Sex sells …!?


ಗೆಳೆಯ ವಿಕಾಸ್ ನೇಗಿಲೋಣಿ ದೂರವಾಣಿಸಿ ಅವರು ಕೆಲಸ ಮಾಡುತ್ತಿರುವ ‘ಸಖಿ’ ಎಂಬ ಮ್ಯಾಗಝೀನಿಗೆ ಸ್ತ್ರೀ ಹಾಗೂ ಸಿನೆಮಾ ಬಗ್ಗೆ ಒಂದು ಲೇಖನ ತಯಾರು ಮಾಡ್ತಾ ಇದೇನೆ ಎಂದರು. ದೂರವಾಣಿ ಇಟ್ಟ ಮೇಲೂ ಅದರ ಕುರಿತು ಬಹಳ ಹೊತ್ತು ನನ್ನ ತಲೆಯಲ್ಲಿ ಯೋಚನೆಗಳು ಬರುತ್ತಲೇ ಇದ್ದುವು. ಇದರ ಕುರಿತಾದ ಸ್ವಾರಸ್ಯಕರ ಘಟನೆಯೊಂದನ್ನು ಮುಂದೆ ಹೇಳುತ್ತೇನೆ. ಆದರೆ ಹೆಣ್ಣನ್ನು ಚಲನ ಚಿತ್ರದಲ್ಲಿ ನೋಡುವ ಬಗೆ ಬಹಳ ಕುತೂಹಲಕರವಾದದ್ದು. ಸಿನೆಮಾ ಒಂದು ಜನಪ್ರಿಯ ಮಾಧ್ಯಮ ಎಂದು ಕರೆಸಿಕೊಳ್ಳುವ ಹಿನ್ನೆಲೆಯಲ್ಲಿ ಈ ಜನಪ್ರಿಯತೆಯ ಅಂಶಗಳಲ್ಲಿ ಒಂದು ಸಿದ್ಧ ಸೂತ್ರ ಹೆಣ್ಣಿನ ಬಳಕೆಯೂ ಆಗಿದೆ. ಪುರುಷ ಪ್ರಧಾನವಾಗಿರುವ ನಮ್ಮ ಸಮಾಜದಲ್ಲಿ ಸಿನೆಮಾ ಎನ್ನುವುದೂ ಒಂದು ಪುರುಷ ಪ್ರಧಾನ ಮಾಧ್ಯಮವೇ ಆಗಿದೆ. ಇಲ್ಲಿನ ನೋಟ (gaze) ಪುರುಷರ ನೋಟವಾಗಿದೆ. ನಮ್ಮ ‘ಕಮರ್ಷಿಯಲ್’ ಚಿತ್ರಗಳಲ್ಲಿ ಬಳಸುವ ಹೆಣ್ಣಿನ ಬಿಂಬ ಒಂದು ಆಕರ್ಷಣೆಯ ಬಿಂಬವಾಗಿ ಉಳಿಯುತ್ತದೆಯೇ ಹೊರತು ಅದಕ್ಕೆ ಹೆಚ್ಚಿನ ಜವಾಬ್ದಾರಿಯೇನೂ ಇರುವುದಿಲ್ಲ. ಹಾಂ… ಮೊದಲು ನಾನು ಹೇಳುತ್ತೇನೆ ಎಂದ ಕಥೆ…

ನಾನು ಎಫ್. ಟಿ. ಐ. ಐ ನಲ್ಲಿ ಇರಬೇಕಾದರೆ ನನ್ನ ಸಹಪಾಠಿ ನಿರ್ದೇಶನ ವಿದ್ಯಾರ್ಥಿಯೊಬ್ಬನಿಗೆ ನಮ್ಮ ಜೂನಿಯರ್ ಆಗಿದ್ದ ನಟನೆಯ ವಿದ್ಯಾರ್ಥಿನಿಯೊಬ್ಬಳೊಂದಿಗೆ ಪ್ರೇಮವಾಯಿತು. ಇಂದು ಅವರಿಬ್ಬರೂ ಹಿಂದಿ ಚಿತ್ರೋದ್ಯಮದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಹಾಗೂ ಇಂದಿಗೂ ನನ್ನ ಒಳ್ಳೆಯ ಮಿತ್ರರೇ ಆಗಿದ್ದಾರೆ. ಈ ಕಥೆ ಅವರಿಗೆ ಮುಜುಗರ ಉಂಟು ಮಾಡಬಹುದಾಗಿದ್ದರಿಂದ ಅವರ ಹೆಸರನ್ನು ನಾನಿಲ್ಲಿ ಬಳಸುವುದಿಲ್ಲ. ನನ್ನ ಸಹಪಾಠಿ ಸ್ವಲ್ಪ ತೋರಿಕೆ ಸ್ವಭಾವದವನು. ತಾನೊಬ್ಬ ಬುದ್ಧಿ ಜೀವಿ ಎಂದು ತೋರಿಸಿಕೊಳ್ಳುವ ಆಸೆ ಅವನಿಗೆ ಸದಾ. ಯಾವಾಗಲೂ ಕುರುಚಲು ಗಡ್ಡ ಬಿಟ್ಟು ನಾಲ್ಕುವಾರಗಳಿಂದ ತೊಳೆಯದೇ ಇದ್ದ ಮಾಸಲು ಜುಬ್ಬ ಧರಿಸಿ, ಹೊಟ್ಟೆಯಲ್ಲಿ ಹಿಡಿಯಲಾಗದಿದ್ದರೂ ಕೈಯಲ್ಲಿ ಸದಾ ಹೆಂಡದ ಗ್ಲಾಸ್ ಹಿಡಿದು “ವಾಟ್ ಕರ್ಲ್ ಮಾರ್ಕ್ಸ್ ಸೆಡ್…” ಎನ್ನುವಾತ ಅವನು. ಆದರೆ ಮೂಲತಃ ಮನುಷ್ಯ ಒಳ್ಳೆಯವನು, ಸಾದು. ಹಾಗೂ ಸಾಕಷ್ಟು ಪ್ರತಿಭಾಶಾಲಿಯೇ. ಇನ್ನು ಹುಡುಗಿಯೋ ನಟನೆಯ ವಿದ್ಯಾರ್ಥಿ. ಅಂದಗಾತಿ. ಬಳಕುವ ದೇಹ ಎನ್ನಲಾರೆನು. ಆದರೆ ಕೃಷ್ಣ ಸುಂದರಿ ಎನ್ನಲಡ್ಡಿಯಿಲ್ಲ. ಅವರಿಬ್ಬರ ಪ್ರೀತಿಯ ಪ್ರಕರಣ ಕೇವಲ ೩೦೦ ಜನ ಇರುವ ಕ್ಯಾಂಪಸ್ಸಿನಲ್ಲಿ ದೆಹಲಿಯಲ್ಲಿ ಭೂಕಂಪ ಆದಷ್ಟೇ ಪ್ರಮುಖ ವಾರ್ತೆಯಾಗಿತ್ತು. ಆಕೆ ಇವನ ಹಾಸ್ಟೆಲ್ ಕೋಣೆಗೆ ಸ್ಥಳಾಂತರಗೊಂಡಳು. ಅವನ ಕೋಣೆಯಲ್ಲಾ ಗುಡಿಸಿ, ಸಾರಿಸಿ ಅವನ ವಸ್ತ್ರಗಳನ್ನೆಲ್ಲಾ ಒಗೆದು ಅವನ ಬುದ್ಧಿಯನ್ನೆಲ್ಲಾ ಶುದ್ಧಿ ಮಾಡಿದಳು. ಹೀಗೆ ಸಾಗಿತ್ತು ಅವರ ಅಮರ ಪ್ರೇಮ…

ಒಂದು ದಿನ ನಮ್ಮ ಕ್ಯಾಮರಾ ಪ್ರಾಕ್ಟಿಕಲ್ ಮಾಡಿಸಲು ಮುಂಬೈನಿಂದ ಒಬ್ಬ ಹಿರಿಯ ಕ್ಯಾಮರಾ ಮ್ಯಾನ್ ಬಂದಿದ್ದರು. ಅವರು ಐಟಂ ಸಾಂಗ್ ಚಿತ್ರೀಕರಣ ಹಾಗೂ ಅಲ್ಲಿ ಕ್ಯಾಮರಾ ಮ್ಯಾನ್ಗಳಿಗೆ ಎದುರಾಗ ಬಹುದಾದ ಸಮಸ್ಯೆಗಳ ಬಗ್ಗೆ ಪಾಠ ಮಾಡುತ್ತಿದ್ದರು. ಸ್ತ್ರೀಯನ್ನು ಕನಿಷ್ಟ ಬಟ್ಟೆಗಳಲ್ಲಿ ಚಿತ್ರೀಕರಿಸುವಾಗ ಅವರನ್ನು ಹೇಗೆ ತೋರಿಸುವುದು, ಹೇಗೆ ಬೆಳಕು ಹಾಕಿದರೆ ಹೆಚ್ಚು ಉನ್ಮಾದಕಾರಿಯಾಗಿರುವುದು ಎಂಬಿತ್ಯಾದಿ ವಿಷಯಗಳ ಗಂಭೀರ ತರಗತಿ ನಡೆಯುತ್ತಿತ್ತು. ಅವರಿಗೆ ಚಿತ್ರೀಕರಣ ಪ್ರಯೋಗಗಳಿಗೆ ಒಬ್ಬ ಹುಡುಗಿಯ ಅಗತ್ಯವಿತ್ತು. ನಮ್ಮ ಜೂನಿಯರ್ ಇದೇ ನಟೀಮಣಿ ತಾನೇ ಸ್ವಯಂ ಪ್ರೇರಣೆಯಿಂದ ಪ್ರಯೋಗಕ್ಕೆ ಒಪ್ಪಿದಳು. ಸರಿ, ಆ ದಿನ ಬೆಳಗ್ಗೆ ನನ್ನ ಸಹಪಾಠಿ ನಿರ್ದೇಶಕನಿಗೆ ಬೆಳಕು ಹರಿಯುವ ಮುನ್ನ, ಅವನ ಪ್ರೇಯಸಿ ಕನಿಷ್ಟ ಬಟ್ಟೆಗಳಲ್ಲಿ ಕ್ಯಾಮರಾ ಮುಂದೆ ನಿಂತಿದ್ದಳು! ಇದು ಕ್ಯಾಮರಾ ವಿದ್ಯಾರ್ಥಿಗಳಿಗೆ ತರಗತಿಯಾಗಿದ್ದರೂ ಇತರರಿಗೆ ಅಂದು ಕ್ಯಾಮರಾ ಬಗ್ಗೆ ವಿಶೇಷ ಆಸಕ್ತಿ ಬಂದು (ಕಾರಣ ವಿವರಿಸಬೇಕಿಲ್ಲ ಎಂದುಕೊಂಡಿದ್ದೇನೆ!) ಎಲ್ಲರೂ ತರಗತಿಯಲ್ಲಿ ಹಾಜರ್! ವಿವಿಧ ಕೋನಗಳಿಂದ, ಬೆಳಕಿನ ಸಂಯೋಜನೆ ಇತ್ಯಾದಿಗಳು ನಡೆಯುತ್ತಿದ್ದವು. ಆ ಹಿರಿಯ ಕ್ಯಾಮರಾ ಮನ್ ಸಾಕಷ್ಟು ಕಲಾತ್ಮಕವಾಗಿಯೇ, ಸದಭಿರುಚಿಯಿಂದಲೇ ಕೆಲಸ ಮಾಡುತ್ತಿದ್ದರು. ಅಷ್ಟರಲ್ಲಿ ಅವರು ಇವಳೊಂದಿಗೆ ಒಬ್ಬ ಹುಡುಗನೂ ಇದ್ದರೆ ಚೆಂದ ಎಂದರು. ಇವಳ ಪ್ರೇಮ ಪ್ರಕರಣ ಗೊತ್ತಿದ್ದರಿಂದ ನಮ್ಮ ನಿರ್ದೇಶಕ ಗೆಳೆಯನೇ ಸರಿ ಎಂದು ಅವನನ್ನು ಎಬ್ಬಿಸಲಾಯಿತು. ಹನ್ನೊಂದು ಗಂಟೆಗೇ ಅಂದು ಎದ್ದುದರಿಂದ ಗೊಂದಲಕ್ಕೀಡಾದರೂ ಸುಧಾರಿಸಿಕೊಂಡು ಬಂದ ಅವನಿಗೆ ತನ್ನ ಪ್ರೇಯಸಿ ಇಷ್ಟು ಜನರ ಮುಂದೆ ಕನಿಷ್ಟ ಬಟ್ಟೆಯಲ್ಲಿ ನಿಂತಿರುವುದನ್ನು ಕಂಡು ಗಾಬರಿಯಾಯಿತು. ಮತ್ತೆ ಪರಿಸ್ಥಿತಿಯ ಅರಿವಾಗುತ್ತಲೂ ಇನ್ಯಾರೋ ಹುಡುಗನಿಗಿಂತ ತಾನೇ ಅಲ್ಲಿರುವುದು ವಾಸಿ ಎಂದು ಆತ ತನ್ನ ಮಾಸಲು ಜುಬ್ಬ ಕಿತ್ತೆಸೆದು ಕಣಕ್ಕೆ ಧುಮುಕಿದ. ಸಂಜೆಯವರೆಗೆ ಪ್ರಯೋಗಗಳು ನಡೆದುವು. ಓದುಗರು ಗಮನಿಸಬೇಕು… ನಮ್ಮ ಸಿನೆಮಾಗಳಲ್ಲಿ ಐಟಂ ಸಾಂಗ್ ಎನ್ನುವುದು ಅವಿಭಾಜ್ಯ ಅಂಗವಾಗಿಬಿಟ್ಟಿದೆ ಇಂದು. ಹೀಗಿರುವಾಗ ಶಾಸ್ತ್ರೀಯವಾಗಿ ಸಿನೆಮಾ ಕಲಿಯುವ ವಿದ್ಯಾರ್ಥಿಗಳಿಗೆ ಇದನ್ನೂ ಕಲಿಯುವುದೂ ಅಗತ್ಯವೇ ಆಗಿರುತ್ತದೆ. ಆ ದಿನ ಸಾಕಷ್ಟು ಕಲಾತ್ಮಕತೆಯಿಂದಲೇ ಎಲ್ಲವನ್ನೂ ಚಿತ್ರೀಕರಿಸಲಾಯಿತು. ಆದರೆ ಈ ದಿನದ ನಂತರ ನಮ್ಮ ನಿರ್ದೇಶಕ ಮಹಾಶಯನ ನಿಲುವುಗಳು ಬದಲಾದುವು. ಆತನಿಗೆ ಹೆಣ್ಣು ಪರದೆಯ ಮೇಲೆ ಹೇಗಾದರೂ ಕಾಣಲಿ, ನನ್ನ ಪತ್ನಿ ಆಗುವವಳು ಅಥವಾ ಪ್ರೇಯಸಿ ಹಾಗೆ ಕಾಣಬಾರದು ಎನಿಸಿತು. ಅವರ ಸಂಬಂಧವೇ ಮುರಿಯಿತು ಇದರಿಂದಾಗಿ! ಇದು ದುರಂತ ಕಥೆ ಸರಿ. ಆದರೆ ಬಿಂಬಗಳನ್ನು ರೂಪಿಸುವ ನಮ್ಮ ಜೀವನದಲ್ಲಿನ ನಾಜೂಕಿನ ಘಳಿಗೆಗಳಿವು. ನಿಭಾಯಿಸಲೇ ಬೇಕಾದ ವಿಷಯಗಳಾಗಿವೆ.

ಅದಂತಿರಲಿ… ನಮ್ಮ ಚಿತ್ರಗಳಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ನಮ್ಮ ಚಿತ್ರಗಳಲ್ಲಿ ಸ್ತ್ರೀ ಒಂದು ಭಾವವನ್ನು ಕೆರಳಿಸುವವಳಾಗಲಿ, ನಾಯಕನಲ್ಲಿ ಅವನ ಕರ್ತವ್ಯಗಳ ಕುರಿತಾಗಿ ಜಾಗೃತಗೊಳಿಸುವುದಾಗಲೀ, ಅವನ ಪ್ರೀತಿಗೆ, ಕಾಳಜಿಗೆ, ಭಯಕ್ಕೆ, ಸಿಟ್ಟಿಗೆ ಕಾರಣವಾಗುವುದಾಗಲಿ ಮಾತ್ರ ಪಾತ್ರ ಇರುತ್ತದೆ. ಉಳಿದಂತೆ ಚಿತ್ರದಲ್ಲಿ ಆಕೆ ಕೇವಲ ಅಂದದ ಗೊಂಬೆಯಾಗಿರುತ್ತಾಳೆ. ಆಕೆ ಅರ್ಥದ ಧಾತೃವೇ ಹೊರತು ಅರ್ಥದ ಕರ್ತೃವಾಗಿರುವುದಿಲ್ಲ. ಸಿನೆಮಾ ಎನ್ನುವುದು ನಮ್ಮಲ್ಲಿ ಪುರುಷ ಪ್ರಧಾನ ಉದ್ಯಮವಾಗಿದೆ. ಇಲ್ಲಿ ತುಂಬಾ ಕಡಿಮೆ ಮಹಿಳಾ ನಿರ್ದೇಶಕರಿರುವುದು. ಇರುವಂಥವರೂ ‘ಮಾಸ್’ ಅಥವಾ ದೊಡ್ಡ ಮಾರುಕಟ್ಟೆಯನ್ನು ಉದ್ದೇಶಿಸಿ ಚಿತ್ರನಿರ್ಮಾಣದ ಅಗತ್ಯ ಇರುವುದರಿಂದ, ತಮ್ಮ ಚಿತ್ರಗಳಲ್ಲಿಯೂ ಹೆಣ್ಣನ್ನು ಗಂಡಿನ ದೃಷ್ಟಿಯಲ್ಲಿ ನೋಡುವ ಪ್ರಯತ್ನ ಮಾಡುತ್ತಾಳೆ. ಹೀಗಾಗಿ ಮಾರುಕಟ್ಟೆ ನಿರ್ದೇಶಿತ ಈ ರೀತಿಯ ಚಿತ್ರಗಳಲ್ಲಿ ಒಂದು ಸ್ವತಂತ್ರ ಧ್ವನಿ ಉಡುಗಿ ಹೋಗುವುದೇ ಹೆಚ್ಚು.

ಈ ಕುರಿತಾಗಿ ನಾನು ಮುಂಬೈನಲ್ಲಿನ ನನ್ನ ಸ್ನೇಹಿತೆ, ನಿರ್ದೇಶಕಿ ರೀಮಾಳನ್ನು ಕೇಳಿದೆ. ಆಕೆ ನೇರವಾಗಿ ಹೇಳಿದಳು, ಚಿತ್ರದಲ್ಲಿ ಹೆಣ್ಣನ್ನು ಬಿಂಬಿಸುವ ರೀತಿ ಸರಿಯಾಗಲು ಆ ಬಿಂಬದ ಕರ್ತೃವಿನ ಲಿಂಗ ಮುಖ್ಯವಲ್ಲಿ ಕರ್ತೃವಿನಲ್ಲಿನ ಸಂವೇದನೆ ಅಗತ್ಯ ಎಂದು. ಒಮ್ಮೆ ಹೌದು ಎನಿಸಿತು. ಆದರೆ… ಹೌದೇ? ಮಹಿಳೆಯ ಬದುಕನ್ನು ನಿಜಕ್ಕೂ ಕೇವಲ ಸಂವೇದನೆಯಿಂದ ಪುರುಷನೊಬ್ಬನು ಅರಿಯುವುದು ಸಾಧ್ಯವೇ? ಮರು ಸೃಷ್ಟಿ ಮಾಡುವುದು ಸಾಧ್ಯವೇ? ನಾನು ಬರೆಯುವ ಮಹಿಳಾ ಪಾತ್ರಗಳು ನೈಜವಾಗಲು ಸಾಧ್ಯವೇ? ಇಲ್ಲಾ… ನಾನು ಅಂದುಕೊಂಡಿರುವ ಮಹಿಳೆಯ ಲೋಕದ ಪ್ರತಿಬಿಂಬ ಮಾತ್ರವಾಗಿಯೇ ಉಳಿಯುತ್ತದೆಯೇ ಅದು…? ನೀವೇನು ಹೇಳ್ತೀರೀ…? ನನಗೆ ತಿಳಿಸುತ್ತೀರೆಂದು ಭಾವಿಸುತ್ತೇನೆ…

This entry was posted in Film Craft, Society. Bookmark the permalink.

36 Responses to Sex sells …!?

 1. rajendra prasad ಹೇಳುತ್ತಾರೆ:

  ಎಲ್ಲವು ಬರೆ ಮಾತಾಗಿ ಉಳಿದುಹೋಗುತ್ತದೆ… ಅಭಯ್ ರವರೆ… ಪ್ರಧಾನ ಧಾರೆಯ ಲೋಪಗಳ ಬಗೆಗಿನ ನಮ್ಮ ಚಿಂತನೆ… ಅಕ್ಷರಗಳಲಿ ಮಾತ್ರ ಉಳಿಯುತ್ತಿದೆಯೀ ಪರಂತು… ಕ್ರಿಯೆಯಲ್ಲಿ ಅಲ್ಲ. ಬುವಾ ‘the second sex’ ಬರೆದು 60 ವರ್ಷ.!!!!!!!!!!

 2. abhayaftii ಹೇಳುತ್ತಾರೆ:

  ರಾಜೇಂದ್ರರೇ… ಮುಖ್ಯವಾಹಿನಿಯ ಚಿತ್ರಗಳಲ್ಲಿ ಈ ಚಿಂತನೆಗಳು ಇಲ್ಲವೇ ಇಲ್ಲ ಎಂದು ಹತಾಷೆಯಾಗುವಷ್ಟೂ ಇಲ್ಲ. ನಾನೇ ಕೆಲವು ವಾರಳ ಹಿಂದೆ ಬರೆದ sex = stright ಓದಿ ನೋಡಿ. ಆ ಸಿನೆಮಾ ನೀವು ನೋಡಿದ್ದರೆ, ಸಮಾಜದ ಪ್ರಸ್ತುತ ವಿಷಯಗಳ ಕುರಿತಾಗಿ ಚರ್ಚೆ ಸಿನೆಮಾಗಳಲ್ಲಿ ನಡೆಯುತ್ತಿದೆ. ಪ್ರಮಾಣ ಕಡಿಮೆ ಎನ್ನುವುದಷ್ಟೇ ಕೊರಗು. ಅಷ್ಟಕ್ಕೂ ಸಿನೆಮಾ ಎನ್ನುವುದು ಭಾರೀ ಪ್ರಮಾಣದಲ್ಲಿ ಹಣದ ವಹಿವಾಟು ಆಗಿರುವುದರಿಂದ ಅಲ್ಲಿ sensibilities ಕೊರತೆ ಆಗುವುದು ಒಂದು ಸ್ವಲ್ಪ ಮಟ್ಟಿಗೆ ಸಹಜವೇ ಆಗಿದೆ.

 3. Lakshmi Mareddy ಹೇಳುತ್ತಾರೆ:

  Abhaya, Excellent article, fun read. True creativity requires mental disassociation. Your friend was a pseudo intellectual at best, and lacks maturity.

  Our morality code is frightening, and hypocritical at best. Which means, creativity suffers.

  Try portraying a strong woman, and your movie will be tagged ‘Artsy’. Its bound to fail as well. I hate such labels, don’t you? Have you noticed strong women in India happen only when they are wronged? “Kartavyam – Vijayshanti, Khoon Bhari Maang, Shakti , Insaaf ka tarazu, phoolan Devi etc. ”

  But I have noticed that Indian audience at best identifies with helpless females and dumb heroes. Explain all those hits with a hairline thin story, no acting, pathetic dancing and item numbers!!

 4. Sumathi Muddenahalli ಹೇಳುತ್ತಾರೆ:

  Hello Abhaya,
  This is the second article of yours that I read and enjoyed the writing. I happened to read another interesting article of this kind written by Tod La Riche in wwww.Kendasampige/ (in its English section). This article named “The Tale of A Toilet Baby” is about the response of a foreigner (an American) to a Kannada movie. The article portrays the illogical nature of this Kannada movie’s story line and this becomes all the more apparent since it is written through the perspective of a Westerner. Here is the link to the aforementioned article: http://www.kendasampige.com/article.php?id=2174

 5. shailaja s bhat ಹೇಳುತ್ತಾರೆ:

  Dear Abhaya,

  Your friend Reema is right. One should be sensitive and should empathize to understand the opposite person. A woman can understand a man and Man can understand a woman, but yes, giving reservation in politics and education helps to elevate the position of women. Many of the problems faced by women can be helped by, if they the representative of the same gender,because she has the insight into the situations.

  Shailaja

 6. abhayaftii ಹೇಳುತ್ತಾರೆ:

  Thanks.. i will surely read that article madam.

 7. Nivedita ಹೇಳುತ್ತಾರೆ:

  I think I have been thinking about this for a long time, but since you are a man you are also looking at the woman, judging her from what she did and opinionating on what should be done or what shouldn’t be done, I think it is all about “choice” if a woman prefers to do it she should be allowed to do it. If is ultimately about how she makes her living. If you are so conservative about how women are poetrayed in a movie, why not think about the institution of prostitution where they are vulnerable and have lesser choice?
  I think movie is less harmful than the sex work. If a woman can make her living by poetraying herself in such a way or selling herself in such a way it is her choice.

 8. ಆನ೦ದ ಭಾವ ಹೇಳುತ್ತಾರೆ:

  ಅಭಯಣ್ಣ,
  ನಿನ್ನ ಕತೆ ಲಾಯಕಿದ್ದು. ನನ್ನ ಅ೦ತಕರಣವನ್ನು ಕೆದರಿಸಿತು. ಸಿನೆಮ ನಿತ್ಯ ಜನಜೀವನದ ಉತ್ಪ್ರೇಕ್ಷಿತ ಪ್ರತಿಬಿ೦ಬವಾದರೆ, ನಿನ್ನ ಲೇಖನ ನಿಯಮಿತ ಸತ್ಯವಾಗುತ್ತದೆ, ಸಾರ್ವತ್ರಿಕದ ಸಾಣೇಗಲ್ಲಿಗೆ ನಿಲ್ಲದು. ೨ ಹೆಣ್ಣುಮಕ್ಕಳ ದಾತ, ೨ ವಿಬಿನ್ನ ಸ೦ಸ್ಕೃತಿಯ ಅನುಭವಿಯಾಗಿ ಹೇಳುತ್ತೇನೆ, ಭಾರತದಲ್ಲಿ ಹೆಣ್ಣು ಮಕ್ಕಳ ಸ್ಥಾನ ಇನ್ನೂ ದ್ವಿತೀಯ ದರ್ಜೆ. ಬರೀ ಸಾರ್ವಜನಿಕ ಜೀವನದಲ್ಲಿ ಅವರಿಗೆ ಸ್ಥಾನ ಸಿಕ್ಕಿದೆ, ಸಾಮಾಜಿಕ ಜೀವನದಲ್ಲಿ ಇನ್ನೂ ತು೦ಬಾ ಬಾಕಿ ಇದೆ. ಅದು ಸರಿ ಹೋದಲ್ಲಿ ಭಾರತದಲ್ಲಿ ಸಿನೆಮದಲ್ಲಿ ಅವರ ತೋರ್ಪಡಿಕೆಯೂ ಬದಲಾವಣೆ ಆಗುತ್ತದೆ. ಸದ್ಯಕ್ಕೆ ಅದನ್ನೇ ಬಿ೦ಬಿಸುತ್ತದೆ. ಭವಿಷ್ಯದಲ್ಲುಲ್ಲಿ ನೀನೋ/ನಿನ್ನ ಮಮ್ಮಕ್ಕಳೋ ಪುನ ಲೇಖನೆ ಬರೆದರೆ ಅದು ಸಾರ್ವತಿಕವಾಗುತ್ತದೆ.

 9. Girish M Ramachandra ಹೇಳುತ್ತಾರೆ:

  Dear Abhaya,

  Very good article. This phenomenon is not limited to Indian cinema – it’s worldwide. Gusty female roles like Ericn Brockovich, Million Dollar Baby, G I Jane are generally given an Oscar! Movies which feature flashy female bodies like James Bond movies or movies like Basic Instinct are box office hits! Men would always be men 🙂 . Of course sex sells and people WILL make money as long as it sells!

  On a lighter note, I am hoping Dostana may start a new trend in Indian cinema 🙂

  Kind regards,
  Girish.

 10. Rajesh Naik ಹೇಳುತ್ತಾರೆ:

  Hmm… well written!
  Innu swalpa hechchu helabekittu annistu….
  We ALL in some way or other, carry an ‘Objectified Body Consciousness’ of women… What does beauty [in a woman] mean to us??? how do we choose women who are going to be ‘close’ to us? Don’t you think, we all inherit the sin??? This is more to do with not individuals, but the male-dominant society and its institutions… after all our conscience is largely a product of social situations!

 11. bhavani shankar ಹೇಳುತ್ತಾರೆ:

  your blog has a very beauytiful appearence.

 12. Balakrishna ಹೇಳುತ್ತಾರೆ:

  Dear Abhaya, Shobha Aunty and I can read Kannada. But what about the rest of your friends ?

 13. Lakshmi Mareddy ಹೇಳುತ್ತಾರೆ:

  Balakrishna, Good point. I read the article, its well written, but if Abhaya goes into English, he has a wider reach!

 14. Abhaya Simha ಹೇಳುತ್ತಾರೆ:

  I agree that I would have a larger audience if I shift to English. But what about Kannada audience? When I started filmmaking… I realized that the books on film in Kannada were almost nil! It was then I decided to write in Kannada since I have the benefit of two worlds… 🙂

 15. Lakshmi Mareddy ಹೇಳುತ್ತಾರೆ:

  Abhaya, you are part of a select few Indian bloggers who I truly admire, because you choose to write in your mother tongue, and best of all you write amazingly well. I hope to see you published soon!

 16. Amol Khamkar ಹೇಳುತ್ತಾರೆ:

  but you said, you will write in both language!!!! 😦

 17. Abhaya Simha ಹೇಳುತ್ತಾರೆ:

  Yes Amol… only when the content dictates it.. 🙂

 18. Nivedita Chandrappa ಹೇಳುತ್ತಾರೆ:

  Aren’t you judging women in general ? like that lady who was in love with the director , if one is willingly experimenting with their sexuality why not? it is her choice.

 19. Shobha Rani Varma ಹೇಳುತ್ತಾರೆ:

  Abhaya, I read your article and I appreciate your intentions, but your choice of picture: I mean Clark Gable and Vivian Leigh to symbolise sex is not a little, but grossly way over the limit. You could have put a picture from Nine and a Half weeks or Dreamers or Last Tango in Paris.

 20. Shobha Rani Varma ಹೇಳುತ್ತಾರೆ:

  Have you read Margret Mitchell’s book or have you seen the classic film of the thirties?

  If you were targetting the Kannada audience only for the article then the picture should have been of Rajkumar or Vishnuvardhan or Ambareesh frolicking with one of the less fortunate Kannadiga women.

 21. Nivedita Chandrappa ಹೇಳುತ್ತಾರೆ:

  I wish or suggest that all of you focus on the subject that Abhaya is tackling in his blog which needs attention and which I am curious about to know the view points…:)

 22. Mandar Jayvant Kulkarni ಹೇಳುತ್ತಾರೆ:

  oye…angrezi me translate kar…..kuch nahi palle pad raha..this one and the previous one too….u cant do this..as a filmmaker.u kno it..even if u make a film in an unknown language…..make sure u get ur subtitles right…isnt it…THEN..?????

 23. Abhaya Simha ಹೇಳುತ್ತಾರೆ:

  @ Shoba Rani Verma: I haven’t used to photographs to symbolize sex. If you read the write up, it only talks about women in cinema and not as sex symbols in cinema. So I request you to read the write up again and look at the pictures in a different light.

  @ Nivedita: I am not denying that it’s a woman’s freedom to experiment with her sexuality. I am only talking about the way an industry looking at women.

 24. Nivedita Chandrappa ಹೇಳುತ್ತಾರೆ:

  when you say “looking” you also include yourself , you are thinking that the industry is looking at it that way but , don’t you also somehwere looking at it that way too, the very fact that you chose to narrate this shows that you want to knwo teh answeres, but think about teh west, here people don’t bother about what others do for a living even if… Read More it is prostitution it has it’s own dignity of labor, men can’t tease or berate women just because she is a model or whore, they will be promptly put behind bars. In India we look at thses professions as degrading, that is why the director friend who was in love with the girl felt “otherwise” about her stripping to minimum clothes. There is layers of psychology and conditioning here. Men are supposed to consider women as their property hence I assume that the director friend had subconcious guilt for letting her do the sexual part, it is also the mating instinct, of ownership etc.
  anyways, I think it is all about “choice”.

  If she doesn’t …what with so much poverty gnawing at the roots one can only hope that it happens eventually and rightfully.

 25. Nivedita ಹೇಳುತ್ತಾರೆ:

  sorry, swalpa spell check haaki…;p

 26. Sumathi Muddenahalli ಹೇಳುತ್ತಾರೆ:

  As I said before, I enjoyed reading it. On the other hand, I was wondering about your word choice to describe the girl. She is portrayed as a “krishna sundari” without the “balukuva deha”. At the same time, you have some wonderful things to say about your male friend such as “pratibhashali”, harmless person etc. Well, I am debating if the … article really needs a mention of the girl’s looks. How does mentioning her looks contribute to a reader’s understanding of the marginal status of women in the Indian film industry.

 27. Abhaya Simha ಹೇಳುತ್ತಾರೆ:

  @ Sumathi Muddenahalli: Thanks for the comment. but mentioning about Krishna Sundari is not a wrong thing.. being dark is not a wrong thing! and you pick the word “pratibhashali, harmless” etc. but what about him not washing his cloths for weeks? what about his intellectual display? why miss those parts (intentionally?) 🙂

  and more over.. … Read Moreexplaining about her looks is a part of story that i was narrating and the story by it self was an illustration for what i was talking about in large. so drawing a straight line between these two are not too nice i think.

  anyway… i am so excited that there have been so many people reading and reacting to this article. thanks for all the support.

 28. Sumathi Muddenahalli ಹೇಳುತ್ತಾರೆ:

  I was trying to insinuate that even the writer could get trapped in the stereotypical way of looking at women. I did not mean to say that the story does not fit into the theme.

 29. Nivedita Chandrappa ಹೇಳುತ್ತಾರೆ:

  I feel Abhaya feels that only slim and trim and fair girls can look good when exposed or worn skimpy clothes?

  I like Sumathi’s observation. I should add that in America women wear skimpy clothes everyday but none dare to touch them or eve tease them our maha bharatha desha now had to run an all women’s train to protect women in the train, so where is the freedom forget about “choice”.

 30. Rajesh Naik ಹೇಳುತ್ತಾರೆ:

  varied views… mostly by women- thats appreciable!

  But one comment says… that women has a right to experiment with her sexuality… fine, but the question is why that experimentation should sell in the market! Sex is an industry… blame capitalism! but the very same capitalism has provided us with privileges here that today we can sit and blame it!!!

  Ahh.. things are too complex! if the item girls are not paid more than what a teacher or doctor would get, probably that field wouldnt have been their first choice! And this is how capitalism breeds anti-hum,an interst in society!!! it not only sows the seeds of its destruction ..but also of mankind!!!!

 31. Rukmini Mala ಹೇಳುತ್ತಾರೆ:

  ಸಿಂಹ…
  ಲೇಖನ ಓದಿದೆ. ನಿಜವಾಗಿಯೂ ನೀನು ಒಳ್ಳೆಯ ವಿಷಯವನ್ನೇ ಚರ್ಚಿಸಿರುವೆ. ಬರೀ ಚರ್ಚೆಗೆ ಸೀಮಿತವಾಗದೆ ಇದು ಮುಂದೆ ಸಿನೆಮ ಜಗತ್ತಿನಲ್ಲಿ ಮಾರ್ಪಾಡು ತರುವಂಥಾಗಬೇಕು ಎಂದೇ ನನ್ನ ಅಭಿಲಾಷೆ. ಈ ವಿಷಯ ನಾನು ನನಗೆ ತಿಳುವಳಿಕೆ ಬಂದಾಗಿನಿಂದಲೂ ಯೋಚಿಸುತ್ತ ಇರುವುದೇ ಆಗಿದೆ. ಸಿನೆಮದಲ್ಲಿ ಏಕೆ ಹೆಂಗಸರನ್ನು ಮಾತ್ರ ಕನಿಷ್ಟ ಬಟ್ಟೆಯಲ್ಲಿ ತೋರಿಸುತ್ತಾರೆ? ಅದನ್ನು ನೋಡಿ ಪಡ್ದೆ ಹೈಕಳು ಹುಚ್ಚೆದ್ದು ಶಿಳ್ಳು ಹಾಕುತ್ತಾರೆ? ಗಂಡಸರು ಮೈತುಂಬ ಬಟ್ಟೆ ಉಟ್ಟು ಹಾಡಿನಲ್ಲಿ ಮರ ಸುತ್ತುತ್ತಾರೆ. ಒಳ್ಳೆಯ ಸಿನೆಮ ತಯಾರಿಸುತ್ತಾರೆ. ಆದರೆ ಅದು ಟಾಕೀಸ್ ನಲ್ಲಿ ಮಾತ್ರ ಪ್ರದರ್ಷನಕ್ಕೆ ಬರುವುದೇ ಇಲ್ಲ. ಅದಕ್ಕೆ ಪ್ರಶಸ್ತಿ ಮಾತ್ರ ಬಂದಿರುತ್ತದೆ. ಈಗ ಗುಲಾಬಿ ಟಾಕೀಸ್ ಸಿನೆಮ. ಇದು ಎಷ್ಟು ದಿನ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದೆ? ಎಷ್ಟೋ ಜನ ನೋದಬೇಕು ಎಂದು ಯೊಚಿಸುವಾಗಲೇ ಚಿತ್ರಮಂದಿರದಿಂದ ಹೋಗಿ ಆಗಿದೆ. ಇದು ಯಕ್ಷ ಪ್ರಶ್ನೆಯಾಗಿತ್ತು ನನಗೆ. ಇದಕ್ಕೆ ಸಿನೆಮ ತಯಾರಕರು ವಿತರಕರು ಅವರದೇ ಆದ ಕಾರಣ ಕೊಡಬಹುದು.ಇಲ್ಲಿ ನಿರ್ದೇಶಕನಿಗೆ ಧರ್ಮಸಂಕಟ. ಒಳ್ಳೆಯ ಸಿನೆಮ ಮಾಡಿದರೂ ಜನರಿಗೆ ತಲಪಿಸಲಾಗುತ್ತಿಲ್ಲವಲ್ಲ ಎಂದು.
  ಖಂಡಿತ ಹೆಂಗಸರು ಸಿನೆಮದಲ್ಲಿ ಮೈಮುಚ್ಚುವಂಥ ಬಟ್ಟೆ ಹಾಕಿ ಒಳ್ಳೆಯ ಸಿನೆಮ ಮಾಡಬಹುದು. ಅಂಥ ಸಿನೆಮ ಈಗಾಗಲೇ ಕೆಲವರಾದರೂ ಮಾಡಿರಬಹುದು. ಅದು ಟಾಕೀಸಿನಲ್ಲಿ ೧೦೦ ದಿನವೂ ಓಡಿರಬಹುದು. ಇಲ್ಲಿ ಮುಖ್ಯವಾಗಿ ಬದಲಾವಣೆ ಆಗಬೇಕಾದದ್ದು ಗಂಡಸರ ಮನೋಭಾವ, ಅಂಥ ಪಾತ್ರ ಸೃಷ್ಟಿಯನ್ನು ತಪ್ಪಿಸಿ ಖಂಡಿತ ಬದಲಾವಣೆ ತರಬಹುದು. ನಟಿಯರೂ ಯಾರೂ ಮುಂದೆ ಬರಬಾರದು ಕನಿಷ್ಟ ಉಡುಪು ಧರಿಸುವ ಪಾತ್ರಕ್ಕೆ. ಆಗ ತನ್ನಿಂದ ತಾನೇ ಇಂಥ ಉನ್ಮಾದ ನಿಂತು ಹೋಗುತ್ತದೆ. ಇದನ್ನು ನಿಮ್ಮಂಥ ನಿರ್ದೇಶಕರು ಸಿನೆಮ ಮಾಡಬೇಕು. ಮಾಡಿ ಮಾದರಿಯಾಗಬೇಕು. ಪಡ್ಡೆ ಜನ ಮಾತ್ರ ಸಿನೆಮ ನೋಡುವುದು ಅಲ್ಲ ಎಂಬುದನ್ನು ಸಿನೆಮ ನಿರ್ಮಾಪಕರು ನಿರ್ದೇಶಕರು ಯೋಚಿಸಬೇಕು. ಒಳ್ಳೆಯ ಸಿನೆಮ ಮಾಡಿದರೆ ಅದು ಟಾಕೀಸಿನಲ್ಲಿ ಪ್ರದರ್ಶನಗೊಂಡರೆ ಮುಜುಗರ ಇಲ್ಲದೆ ಕುಟುಂಬಸಮೇತ ಬಂದು ನೋಡುವ ಪರಿಪಾಟ ಆಗ ಬೆಳೆಯಬಹುದು. ಅಂಥ ಬದಲಾವಣೆ ಶೀಘ್ರದಲ್ಲೇ ಜಾರಿಗೆ ಬರಲಿ ಎಂದು ಆಶಿಸುತ್ತೇನೆ. ನಿನ್ನ ಆಶಯವೂ ಇದೇ ಎಂದು ನನಗರಿವಿದೆ. ಶುಭವಾಗಲಿ. ಪ್ರಯತ್ನಿಸು.

 32. ಗೀತ ಹೇಳುತ್ತಾರೆ:

  ಅಭಯ, ನಿಮ್ಮ ಈ ಬ್ಲಾಗ್ ಆಮ೦ತ್ರಿಸಿದ ವಿಚಾರಗಳು ಹಲವು. it is quite interesting to see such varied views. ಈ ನಡುವೆ ನನಗೆ ಬ೦ದ ಒ೦ದರಡು ವಿಚಾರಗಳು: ಪುರುಷ ಪ್ರಧಾನ ಸಮಾಜದ ಮುಖ್ಯ ಅ೦ಗವಾಗಿಬಿಟ್ಟಿರುವ ಸಿನೆಮಾ ಅನ್ನುವ ಕಾರಖಾನೆ predominantly ‘male gaze’ ನ್ನೆ ಉದ್ದೇಶವಾಗಿಟ್ಟುಕೊ೦ಡು ಮು೦ದುವರಿದಿದೆ. ಆದರೆ ಈ ಎಲ್ಲದರ ಹಿ೦ದೆ ನಾವು ನೆನೆಪಿನಲ್ಲಿಟ್ಟುಕೊಳ್ಳಬೇಕಾದ ಒ೦ದು ವಿಷಯ ಏನೆ೦ದರೆ, ಗ೦ಡಿನ desire ‘to gaze’ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ a subject’s (in this context a woman’s) desire ‘to be gazed at’.

  ಇನ್ನೊ೦ದು ವಿಚಾರ- ಪ್ರಸ್ತುತ ಬಾಲಿವುಡ್ ಸಿನೆಮಾ ನೋಡಿದರೆ, ಮಹಿಳಾ ಪ್ರೇಕ್ಷಕರೂ ಬದಲುತ್ತಿದ್ದಾರೆ ಅನ್ನಬಹುದು. With more and more bollywood heroes flaunting their 6 pack and 8 pack abs, may be it is time to note that women are also getting into the act of ‘gazing’. ಪುರುಷ ನಟರೂ ’commodity’ ಆಗುವತ್ತ ಹೆಜ್ಜೆ ಹಾಕುತ್ತಿದ್ದಾರೆಯೇ? ಏನನ್ನುತ್ತೀರಾ?

  Perhaps it suggests that cinema is quite a lot about ‘voyeurism’.

 33. Sumathi Muddenahalli ಹೇಳುತ್ತಾರೆ:

  I think Ms. Rukmini Mala sums up my intentions – well said Ms. Mala. I like to add few more points to this on going discussion.
  Firstly, in response to Ms. Gita’s comment: I concede with your view that a woman desires ‘to be gazed at’ , for sure. But, is this desire an innate response or a learned behavior. I believe that a woman has been culturally/socially taught to look appealing/desirable to man’s eyes. Does anyone agree with me?

  Secondly, in response to Ms. Nivedita Chandrappa’s Sept 23rd’s comment: I have noted that a majority of Indian men seem to think that a fair and slim girl looks “beautiful” whereas, a dark and fat girl looks “sexy”. I am not sure what makes them think so. Why don’t those men see that being tall, fair and slim are more of western physical traits than Indian. We Indians are short, brown and bulky by nature. So, desiring for slim and fair girls could only mean a desire for something exotic. What do you guys out there say? I am a fan of Girish Kasaravalli’s movies. I wish the kind of movies he makes, odd to reach more number of people.

 34. Nivedita ಹೇಳುತ್ತಾರೆ:

  Very interesting Sumanthi,

  Yes the fact that Indian women are generally brown and short and also put on weight eventually after child birth is making men drool over the fair, trim young girls, agreed. 🙂

  but I have also written something to the effect on my facebook notes , about “dark” women being dubbed as bindaas and sexy and sexually promiscuous.

  I am not sure why but most of the vamps in the Industry are vampish take Bipaasha for instance, I am not sure whether they feel that “dark” women symbolize just sex and not the “take home” factor- not sure that is the psyche behind the complexion of a woman.

  After I came to America I have left behind many sterio types that I had about men and women and in my process of learning, I have also found out that women are equally voyuristic and sexual about what they see on the screen. I bet that if women were just shown 6 abs and biceps like the way they show women in the ads, they wouldn’t sustain interest either, beacuse women and the sexuality of women is eyed by not only men but women as well, this should be an awakening to Indian women because we are not exposed to the issue of sexuality as yongsters. I am not sure about all u girls but when in my time sex was taboo.

  Most importantly men in the Indian society are less educated about the issue as well, do they care what the women prefer? her choice? her thoughts? does the poverty our lifestyle provide for thus?.

  Do men understand teh issues of sexuality ? because men themselves are ignorant most of teh times, so , the whole morality issue leads to sexuality issues and that leads to the issues of liberated thinking.

  Was Hinduism or Hindu thinking so conservative? don’t you see Konark temples and read Kamasutra literature?
  Sex became taboo after the advent of muslim invaders, before that in the vedic period everyone had freedom and choice I guess?.
  During the vedic period matrirachal families were common and teh women were higly educated, don’t you think then, they had equal rights and and choice?

 35. Jonas D'Souza ಹೇಳುತ್ತಾರೆ:

  Hi Abhaya,
  Lekhana chennagide. Neevu P.Lankesharanna maretha hagide. Yaene irali, Odugara pratikriye kutuhalakariyagide.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s