಟು ಕಳೆದು ೧ ಮಾರ್ಚ್ ೨೦೦೯ (ಆದಿತ್ಯವಾರದ) ಉದಯವಾಣಿ ಸಾಪ್ತಾಹಿಕ ಪುರವಣಿಗೆ ಬರೆದ ಲೇಖನ ಇದು. ಆಸ್ಕರ್ ಪ್ರಶಸ್ತಿ ಬಂದ ಮುನ್ನೆಲೆಯಲ್ಲಿ ಈ ಲೇಖನ.

ಹಿಂದೆ ಒಮ್ಮೆ ಮೂರು ಬಾರಿ ಆಸ್ಕರ್ ಪಡೆದಿರುವ ವಾಲ್ಟರ್ ಮರ್ಚ್ ಎನ್ನುವ ಸಂಕಲನಕಾರರನ್ನು ಭೇಟಿಯಾಗಿದ್ದೆ. ಅವರು ಗಾಡ್ ಫಾದರ್ ಎನ್ನುವ ಕ್ಲಾಸಿಕ್ ಸಿನೆಮಾದ ಸಂಕಲನಕಾರರು ಹಾಗೂ ಧ್ವನಿ ಸಂಯೋಜಕರು. ಅವರನ್ನು ನೋಡುವುದೇ ಒಂದು ಪುಣ್ಯದ ವಿಷಯ ನನಗೆ ಆಗ. ಆ ವ್ಯಕ್ತಿ ತುಂಬಾ ತಿಳುವಳಿಕೆ ಉಳ್ಳವರು, ಸಜ್ಜನ. ಅಜ್ಜ ಮೊಮ್ಮಕ್ಕಳೊಂದಿಗೆ ಕೂರುವಂತೆ ನಮ್ಮೊಂದಿಗೆ ಕುಳಿತು ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು, ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. ಮುಂದೆ ಪ್ರಶ್ನೋತ್ತರ ಸಮಯ ಬಂದಾಗ ನಾನು, ಸರ್, ಆಸ್ಕರ್ ಸಿಗುವುದು ಒಂದು ಅವಿಸ್ಮರಣೀಯ ಅನುಭವವಲ್ಲವೇ? ಎಂದು ಕೇಳಿದೆ. ಅವರು ಸಣ್ಣಕೆ ನಕ್ಕರು.
“ಮೊದಲ ಬಾರಿ ನಂಬಲಾರದಷ್ಟು ಸಂತಸವಾಯಿತು. ಎರಡನೇ ಬಾರಿ ಬಹಳ ಸಂತೋಷವಾಯಿತು. ಮೂರನೇ ಬಾರಿ ಸಂತೋಷವಾಯಿತು… ಮತ್ತೆ… ಹ… ಹ್ಹ…
“ಮತ್ತೆ?! ಏನಾಯ್ತು ಸಾರ್?”
“ಮುಂದಿನ ಬಾರಿ ನಾನು ಆಯ್ಕೆ ಸಮಿತಿಯಲ್ಲಿದ್ದೆ. ಅಲ್ಲಿ ಅವರು – ಇವನಿಗೆ ಕಳೆದ ವರ್ಷ ಕೊಟ್ಟಿದ್ದೇವೆ. ಈ ವರ್ಷ ಬೇಡ. ಅವನು ಪಾಪ ಸುಮಾರು ವರ್ಷಗಳಿಂದ ಕಾಯುತ್ತಿದ್ದಾನೆ. ಅವನಿಗೆ ಕೊಡೋಣ ಹೀಗೆ ಮಾತನಾಡಿಕೊಂಡು ಪ್ರಶಸ್ತಿಗಳನ್ನು ನಿರ್ಧರಿಸುತ್ತಿದ್ದರು. ಇದನ್ನು ಕಂಡು ನನಗೆ ಬಂದ ಪ್ರಶಸ್ತಿಗಳ ಬಗ್ಗೆ ಗೌರವವೇ ಹೋಯಿತು”
ನಾನು ಬೆಕ್ಕಸ ಬೆರಗಾಗಿದ್ದೆ! ಆಸ್ಕರ್ ಅಂದರೆ ಇಷ್ಟೇನಾ? ಮತ್ತೆ ಯಾಕೆ ನಮ್ಮಲ್ಲಿ ಈ ಆಸ್ಕರ್, ಗೋಲ್ಡನ್ ಗ್ಲೋಬ್ ಬಗ್ಗೆ ಇಷ್ಟೊಂದು ವ್ಯಾಮೋಹ?

ಅಕಾಡಮಿ ಪ್ರಶಸ್ತಿಗಳು ಅಥವಾ ಜನಪ್ರಿಯವಾಗಿ ಕರೆಯುವಂತೆ ಆಸ್ಕರ್ ಪ್ರಶಸ್ತಿಗಳು ಅಕಾಡಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸ್ (ಎ.ಎಮ್.ಪಿ.ಎ.ಎಸ್) ಮೂಲಕ ವರ್ಷಂಪ್ರತಿ ನಿರ್ದೇಶಕರು, ನಾಟರು, ಬರಹಗಾರರು ಹೀಗೆ ಚಲನಚಿತ್ರರಂಗದ ಕೆಲಸಗಾರರನ್ನು ಪ್ರೋತ್ಸಾಹಿಸಲು ನೀಡಲಾಗುತ್ತದೆ. ಈ ಪ್ರಶಸ್ತಿಯ ಕಲ್ಪನೆ ಮೆಟ್ರೋ ಗೋಲ್ಡ್ವಿನ್ ಮೇಯರ್ ಸ್ಟೂಡಿಯೋದ ಮಾಲಿಕ ಲೂಯಿಸ್ ಬಿ. ಮೇಯರ್‌ರದ್ದು. ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ೧೯೨೯ರ ಮೇ ೧೬ರರಂದು ಏರ್ಪಡಿಸಲಾಗಿತ್ತು.

‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರಕ್ಕೆ ಕೊನೆಗೂ ಆಸ್ಕರ್ ಪ್ರಶಸ್ತಿ ಬಂತು! ಭಾರತದ ಎ.ಆರ್. ರೆಹಮಾನ್, ರಸೂಲ್ ಪುಕುಟಿ ಹಾಗೂ ಗುಲ್ಜಾರರಿಗೆ ಅಕಾಡಮಿ ಪ್ರಶಸ್ತಿ ಒಲಿಯಿತು. ಲಾಸ್ ಆಂಜಲೀಸಿನ ಕೊಡ್ಯಾಕ್ ರಂಗಮಂದಿರದಲ್ಲಿ ಹಾರಿದ ಸಂತಸದ ಧೂಳು ನೆಲಕ್ಕಿಳಿಯುತ್ತಿರುವಾಗ, ಭಾರತ ಸರಕಾರ ಅಕಾಡಮಿ ಪ್ರಶಸ್ತಿ ವಿಜೇತರಿಗೆ ತೆರಿಗೆ ವಿನಾಯಿತಿ, ಬಹುಮಾನದ ಸುರಿಮಳೆ ಇತ್ಯಾದಿಗಳನ್ನು ಘೋಷಿಸುತ್ತಿರುವಾಗ, ದಿನಪತ್ರಿಕೆಗಳು, ವಾರಪತ್ರಿಕೆಗಳು ನಿಧಾನಕ್ಕೆ ಸಮಾಧಾನಗೊಳ್ಳುತ್ತಿರುವ ಸಂದರ್ಭದಲ್ಲಿ ಮತ್ತೆ ಸ್ಲಂಡಾಗ್ ಬಗ್ಗೆ ಬರೆಯುತ್ತಿದ್ದೇನೆಂದು ಬೇಸರಿಸದಿರಿ. ಅಲ್ಲಿ-ಇಲ್ಲಿ ಕೇಳಿಬರುವ ಸಣ್ಣ ಸಣ್ಣ ವಾದ-ವಿವಾದ, ಅಲ್ಲ-ಸಲ್ಲಗಳನ್ನು ಒಟ್ಟು ಹಾಕುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಇಲ್ಲಿ.

ಮೊದಲಿಗೆ ಅಕಾಡೆಮಿ ಪ್ರಶಸ್ತಿಗೆ ಇಷ್ಟು ಮಹತ್ವ ಏಕೆ? ಏಕೆಂದರೆ ಮೊದಲನೆಯದಾಗಿ ಇದು ಅಮೇರಿಕಾ ನೀಡುವ ಅತ್ಯಂತ ದೊಡ್ಡ ಪ್ರಶಸ್ತಿ! ಸರಿ, ಹಾಗಾದರೆ ಏನು ಎನ್ನುತ್ತೀರಾ? ಹೊರದೇಶದ ಚಿತ್ರಗಳಿಗೆ ಅಲ್ಲಿ ಇರುವುದು ಕೇವಲ ಒಂದು ಪ್ರಶಸ್ತಿ. ಭಾರತೀಯ ಚಿತ್ರರಂಗದಿಂದ ಆ ವಿಭಾಗದಲ್ಲೂ ಪ್ರಶಸ್ತಿಯನ್ನು ಪಡೆದಿಲ್ಲ ಎನ್ನುವುದು ಸತ್ಯವಾದರೂ, ಇಡೀ ಪ್ರಶಸ್ತಿಯಲ್ಲಿ ಕೇವಲ ಒಂದು ವಿಭಾಗಕ್ಕೆ ಭಾರತ ಸಹಿತ ಇತರ ದೇಶಗಳು ಸ್ಪರ್ಧಿಸಲು ಸಾಧ್ಯವಿರುವುದು. ಉಳಿದಂತೆ, ಅಕಾಡೆಮಿ ಪ್ರಶಸ್ತಿಗಳು ಸಂಪೂರ್ಣವಾಗಿ ಅಮೇರಿಕಾದ ಚಿತ್ರಗಳಿಗೆ ಅವರು ಕೊಡುವ ಪ್ರಶಸ್ತಿ. ಇನ್ನು ಅಮೇರಿಕಾದ ಚಿತ್ರರಂಗವನ್ನು ಗಮನಿಸಿ ನೋಡೋಣ. ಅಲ್ಲಿನ ಚಿತ್ರರಂಗ ಸ್ಟೂಡಿಯೋ ಸಿಸ್ಟಮ್ ಮೂಲಕ ನಡೆಯುವಂಥಾದ್ದು. ಅಂದರೆ ಒಂದು ಹತ್ತು ದೊಡ್ಡ ಕಾರ್ಖಾನೆಗಳಿಂದ ಬಂದ ಮಾಲೇ ಇಡೀ ಹಾಲಿವುಡ್. ಅವುಗಳನ್ನು ಬಿಟ್ಟು ಅಮೇರಿಕಾದಲ್ಲಿ ಚಿತ್ರ ನಿರ್ಮಾಣ ಬಹುತೇಕ ಸಾಧ್ಯವೇ ಇಲ್ಲ. ಹಾಗಾಗಿ ಅಲ್ಲಿ ಇಂಡಿಪೆಂಡೆಂಟ್ ಸಿನೆಮಾ ಎನ್ನುವುದನ್ನು ನಾವಿಲ್ಲಿ ಆರ್ಟ್ ಸಿನೆಮಾ ಎನ್ನುವ ಚಿತ್ರಗಳಿಗೆ ಸಮನಾಗಿ ಕಾಣಬಹುದು. ಉಳಿದದ್ದೆಲ್ಲಾ ಮುಖ್ಯವಾಹಿನಿಯ ಚಿತ್ರಗಳೇ. ಹೀಗೆ ಒಂದು ಹತ್ತು ಜನರೇ ಸ್ಪರ್ಧಿಸುತ್ತಿರುವಾಗ ಅಲ್ಲಿನ ಪ್ರಶಸ್ತಿಗಳ ಹಿಂದೆಯೂ ಅವರ ಬೇಕು ಬೇಡಗಳು ನಡೆದೇ ನಡೆಯುತ್ತವೆ. ಭಾರತದಲ್ಲೂ ನಾವು ಈ ಕ್ರಮವನ್ನು ಕಂಡವರೇ. ಇಷ್ಟರಲ್ಲಾಗಲೇ ಆಸ್ಕರ್ ಎಂದರೆ ಅದು ಕೇವಲ ಕಲಾತ್ಮಕ ಹಿರಿಮೆಗೆ ಸಿಗುವ ಗೌರವವಲ್ಲ ಎನ್ನುವ ವಾಸನೆ ಬಂದಿರಬಹುದು.

ಭಾರತ ಇತ್ತೀಚೆಗೆ ಅಕಾಡಮಿ ಪ್ರಶಸ್ತಿಯ ಅತ್ಯಂತ ಸಮೀಪಕ್ಕೆ ಹೋಗಿರುವುದು ಅಮೀರ್ ಖಾನ್ ನಟನೆಯ ‘ಲಗಾನ್’ ಚಿತ್ರದ ಸಂದರ್ಭದಲ್ಲಿ. ಆ ಸಮಯದಲ್ಲಿ ಗಮನವಿಟ್ಟು ಗಮನಿಸಿದ್ದರೆ ನಿಮಗೆ ತಿಳಿಯುತ್ತದೆ. ಅಕಾಡಮಿ ಪ್ರಶಸ್ತಿಯ ನಿರ್ಣಯದ ಸಮಯದಲ್ಲಿ ಚಿತ್ರ ತಂಡ ಅಲ್ಲಿಗೆ ಹೋಗಿ ತಮ್ಮ ಚಿತ್ರದ ಪರ ಪ್ರಚಾರ ಮಾಡಲು ಅಧಿಕೃತ ಅವಕಾಶವಿತ್ತು. ಇಲ್ಲಿಂದ ಅಶುತೋಶ್ ಗೋವರಿಕರ್, ಅಮೀರ್ ಖಾನ್ ಸಹಿತ ಅನೇಕರು ಹೋಗಿ ತಮ್ಮ ಚಿತ್ರದ ಪರವಾಗಿ ಪ್ರಚಾರ ಮಾಡಿ, ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿ ಪ್ರಶಸ್ತಿಗೆ ಹಕ್ಕುದಾರನಾಗಲು ತಮ್ಮ ಉಮೇದುವಾರಿಕೆಯನ್ನು ತೋರಿಸಿಕೊಂಡಿದ್ದರು. ಇದೆಲ್ಲವೂ ಅಧಿಕೃತವಾಗಿಯೇ ನಡೆದ ವಿಷಯಗಳು. ಅಂದರೆ ಅಲ್ಲಿ ಗುಣಮಟ್ಟಕ್ಕೆ ಬೆಲೆಯೇ ಇಲ್ಲವೇ? ಹಾಗೇನಿಲ್ಲ. ಖಂಡಿತಾ ಪ್ರಶಸ್ತಿ ಗೆಲ್ಲುವ ಚಿತ್ರಗಳು ಗುಣದಲ್ಲಿ ಒಂದು ಮಟ್ಟ ಇರಲೇ ಬೇಕು. ಆದರೆ ಆ ವರುಷ ಬಂದ ಚಿತ್ರಗಳಲ್ಲಿ ನಿಜವಾದ ಅತ್ಯುತ್ತಮ ಚಿತ್ರ ಅದಾಗಿರಬೇಕಿಲ್ಲ.

ಅದಂತಿರಲಿ, ಈಗ ನೇರ ಸ್ಲಂ ಡಾಗ್ ಮಿಲಿಯನೇರ್ ಚಿತ್ರಕ್ಕೇ ಬರೋಣ. ಈ ಚಿತ್ರ ಪ್ರಶಸ್ತಿಗಳನ್ನು ಪಡೆಯಲು ಆರಂಭಿಸುತ್ತಿರುವಾಗ ನಿಧಾನಕ್ಕೆ ಪ್ರಚಾರವನ್ನೂ ಪಡೆಯುತ್ತಾ ಬಂತು. ಚಿತ್ರ ಬಿಡುಗಡೆಯಾಗುವ ಹೊತ್ತಿಗೆ ಅದು ಅನೇಕ ವಿವಾದಗಳಿಗೂ ಗುರಿಯಾಯಿತು. ವಿವಾದ ಏನಿದ್ದರೂ ಭಾರತದಲ್ಲೇ ನಡೆದದ್ದು. ಸ್ಲಂಗಳಲ್ಲಿ ವಾಸಿಸುವವರನ್ನು ‘ನಾಯಿ’ ಎಂದು ಚಿತ್ರ ಕರೆದಿದೆ ಎಂದು ಅನೇಕರು ಬೊಬ್ಬಿಟ್ಟರೆ, ಭಾರತವನ್ನು ಸ್ಲಂಗಳ ದೇಶ ಎಂದು ಚಿತ್ರಿಸಿದ್ದಾರೆ ಎಂದು ಅನೇಕರು ಕೂಗಿಕೊಂಡರು. ಆದರೆ, ಚಿತ್ರದಲ್ಲಿ ತೋರಿಸಿರುವ ಸ್ಲಂಗಳಲ್ಲಿನ ಕಷ್ಟಗಳಿಗಿಂತ ಎಷ್ಟೋ ಹೆಚ್ಚಿನ ದುರ್ಗತಿಯಲ್ಲಿ ನಮ್ಮಲ್ಲಿ ಸ್ಲಂಗಳಲ್ಲಿನ ಜನ ಬದುಕುತ್ತಿರುವುದು ನಿಜವೇ ಆಗಿದೆ. ಚಿತ್ರದಲ್ಲಿ ತೋರಿಸಿರುವ ಪೋಲೀಸ್ ಕ್ರೌರ್ಯವೂ ನಿಜವೇ ಆಗಿದೆ. ಆದರೆ ಇವೆಲ್ಲವುಗಳ ಹೊರತಾಗಿ ಈ ಚಿತ್ರದಲ್ಲಿ ಅನೇಕ ಸಮಸ್ಯೆಗಳಿವೆ.
‘ಸ್ಲಂ ಡಾಗ್ ಮಿಲಿಯನೇರ್’ನಲ್ಲಿ, ಮುಂಬೈಯ ಸ್ಲಂಗಳಲ್ಲಾಡುವ ಅಲ್ಲಿನ ಕೊಚ್ಚೆಯಲ್ಲಿ ಈಜು ಹೊಡೆಯುವ ಪೋರನೊಬ್ಬ ‘ಹೂ ವಾಂಟ್ಸ್ ಟು ಬಿ ಅ ಮಿಲಿಯನೇರ್’ (ಇದರ ಭಾರತೀಯ ಅವತಾರವೇ ಕೋನ್ ಬನೇಗಾ ಕರೋಡ್ ಪತಿ) ಎಂಬ ಟೆಲಿವಿಷನ್ ಆಟದಲ್ಲಿ ಆಡಿ ಗೆಲ್ಲುವ ಕಥೆ ಇದೆ. ಇದು ಕಥೆಯ ಬೆನ್ನುಹುರಿ ಎನ್ನಬಹುದು. ಆ ಆಟದಲ್ಲಿ ಕೇಳುವ ಪ್ರತಿಯೊಂದು ಪ್ರಶ್ನೆಯೂ ಪರಸ್ಪರ ಸಂಬಂಧವಿಲ್ಲದವುಗಳಾದರೂ, ಹೇಗೆ ಆ ಸಂಗತಿಗಳು ವಿಚಿತ್ರ ಕಾರಣಗಳಿಂದಾಗಿ ಈ ಸ್ಲಂ-ಬಾಲಕನಿಗೆ ತಿಳಿಯಿತು ಎನ್ನುವುದು ಚಿತ್ರದ ಜೀವಾಳ. ಇಲ್ಲಿ ಸ್ಲಮ್ ಜೀವನದ ನಿಗೂಢ ಮಗ್ಗುಲುಗಳನ್ನು ಪರಿಚಯಿಸುತ್ತಲೇ ಜೀವನದಲ್ಲಿ ಒಂದು ಆಸೆಯನ್ನು ಹುಟ್ಟಿಸುವ ಪ್ರಯತ್ನ ನಡೆಯುತ್ತದೆ. ಕನಸುಗಳೇ ಇಲ್ಲದ ಸ್ಥಳದಲ್ಲಿ ಹುಟ್ಟಿ ನಾಯಿ ಸಮಾನ ಜೀವನವನ್ನು ನಡೆಸುತ್ತಿರುವವನೊಬ್ಬನ ಯಶೋಗಾಥೆ ಇದು.

ಆದರೆ ಚಿತ್ರದ ಕಥೆಯು ಒಟ್ಟಾರೆಯಾಗಿ ಒಂದು ಕಾಲ್ಪನಿಕ ಜಗತ್ತಿನಲ್ಲಿ ನಡೆಯುತ್ತದೆ. ಭಾರತೀಯರಾದ ನಾವು, ನಂಬಲಾರದ ವಿಷಯಗಳು ಈ ಚಿತ್ರದ ಕಥೆಗೆ ತಿರುವುಗಳನ್ನು ಕೊಡುವಲ್ಲಿ ಗಮನಾರ್ಹ ಭಾಗಗಳಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಕಥೆಯಲ್ಲಿ ಮೂಲಭೂತ ದೋಷಗಳು ಅನೇಕ ಇವೆ. ಮೊದಲನೆಯದಾಗಿ ‘ಕೋನ್ ಬನೇಗಾ ಕರೋಡ್ ಪತಿ’ ಎಂಬ ಆಟದಲ್ಲಿ ಈ ಹುಡುಗ ಆಡುತ್ತಿರುತ್ತಾನೆ. ಅದನ್ನು ದೇಶದಾದ್ಯಂತ ಜನರು ಕುತೂಹಲದಿಂದ ಕಾಯುತ್ತಿರುತ್ತಾರೆ. ಆದರೆ ನಿಜಜೀವನದಲ್ಲಿ ಈ ಆಟವು ಎಂದೂ ನೇರ ಪ್ರಸಾರದಲ್ಲಿ ನಡೆಯುವುದೇ ಇಲ್ಲ. ಅವೆಲ್ಲವೂ ಮೊದಲೇ ಚಿತ್ರೀಕರಿಸಿಕೊಂಡು ತೋರಿಸಲ್ಪಡುವ ಕಾರ್ಯಕ್ರಮಗಳು. ಈ ಗೇಮ್ ಶೋ ಪ್ರಪಂಚದ ಸುಮಾರು ೬೪ ದೇಶಗಳಲ್ಲಿ ಯಶಸ್ವಿಯಾಗಿ ನಡೆದಿದೆಯಂತೆ! ಎಲ್ಲೂ ನೇರಪ್ರಸಾರ ನಡೆದಿಲ್ಲ! ಇಲ್ಲಿಗೆ ಚಿತ್ರದಲ್ಲಿ ಕುತೂಹಲ ಕೆರಳಿಸಲು ಬಳಸಿರುವ ಅತಿ ದೊಡ್ಡ ಪರಿಕರವೇ ಸುಳ್ಳು ಎಂದಂತಾಗುತ್ತದೆ. ಅದಂತಿರಲಿ, ಅದನ್ನು ಕವಿಸಮಯ ಎಂದು ಕ್ಷಮಿಸಬಹುದು ಎನ್ನುತ್ತೀರೇ? ತೊಂದರೆಯೆಂದರೆ ಇಂಥಾ ಕವಿಸಮಯದ ಬಳಕೆ ಚಿತ್ರದುದ್ದಕ್ಕೂ ಢಾಳಾಗಿದ್ದು ಕಥೆಯನ್ನು ನಂಬುವುದೇ ಕಷ್ಟವಾಗುತ್ತದೆ. ಆದರೆ ಹೇಳಹೊರಟಿರುವ ಕಥೆ ವಾಸ್ತವದ ಹತ್ತಿರದ್ದು ಎನ್ನುವ ಪ್ರಯತ್ನವನ್ನು ಚಿತ್ರ ಮಾಡುತ್ತದೆ.

ಇನ್ನು ಚಿತ್ರದ ಮತ್ತೊಂದು ಪ್ರಮುಖ ತೊಂದರೆಯೆಂದರೆ ಭಾಷೆ. ಹಿಂದಿಯಲ್ಲಿ ರಾಮಾಯಣ ಪ್ರಸಾರವಾಗುವಾಗ “ರಾಮನ ಕಾಲದವರು ಹಿಂದಿಯಲ್ಲಿ ಸಂಭಾಷಿಸುತ್ತಿದ್ದರೇ?” ಎಂದು ಕುಹಕವಾಡಿದವರಿದ್ದರು. ಯಕ್ಷಗಾನದಲ್ಲಿ ದೇವೇಂದ್ರನೂ ಕನ್ನಡದಲ್ಲಿ ಮಾತನಾಡುತ್ತಾನೆ. ಇಲ್ಲೆಲ್ಲೂ ತೊಂದರೆ ಕೊಡದ ಭಾಷೆ ನಮಗೆ ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದಲ್ಲಿ ತೊಂದರೆ ಕೊಡುತ್ತದೆ. ಬಹುಷಃ ಎಲ್ಲಾ ಪಾತ್ರಗಳು ಒಂದೇ ರೀತಿಯಲ್ಲಿ ಇಂಗ್ಲೀಷಿನಲ್ಲಿ ಮಾತನಾಡಿದ್ದರೂ ನಮಗೆ ಈ ತೊಂದರೆ ಆಗುತ್ತಿರಲಿಲ್ಲ. ಆದರೆ ಇಲ್ಲಿ ಕೆಲವು ಪಾತ್ರಗಳು ಹಿಂದಿಯಲ್ಲಿ ಮಾತನಾಡುತ್ತವೆ. ಮತ್ತೆ ಕೆಲವು ಭಾರತೀಯ ಇಂಗ್ಲೀಷಿನಲ್ಲಿ ಮಾತನಾಡುತ್ತವೆ. ಹಾಗೂ ಮತ್ತೆ ಕೆಲವು ಪಾತ್ರಗಳು ಅಚ್ಚ  ಬ್ರಿಟೀಷ್ ಇಂಗ್ಲೀಷಿನಲ್ಲಿ ಮಾತನಾಡುತ್ತವೆ. ತಮಾಶೆಯೆಂದರೆ, ಚಿತ್ರದಲ್ಲಿ ಬರುವ ಯಾವುದೇ ಪಾತ್ರಕ್ಕೂ ನಿಜವಾಗಿ ಇಂಗ್ಲೀಷ್ ಮಾತೃಭಾಷೆಯಾಗಿರುವುದೇ ಇಲ್ಲ! ಪಾತ್ರಗಳು ನಮ್ಮ ಸುತ್ತ ಮುತ್ತಲಿನವೇ ಆಗಿದ್ದರೂ ಅವುಗಳ ಮಾತು, ಹಾವ-ಭಾವಗಳಿಂದಾಗಿ ಭಾರತದಲ್ಲಿ ಚಿತ್ರೀಕರಿಸಿರುವ ಯಾವುದೋ ಅಮೇರಿಕನ್ ಚಿತ್ರದಂತೆ ಭಾಸವಾಗುತ್ತದೆ. ಇದರಿಂದಾಗಿ ಚಿತ್ರದಲ್ಲಿ ಮನಸ್ಸು ಕೂರುವುದೇ ಇಲ್ಲ.

ಚಿತ್ರದಲ್ಲಿ ಹುಡುಗನಿಗೆ ಅವನ ಬಾಲ್ಯದ ಘಟನಾವಳಿಗಳಿಂದಾಗಿ ‘ಹೂ ವಾಂಟ್ಸ್ ಟು ಬಿ ಅ ಮಿಲಿಯನೇರ್’ ಆಟದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳು ಗೊತ್ತಿರುತ್ತವೆ ಎಂದು ಚಿತ್ರ ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತದೆ. ಆದರೆ ಆ ಸನ್ನಿವೇಷಗಳಲ್ಲಿ ಅವನಿಗೆ ಉತ್ತರ ಗೊತ್ತಾಗುವ ಪ್ರಕ್ರಿಯೆ ವಿಚಿತ್ರವಾಗಿಯೂ ಸಂಶಯಾಸ್ಪದವಾಗಿಯೂ ಇದೆ. ಮತೀಯ ಗಲಭೆಗಳ ನಡುವೆ ಒಬ್ಬ ಹುಡುಗ ರಾಮನ ವೇಷ ಧರಿಸಿ ಯಾಕೆ ನಿಂತಿರುತ್ತಾನೆ? ಇದು ಕನಸೇ ವಾಸ್ತವವೇ? ಮ್ಯಾಜಿಕ್ ರಿಯಲಿಸಂ ಎಂದಾದರೆ ಚಿತ್ರದಲ್ಲಿ ಬೇರೆಲ್ಲೂ ಯಾಕೆ ಅದರ ಪ್ರಸ್ತಾಪಗಳಿಲ್ಲ? ಒಬ್ಬ ಸ್ಲಂ ಹುಡುಗನ ಕೈಯಲ್ಲಿ ಕೋಲ್ಟ್ ೪೫ ಎಂಬ ಆಧುನಿಕ ರಿವಾಲ್ವರ್ ಹೇಗೆ ಬರುತ್ತದೆ? (ಯಾವುದೇ ಪುಟಗೋಸಿ ರೌಡಿಯ ಕೈಯಲ್ಲಿ ರಿವಾಲ್ವರ್ ಬರುವುದು ಸುಲಭವಲ್ಲ. ಹಾಗೆ ಬಂದರೂ ಅದು ಮೊದಲು ಯಾವುದೋ ದೇಸೀ ಮೇಕ್ ಆಗಿರುವುದು ಸಹಜ ಅಲ್ಲವೇ? ಅಷ್ಟಕ್ಕೂ ಇವನು ಬರೇ ಒಬ್ಬ ಸಣ್ಣ ಹುಡುಗ!) ಕಾಲ್ ಸೆಂಟರಿನಲ್ಲಿ ಬರೇ ಟೀ ಕೊಡುವ ಕೆಲಸ ಮಾಡಿದ್ದರಿಂದ ಒಬ್ಬಾತನಿಗೆ ಬ್ರಿಟೀಷ್ ಇಂಗ್ಲೀಷ್ ಕಲಿಯಲು ಸಾಧ್ಯವೇ? ಅಮೇರಿಕನ್ ದಂಪತಿಗಳು ಎಷ್ಟೇ ಕರುಣಾ ಮಯಿಗಳಾಗಿದ್ದರೂ, ಭಾರತದಲ್ಲಿ ಒಬ್ಬ ಹುಡುಗನಿಗೆ ಟಿಪ್ ಎಂದು ನೂರು ಡಾಲರ್ ನೋಟು ಕೊಟ್ಟಾರೇ? (ಅದೂ ಡಾಲರ್! ಹುಡುಗ ಪಾಪ ಅದನ್ನು ಹೇಗೆ ರೂಪಾಯಿಗೆ ಪರಿವರ್ತಿಸಿಕೊಳ್ಳುವುದು ಎನ್ನುವ ಪರಿವೆಯಾದರೂ ಅವರಿಗೆ ಬೇಡವೇ?!) ತಾಜ್ ಮಹಲ್ ನೋಡಲು ಬರುವ ವಿದೇಶೀಯರು ಅಲ್ಲಿನ ಒಬ್ಬ ಹುಡುಗನಿಂದ ಇದೊಂದು ಪಂಚತಾರಾ ಹೋಟೇಲ್ ಎಂದು ನಂಬುವಷ್ಟು ಮುಠಾಳರೇ? ಹೀಗೆ ಚಿತ್ರವು ಉದ್ದಕ್ಕೂ ಸಂಶಯಗಳನ್ನೂ ನಂಬಲರ್ಹವಲ್ಲವ ವಿಷಯಗಳನ್ನೂ ಕೊಡುತ್ತಾ ಸಾಗುತ್ತದೆ. ಎಲ್ಲಕ್ಕೂ ಕಳಶಪ್ರಾಯವಾಗಿ ಚಿತ್ರದ ಕೊನೆಯಲ್ಲಿ ಒಂದು ಹಿಂದಿ ಸಿನೆಮಾ ಕ್ರಮದ ಹಾಡು-ಕುಣಿತ! ಅಂದರೆ ಈ ಇಡೀ ಚಿತ್ರವೇ ಭಾರತೀಯ ಚಿತ್ರರಂಗದ ಮೇಲಿನ ಅಮೇರಿಕಾದ ನಿಲುವೇ?

ಎ.ಆರ್. ರೆಹಮಾನಿಗೆ ಎರಡೆರಡು ಆಸ್ಕರ್ ಬಂದದ್ದು ತುಂಬಾ ಸಂತೋಷದ ವಿಷಯ. ಭಾರತೀಯ ಮೊಟ್ಸಾರ್ಟ್ ಎಂದೇ ಹೊಗಳಲ್ಪಟ್ಟಿರುವ ಎ.ಆರ್. ರೆಹಮಾನ್ ಜಾಸ್, ರಾಪ್, ಬ್ಲೂಸ್, ವೆಸ್ಟರ್ನ್ ಕ್ಲಾಸಿಕಲ್, ಕ್ಲಾಸಿಕ್ ರಾಕ್, ಕರ್ನಾಟಿಕ್ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹೀಗೆ ಜಗತ್ತಿನಾದ್ಯಂತದಿಂದ ಶೈಲಿಗಳನ್ನು ಬಳಸುತ್ತಾ ಅಧ್ಬುತವನ್ನು ಸೃಷ್ಟಿಸುವ ಮಾಂತ್ರಿಕ. ಕಳೆದ ಒಂದು ದಶಕಕ್ಕೂ ಮೀರಿ ನಮ್ಮ ಕಿವಿಗಳಿಗೆ ಅಮೃತವನ್ನಿಕ್ಕಿದ ಸಂಗೀತ ನಿರ್ದೇಶಕ ಈತ. ಖಂಡಿತವಾಗಿಯೂ ಅಕಾಡೆಮಿ ಪ್ರಶಸ್ತಿ ಹಾಗೂ ಅದಕ್ಕಿಂತ ಮಿಗಿಲಾದವುಗಳಿಗೂ ಅರ್ಹನೇ. ಹಿಂದೀ ಚಿತ್ರರಂಗದ ಪರಿಚಯ ಇರುವವರಿಗೆ ರಸೂಲ್ ಪುಕುಟಿ ಹೆಸರು ಗೊತ್ತಿಲ್ಲದ ವಿಷಯವಲ್ಲ. ಪೂನಾದ ಎಫ್.ಟಿ.ಐ.ಐ ಪದವೀಧರರಾದ ಇವರು ಹಿಂದೀ ಚಿತ್ರರಂಗದ ಅತಿ ಗಣ್ಯ ಧ್ವನಿ ಸಂಯೋಜಕರಲ್ಲಿ ಒಬ್ಬರು. ಗುಲ್ಜಾರ್ ಕೂಡಾ ಭಾರತೀಯ ಚಿತ್ರರಂಗದ ಅನೇಕ ಪ್ರಮುಖ ಚಿತ್ರಗಳಿಗೆ ಸಾಹಿತ್ಯ ರಚಿಸಿದವರು. ಆದರೆ ವಿಚಿತ್ರವೆಂದರೆ ಇಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದರೂ, ಇವರೆಲ್ಲರೂ ಅಕಾಡಮಿ ಪ್ರಶಸ್ತಿ ಪಡೆಯಲು ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದವರೆಗೆ ಕಾಯಬೇಕಾಗಿದ್ದು ಈ ಪ್ರಶಸ್ತಿಯ ಧೋರಣೆಯ ಬಗ್ಗೆ ಸಂಶಯವನ್ನು ಉಂಟುಮಾಡುತ್ತದೆ. ಭಾರತಕ್ಕೆ ಅಕಾಡಮಿ ಪ್ರಶಸ್ತಿ ಬಂದಿರುವುದು ಸಂತೋಷದ ವಿಷಯವೇ. ಪಡೆದವರೆಲ್ಲರೂ ತುಂಬಾ ಅರ್ಹರೇ. ಆದರೂ ಈ ಪ್ರಶಸ್ತಿಯನ್ನು ಇನ್ನಿಲ್ಲದಂತೆ ಹೊಗಳುವಾಗ ಅದರ ಹಿಂದಿನ ರಾಜಕೀಯವನ್ನೊಮ್ಮೆ ಯೋಚಿಸುವುದು ಅಗತ್ಯ ಎನಿಸುತ್ತದೆ.

This entry was posted in Film Craft, Film reviews. Bookmark the permalink.

13 Responses to ಮಿಲಿಯನೇರ್‌ಗಳ ಪ್ರಶಸ್ತಿ ಹಾಗೂ ಸ್ಲಮ್ ಡಾಗ್

 1. harini ಹೇಳುತ್ತಾರೆ:

  Abhaya
  saaptahika sampada dalloo odidie. olleya lekana. prashsti vyaamoha beda allave….. oscaar istenaa ?
  namagella oscar bagge…prashasti baggenoo paascheemaatya raastradallu istenaaa… anta thilisideera… vandanegalu
  Harini

 2. sai ganesh ಹೇಳುತ್ತಾರೆ:

  ನಮಸ್ತೆ…

  ಒಳ್ಳೆಯ ಲೇಖನ… ಆಸ್ಕರ್ ನಲ್ಲಿ ಆಯ್ಕೆ ಪ್ರಕ್ರಿಯೆ ಹೀಗೆ ನಡೆಯುತ್ತದೆ ಎಂದು ತಿಳಿದಿರಲಿಲ್ಲ..! ಹೀಗೆ ನಡೆದರೆ ಮಾತ್ರ ಬೀದಿ ನಾಯಿ….ಥರದ ಚಿತ್ರಗಳಿಗೆ ಪ್ರಶಸ್ತಿ ಸಿಗುತ್ತದೇನೋ!..

  ಅಭಿನಂದನೆಗಳು

 3. Praveen Kavoor ಹೇಳುತ್ತಾರೆ:

  hi Abhaya
  Good article. Enjoyed it a lot. I was wondering about Oscar why it is so much hyped nice to get some real information and very good un-biased critic review I had read few review on Movie in Udayavani it was more like your fathers writings read 3-4 times some I understood, some still I’ve not understood “Kabbinada Kadalekaigalu”!! But this one I enjoyed …

 4. vin patil ಹೇಳುತ್ತಾರೆ:

  Dear writer,

  This is Vinayak (III yr of B.Tech). well, I happened to read ur article on Slum dog millionaire movie and the defects in it. Ur arguments seem logical but the fact is that except one or two ur questions do not make any sense. You seem to be quite expert in the area as you are a journalist, but i guess i make ceratin logical points to u. let me go from point to point.

  1) You say that Indian version of KBC or any other such type of shows are not live. Yes they might not be live shows. But they could be made in to live shows. There are many reality shows are happening today which are live. Probably all the game shows including KBC might have been pre telecasted in order to make it convinient for themselves and participants. But live show is not a hypothetical. so showing who wants to be a millionaire in movie as live is not hypothetical. When a cricket match can be shown live, why not a game show? And we can not guess that since KBC or any other game shows were not live, we can not make a game show live in future or can not show it as live in a movie. Danny Boyle might have taken the basic idea from KBC and with his creativity and other aspects, he has shown the game show as live. There is absolutely no sense in your arguments. If we just keep on following what others have done before, whats creativity then? Kannada films suffer because of same trend that they follow from movie to movie.

  2) Your question regarding the language, well again i dont think the language is any problem. You say that ceratin characters speak hindi and some in indian english and european english. I guess all indian characters speak indian english and i dont find any british accent. Only foreign tourists are shown speaking in european accent. Now let me come to main point. I think Danny Boyle has shown all child characters speaking hindi. Well if he would have shown them speaking english, it is more illogical than what u think now. All adult characters speak english, the main reason why the movie is made in english is to reach out at masses. If the movie would have been made in hindi, probably that would have been hit only in india but not in entire world. And u say that how could it be possible for a call center guy to learn british accent. Let me remind u that JAMAL MALIK ( Dev patel) speaks british english in indian accent. Majority of indians do that. In Goa, even a panwala or massagers speak good english with no grammar mistakes. The skill is developed from the enviornment in which they work. I have read many time some children and adults have even learnt to send e- mails while working in cyber cafe (even when they dont know proper english, and I am sure in india, majority can speak basic sentences in english). You cant question that how could a working child can learn to e-mail.

  If u have watched MUNGARU MALE, heroine’s house ( her place ) is some where near coorg. Ganesh and she come to JOG falls on bicycle. Can u believe that?. U know that it takes nearly 8-10 hours by bus to travel from coorg to shimogga. But we cant make this point to director because, the director’s intention might have been to showcase the beauty of JOG in a much different way than previous. Like that here, DANNY’s intention might have been to reach out to majority of people rather than only one nation.

  3) you say that american couple can not give 100 dollars as tip. And also ur doubt regarding exchange of currency to indian rupees. If u have watched another oscar nominee from India in 1988 or so ” SALAAM BOMBAY “, u would get answer for urself. I remember once GANESH after his Mungaru male was a big hit and also he was famous before that because of his commedy show, an old kannada woman ( from abroad ) who got so much of motherly afffectionate for him, kept calling him to come to her and be her son and look after her entire property. In the way u think, this can not happen, am i right? Because how can any one give away entire property to some one whom she knew only by a television show or a movie. In metro cities and tourists places like Agra tourists pay the tip in dollars. There are certain agents or persons who pay some money for dollars and get those dollars exchanged to indian rupees legally thus making more profits to themselves. I will give u a small example: If 1 dollar may fetch nearly 50 rs, the agents may give only 20 rs or so and when the currency is exchanged, naturally those agents get much more. This is very common in Bombay or anywhere else in metros. So its absolutely illogical to raise questions regarding exchange of currency and 100 dollar tip.

  4) And ur opinion regarding Taj mahal as a hotel, SALIM character getting a gun and appearance of a child dressed as RAM during communal clash also dont make much sense. I do agree to ur opnion that any one believing TAJ MAHAL as a hotel is illogical as it is a very popular monument. But if u have watched ABHISHEK BACHAN’s BUNTY AUR BUBLI, u will feel that Slum dog millionaire is better, because in that movie Abhishek and Rani cheat a billionaire saying that TAJ is for sale. Can u believe that? huh..! well rgarding appearance of RAM, if director would have shown a statue of RAM in a temple, then it would have been better rather than showing a child dressed as RAM. But again i ll give u a small example: In a any song sequence of any film, some part of shooting is done in one location with some dress, the other part and next one,,, so on,, migh be done with characters wearing some other costume and in a different country… we cant ask a question that how did characters change their costumes so early and how did they reach other country so fast..? can we..? no.. we need to understand the director’s intention that he wants to show the beauty of a location or beauty of costume etc They are realistic. here also, DANNY wanted to show how JAMAL and SALIM lost their mother and how they suffered due to communal clash.. thats all…!

  So these are my opinions and i guess i have given logical answers to ur questions. And at last i will mention another situation to term the word illogical and to highlight its meaning. If u have watched film KRISHH, in that Prity zinta is giving birth to the chid after 2 yrs of Hrithik Roshan ( Rohit character ) left India to work with nasiruddin shah…! this is illogical as its against the nature.. NO Woman can give birth after 2 yrs of impreganating. So this is illogical. But the sequences in SLUM DOG MILLIONAIRE are never illogical as they depict director’s creativity.

  Bye,
  with regards,
  VIN

 5. Abhaya Simha ಹೇಳುತ್ತಾರೆ:

  Dear Vinayak,

  Thanks for the mail. I am glad my write up made you take so much pain to write to me in such detail. Thanks once again for that. But let me my self clear on the points raised by you. And well, I am not a journalist but am a film maker my self. I am a graduate from the Film and Television Institute of India. (so a trained filmmaker my self) though I don’t claim that I am an expert and I understand everything just because I am from a film school, my arguments about Slum Dog come with substantial background in film studies. So let’s go point by point as dealt by you.

  1. About the KBC being live: There are some technical and logistical problems in telecasting a reality show live. Firstly all the reality shows are edited and not real time shoots. Most of them are also scripted! Cricket matches are also not totally live. They call it a differed telecast. The telecast of the match is about 2-3 minute last than the original match happening at the location. But it’s not impossible to have a live show (technically). So I am not saying that you can’t show a game show live. But don’t show KBC live because it’s a known fact. It’s not about doing what others have done, but twisting a fact. For me, the creativity would have been, creating a new game show similar to the KBC which according to the film was a live show. In that case, I wouldn’t have had problem in that point. When you base your story on something which is fictitious, say its fiction. Don’t try to simulate reality. There is no harm in creating an imaginary thing in film. But why make it look like a documentation when it is not? Constructing a ‘story’ is one thing and constructing a ‘news’ is another thing. I hope you get my point. And about Kannada film, I agree with you that they suffer from the lack of imagination no doubt about that. But there is a whole different angle to it which I don’t think we need to discuss right now. May be we can talk about it some other time.
  2. Language part: I have no problem if the film uses English or Hindi completely. But when you mix it in a not believable form then the problem starts. This is again a problem of simulated reality. It wouldn’t have harmed the film if you show all the characters spoke their mother tongue. Just for the wider reach if you use Engilsh, then you are not being true to the subject you are dealing with right? Again as written in my article, did Rama speak in Hindi? Did Tipu Sultan speak in Hindi? Did the people of Malgudi speak in Hindi? No still we are convinced because there is uniformity in the language usage. So the suspension of disbelieve works there and thus the brain negates the language change. That is a common practice in filmmaking. When you start changing the language, then you have to be extra careful about the language and dialects. If you see any good film even in Kannada (say any Kasaravalli film) they pay so much attention to the language and use the particular dialect to be truthful to the text. So my argument was to oppose the usage of language just as a tool to give the audience ‘India Flavor’. India is a living being not a flavor which can be added in to ice cream! And about Dev Patel’s English, there is a clear difference in accent to his earlier stages of life and his own. I don’t say a call center boy can’t learn English. But a call center chaiwala (as referred in the film) picking up a perfect accent is again far from possible. I don’t know if you have visited any call center or interacted with the workers there. But I have. So if you do explore their world, you would know, most of the call center workers too can’t speak perfect English (which Dev Patel speaks!) other than their routine usages. And for the Mungaru Male example. Yes I have seen it. (I haven’t liked that film which is not an issue here) but construction of ‘narrative’ is achieved nicely in the particular sequence you are talking about. He shows two places next to each other. But he never claims that it is Madikeri or it is jog. That is what I am trying to arrive at. There is a clear difference in creating a ‘real story’ and narrating a ‘real story’. And if you say that Danny did all this just to reach out to larger crowd, its nothing but popularity formula film!
  3. About the 100$ bill in the film: Your examples of how people can be generous are ok. I have no issues in that. But what I wrote in the article is how it doesn’t work in the context it is shown. I am aware of those agents you are talking about. But I am talking about the entire context it self.
  4. About the 5 star hotel called Taj: You have taken ’Bunty or Bubbly’ for an example. But again my friend you are confusing the ‘Reality’ and ‘Fiction’. ‘Slum Dog…’ claims that it’s a simulation of fiction. But Bunty of Bubly says it’s a make believe. When you define the game you are playing, the game played by that rule isn’t a problem. (I am not saying Bunty or Bubly is a great film) I will not continue this argument regarding the song sequence shooting in our films. Because again it’s the same thing. I would be repeating my self. If you want to understand it further, you can read article I have written in my blog about songs (www.abhaya.wordpress.com – ‘Indian films are nothing but song and dance’) that will address the problem you have with the fancy dress Ram.

  I agree with you when you speak about illogical things about Kannada or Hindi films. Yes they are there. But we cant compare them with some other film just to get an excuse to avoid a creative, constructive criticism on any piece of art. We don’t discuss ‘Om Shanti Om’. But we do discuss ‘Slum Dog’ because it surely has good elements which can be discussed about. It is ‘cinema’. It is a ‘piece of art’ where as Om Shanti Om is just a ‘film’. So I am not discarding ‘Slum Dog’ as rubbish. But I am trying to initiate a different argument. Any piece of art can not escape a creative criticism. I have made a film my self and it has been criticized by people. Some liked it some didn’t. That doesn’t mean I am completely right or wrong nor are the people who discuss it.

  I am glad you are so much interested in this subject. I am also glad someone at least took the pain to analyze my article and started a discussion. I hope I have given you adequate answers to the points raised by you. I appreciate your concern and enthusiasm.

  Regards,
  Abhaya Simha

 6. Pramod ಹೇಳುತ್ತಾರೆ:

  Movie is not worth of Oscar. Now Oscar is not worth calling greatest award for any movie. Too much focus on sh$%..

 7. Jeevan ಹೇಳುತ್ತಾರೆ:

  hai sir,

  this is jeevan from mangalore..i read u r artical about slumdog last sunday, actually i also agree with u r artical.. while watching tha movee i didn’t got that much exitement when i watched movees like Black, Rangde Basanthi or Tare Zameen par….

  I dont Know why so many peple making so much issue about this movee…
  ther r many exellent movees in kannada also wher v can send this movees to oscar…

  Whatevr happens that is good. coz atlast Indians won the awards that’s great…

  Sir i heard that u r from mangalore and won the national award for u r film… when v can able to watch u r movees sir, coz i am the one person who love all type of movees may b it is commercial or Art films. Why dont u make a film about SEZ problams or other social issues wher people educate through this media….

  Whatver congrats for u r work.. and keep intouch sir if u r free….

  take care and good luck…

  Regards from
  Jeevan mangalore…

 8. Archana ಹೇಳುತ್ತಾರೆ:

  My thoughts exactly about the language use. (What Dev Patel has done is a pretend Indian accent with bits of British accent and do you notice his expressions too that are British?) The movie doesn’t sit well with the audience for that reason and for my own personal reason that parts of the story are far from believable. This is one movie that has proved that a good PR rep can bring you money, awards and fame!

  You do write beautifully in Kannada and that just reminds me how left behind I am!

 9. abhayaftii ಹೇಳುತ್ತಾರೆ:

  ಧನ್ಯವಾದ ಅರ್ಚನ.

 10. Girish Ramachandra ಹೇಳುತ್ತಾರೆ:

  Abhaya,

  I watched the film last Sunday and it definitely is a movie well made. There may be some technical shortfalls, but one can’t deny the facts that the movie has entertaining elements to creative minds. I am not a creative critic to comment on the techniques, but as an audience, I really enjoyed the movie. It’s a great product and as a product user, I am happy (bang for the buck!).

  I totally agree with your comments on Oscars – I tried to digg in about this when Halle Berry and Denzel Washington won Oscars. In my opinion, Halle Berry has limited acting capabilities and at the time the reason for her winning the award was an open secret. Hollywood is obsessed with this kind of behavior – want to “encourage” different communities, gays, lesbians etc. It’s not so hard to relate Sean Penn’s comments in his acceptance speech this year.

  Awards are also influenced by politics of the time in the US. Hollywood is largely democratic, but there are a few republican elements there. Oscar, by no means is a benchmark for the best. Definitely, all the movies that get nominated have a good benchmark, but beyond that, it’s all politics, marketing and mood swing of judges.

  – Girish.

 11. abhayaftii ಹೇಳುತ್ತಾರೆ:

  Very true Girishanna… you are totally right. and thanks for the comment. 🙂

 12. Nagabhushana ಹೇಳುತ್ತಾರೆ:

  ಯಾವುದೇ ಒಂದು ಹೊಸ ‘ಐಡಿಯಾ’ ಶುರುವಾದಲ್ಲಿ, ಅದರ ನಿರ್ಮಾತನಲ್ಲಿ ಅದರ ಒಳ್ಳೆಯ ಉಪಯೋಗದ ಉದ್ದೇಶವಿದ್ದರೂ, ಆ ‘ಐಡಿಯಾ’ವನ್ನು ‘ತಮ್ಮ’ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವ ಮಂದಿ ಇದ್ದೇ ಇರುತ್ತಾರೆ. ಬಹಳ ಸಲ ಹೀಗೇ ಆಗುವುದು. ಅವರಿಗೆ ‘ಐಡಿಯಾ’ದ ಸದುದ್ದೇಶ ಬೇಕಿರುವುದಿಲ್ಲ. ಅದೇ ಪ್ರಶಸ್ತಿಗಳ ವಿಷಯದಲ್ಲೂ ಆಗುವುದು. ಚಿತ್ರ ತನ್ನ ಕಲ್ಪನೆಯಂತೆ ಬನ್ತೇ ಅಲ್ಲವೇ ಎಮ್ಬುದೇ ನಿರ್ದೇಶಕನಿಗೆ ಮುಖ್ಯ, ಪ್ರಶಸ್ತಿಗಳಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s