ಮೊದಲ ಕನಸು ಮೊದಲ ಪ್ರೀತಿ


ಗಣಪತಿಯವರ ಸಾರಥ್ಯದಲ್ಲಿ ನಡೆಯುತ್ತಿರುವ ‘ಚಿತ್ತಾರ’ಕ್ಕೆ ನಾನು ಬರೆಯುತ್ತಿರುವ FTII ದಿನಗಳ ಕುರಿತ ಅಂಕಣದ ಎರಡನೇ ಭಾಗ ಇಲ್ಲಿದೆ. ಇಷ್ಟರಲ್ಲೇ ಹೊಸ ಚಿತ್ತಾರವೂ ಹೊರಬಂದಿದೆ. ಅದನ್ನೂ ನೋಡುತ್ತೀರೆಂದು ಭಾವಿಸಿದ್ದೇನೆ. ಈಗ ಈ ಬಾರಿಯ ಅಂಕಣಕ್ಕೆ ನೇರ ಪ್ರವೇಶ…

[To read the previous episode, click here.]

ಮಂಗಳೂರಿನಲ್ಲಿ ಪದವಿಗಾಗಿ ಓದುತ್ತಿದ್ದಾಗ. ಗೆಳೆಯನೊಬ್ಬನ ಕುಮ್ಮಕ್ಕಿನಿಂದ ಸಾಕ್ಷ್ಯಚಿತ್ರವೊಂದನ್ನು ಮಾಡಬೇಕಾಯಿತು. ಅದರ ಓಡಾಟದಲ್ಲಿ ನನಗೆ ಸಿನೆಮಾ ಮಾಡುವ ಬಗ್ಗೆ ಆಸಕ್ತಿ ಆರಂಭವಾಗಿದ್ದು. ಯಾವುದೋ ಒಂದು ಪಾರ್ಟಿಯಲ್ಲಿ ಯಾರೋ ಒಬ್ಬ ಮ್ಯಾಜಿಕ್ ಪ್ರದರ್ಶನ ಕೊಟ್ಟರೆ ಅದರ ತಂತ್ರವನ್ನು ಅರಿಯುವವರೆಗೆ ಮನಸ್ಸಿಗೆ ತಹತಹ ಆಗುತ್ತಿರುತ್ತಲ್ಲಾ ಹಾಗಿತ್ತು ನನ್ನ ಪರಿಸ್ಥಿತಿ. ಸಿನೆಮಾ ಎನ್ನುವ ಮ್ಯಾಜಿಕ್ ಏನು? ಅದನ್ನು ಹೇಗೆ ಮಾಡುವುದು ಇತ್ಯಾದಿ ಕಲಿಯಬೇಕಿತ್ತು ನನಗೆ. ಅದನ್ನು ಕಲಿಸಲು ಇರುವ ಅತ್ಯಂತ ಒಳ್ಳೆಯ ಶಾಲೆ ಯಾವುದು ಎಂದು ಹುಡುಕಾಡುತ್ತಿರಬೇಕಾದರೆ, ಸಿಕ್ಕಿದ್ದು ಪೂನಾದಲ್ಲಿನ Film and Television Institute of India (FTII). ಕನ್ನಡ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಇದೇ ಸಿನೆಮಾ ಶಾಲೆಯಲ್ಲಿ ಕಲಿತದ್ದು ಎಂಬ ಅರಿವು ಇತ್ತು ನನಗೆ. ಅಂಥಾ ಸ್ಥಳದಲ್ಲಿ ನನಗೆ ಪ್ರವೇಶ ಸಿಕ್ಕೀತೇ ಎಂದು ಬಹಳ ಹೆದರಿದ್ದೆ ನಾನು. ಆದರೆ ಕನಸು ಕಾಣಲು ನನಸಿನ ಭಯವೇಕೆ ಅಲ್ಲವೇ? ಆ ವರ್ಷದ ಪ್ರವೇಶ ಪರೀಕ್ಷೆ ಬರೆದೇ ಬಿಟ್ಟೆ. ಹೇಗೂ ಪ್ರವೇಶ ಸಿಗುವುದಿಲ್ಲ. ಕನಿಷ್ಟ ಆ ನೆಪದಲ್ಲಿ ಪೂನಾದ ಆ ಪುಣ್ಯಭೂಮಿಯನ್ನು ನೋಡಿಯಾದರೂ ಬರುತ್ತೇನೆ ಎಂದು ಅಲ್ಲಿಯೇ ಪ್ರವೇಶ ಪರೀಕ್ಷೆ ಬರೆಯೋದಕ್ಕೆ ಹೋಗಿದ್ದೆ.

ಮೊದಲ ಬಾರಿಗೆ FTII ಗೇಟಿನಲ್ಲಿ ನಿಂತಾಗ ಅದೇನೋ ಒಂಥರಾ ರೋಮಾಂಚನವಾಗಿತ್ತು. ಕನಿಷ್ಟ ಇಲ್ಲಿವರೆಗಾದರೂ ಬಂದೆನಲ್ಲಾ ಎಂಬ ಸಂಭ್ರಮ. ಅಂತೂ ಪ್ರವೇಶ ಪರೀಕ್ಷೆ ಬರೆದದ್ದಾಯ್ತು. ಮತ್ತೆ ಸಂಜೆಯವರೆಗೆ ಸಮಯವಿತ್ತು. ಹಾಗೇ ಶಾಲೆಯ ವಠಾರದಲ್ಲಿ ಒಮ್ಮೆ ಠಳಾಯಿಸಿಕೊಂಡು ಬರುವ ಎಂದು ಅಲ್ಲಿ ಪರಿಚಯವಾದ ಒಂದಿಬ್ಬರೊಡನೆ ಸುತ್ತಾಡಲಾರಂಭಿಸಿದೆ. ಅದು ಸುಮಾರು ಹದಿನಾಲ್ಕು ಎಕರೆ ವಿಸ್ತೀರ್ಣದ ವಠಾರ. ಅದರೊಳಗೆ ಎರಡು ಸಿನೆಮಾ ಚಿತ್ರೀಕರಣವಾಗುವ ಸ್ಟೂಡಿಯೋ ಫ್ಲೋರ್, ಎರಡು ಟಿ.ವಿ ಚಿತ್ರೀಕರಣ ನಡೆಯುವ ಸ್ಟೂಡಿಯೋ ಫ್ಲೋರ್ ಹಾಗೂ ಮೂರು ಸಿನೆಮಾ ಮಂದಿರ ಇದ್ದವು. ಅತ್ಯಂತ ಹಳೆಯದರಿಂದ ಹಿಡಿದು ಅತ್ಯಂತ ಹೊಸದಾದ ಕ್ಯಾಮರಾಗಳ ಸಂಗ್ರಹವೇ ಅಲ್ಲಿದೆ. ಮತ್ತೆ ಹಾಸ್ಟೆಲ್ಲು, ಈಜುಕೊಳ ಇತ್ಯಾದಿ ನೋಡುತ್ತಾ, ನಾನು ಇಲ್ಲಿಗೆ ಬರುವುದು ಸಾಧ್ಯವೇ ಇಲ್ಲ ಎನ್ನುವುದು ಮನದಟ್ಟಾಗುತ್ತಾ ಸಾಗಿತ್ತು. ಹಾಗೆ ಭಾರದ ಮನಸ್ಸು ಹೊತ್ತು ಮಂಗಳೂರಿಗೆ ಮರಳಿದೆ. ಜೀವನ ಎಂದಿನಂತೆಯೇ ಸಾಗಲಾರಂಭಿಸಿತು.

ಆದರೆ ಅಚ್ಚರಿಯೆಂಬಂತೆ ನನಗೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣವಾಗಿರುವುದೂ ಸಂದರ್ಶನಕ್ಕೆ ಬರಲು ಸೂಚನೆಯೂ ಬಂದೇ ಬಂತು! ಅಬ್ಬಾ! ಮತ್ತೆ FTIIಗೆ ಹೋಗುವ ನೆನಪೇ ಸಂತೋಷದಾಯಕವಾಗಿತ್ತು. ಹೋದೆ. ಅಲ್ಲಿ ಮೊದಲ ಮೂರು ದಿನ ಸಿನೆಮಾ ಶಾಲೆಗೆ ಸಿದ್ಧತೆ ಒದಗಿಸುತ್ತಾರೆ. ಇದರ ನಂತರವೇ ಕೊನೆಯ ಹಂತದ ಸಂದರ್ಶನ ಆರಂಭವಾಗುವುದು. ಈ ಸಿದ್ಧತಾ ಕಾರ್ಯಕ್ರಮದಲ್ಲಿ ಮತ್ತೆ ನನ್ನ ಒಡನಾಡಿಗಳ ಸಾಮರ್ಥ್ಯ ತಿಳಿಯುತ್ತಾ ನಾನು ಕುಗ್ಗಲಾರಂಭಿಸಿದೆ. ಅವರಲ್ಲಿ ಅನೇಕರು ಮುಂಬೈ ಸಿನೆಮಾ ಜಗತ್ತಿನಲ್ಲಿ ಕೆಲಸ ಮಾಡಿ ಬಲ್ಲವರು. ಮತ್ತೆ ಅನೇಕರು ಕುರೋಸಾವಾ, ಫೆಲಿನಿ ಅಂತ ಅದೇನೇನೋ ಮಾತನಾಡುತ್ತಿದ್ದರು. ನನಗೆ ಇವ್ಯಾವುದರ ಪರಿಚಯವೂ ಇರಲಿಲ್ಲ. ಹೆಚ್ಚೆಂದರೆ ಹೊರದೇಶದ ಚಿತ್ರಗಳಲ್ಲಿ ಚಾರ್ಲ್ಸ್ ಚ್ಯಾಪ್ಲಿನ್ ಗೊತ್ತಿತ್ತು ನನಗೆ! ನನ್ನಂಥಾ ದಡ್ಡನಿಗೆ ಜಾಗವೇ ಅಲ್ಲ ಇದು ಎಂದು ಬಹಳವೇ ಕುಗ್ಗಿದೆ. ಆದರೆ ಇಲ್ಲಿವರೆಗೆ ಬಂದಾಗಿತ್ತು. ಹೆದರುವುದೇನಿದೆ? ನನ್ನ ಕೈಲಾದ ಪ್ರಯತ್ನ ಮಾಡಿಯೇ ಸಿದ್ಧ ಎಂದು ಮುಂದುವರೆದೆ. ಸಿದ್ಧತಾ ಕಾರ್ಯಕ್ರಮ ಮುಗಿದು ಸಂದರ್ಶನಗಳು ಆರಂಭವಾದವು.

ಹದಿನಾಲ್ಕು ಜನರ ಒಂದು ಸಂದರ್ಶನಾ ಸಮಿತಿಯ ಎದುರಿಗೆ ಯಾವುದೇ ಭಯವಿಲ್ಲದೇ ಕುಳಿತೆ! ಸೋತು ಹೋಗಿರುವೆ ಎಂದು ಗೊತ್ತಿದ್ದ ಮೇಲೆ ಭಯವೇಕೆ ಅಲ್ಲವೇ? ಆದರೆ ಆ ಹದಿನಾಲ್ಕು ಮಂದಿಯೂ ಸಂಯಮದಿಂದ ನನ್ನ ಮಾತುಗಳನ್ನು ಕೇಳಿಸಿಕೊಂಡರು. ತಪ್ಪಿದರೆ ಬೆನ್ನುತಟ್ಟಿ ಸಮಾಧಾನ ಪಡಿಸಿದರು. ಸರಿಯಾಗಿ ಮಾತನಾಡಿದರೆ ಪ್ರೋತ್ಸಾಹಿಸಿದರು. ಹೀಗೆ ಸುಮಾರು ನಲವತ್ತೈದು ನಿಮಿಷ ನಡೆಯಿತು ನನ್ನ ಸಂದರ್ಶನ. ಮತ್ತೆ ಅದೇ ದಿನ ಸಂಜೆ ಮಂಗಳೂರಿಗೆ ಮರಳಿದೆ. ನನ್ನ ಸಿನೆಮಾ ಶಾಲೆಯ ಕನಸಿಗೆ ಅಂದು ವಿರಾಮ ಚಿಹ್ನೆ ಬಿದ್ದಿದೆ ಎಂದು ನನಗೆ ಅರಿವಾಗಿತ್ತು.

ಆದರೆ ಅದೃಷ್ಟವಶಾತ್ ನಾನು ತಪ್ಪಾಗಿದ್ದೆ! ಅಂದರೆ ನಾನು ಸಿನೆಮಾ ಶಾಲೆಗೆ ಸ್ವೀಕೃತನಾಗಿದ್ದೆ! ಪೂನಾದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ ನನಗೆ ಸ್ವೀಕೃತಿ ಪತ್ರ ದೊರೆಯಿತು. ನನಗಾದ ಅಚ್ಚರಿಗೂ ಸಂತಸಕ್ಕೂ ಸೀಮೆಯೇ ಸಿಗದಂತಾಗಿತ್ತು. ಅಂದ ಹಾಗೆ ಮೊದಲಬಾರಿಗೆ ನಾನು ಹಾಸ್ಟೆಲ್ಲಿನಲ್ಲಿ, ಮನೆಯಿಂದ ಅಷ್ಟು ದೂರ ಇರಬೆಕಾಗಿತ್ತು. ಹೀಗಾಗಿ ಏನೇನೋ ಆತಂಕಗಳು, ಸಂಭ್ರಮಗಳು. ಮತ್ತೆ ಉಳಿದಿದ್ದ ಕೆಲವೇ ದಿನಗಳಲ್ಲಿ ಹಾಸ್ಟೆಲ್ ಸಾಮಾನುಗಳನ್ನು ಒಟ್ಟು ಮಾಡಿದ್ದಲ್ಲದೇ, ಮಾನಸಿಕವಾಗಿಯೂ ಹೊಸ ಜಗತ್ತಿಗೆ ಸಿದ್ಧನಾಗಬೇಕಿತ್ತು. ಆದರೆ ನನ್ನೆದುರಿಗೆ ಒಂದು ಹೊಸ ಪ್ರಪಂಚದ ಅನಾವರಣ ಆಗಲೇ ಆರಂಭವಾಗಿತ್ತು.

ಮಂಗಳೂರಿನ ಗೆಳೆಯರೆಲ್ಲಾ ಸೇರಿ ನನ್ನನ್ನು ಪೂನಾಕ್ಕೆ ಕಳಿಸಿಕೊಡಲು ಸಿದ್ಧರಾದರು. ನನ್ನ ಹೊಸ ಬದುಕಿಗೆ, ಪ್ರವೇಶಿಸುತ್ತಿರುವ ಹೊಸ ಪ್ರಪಂಚಕ್ಕೆ ಶುಭ ಹಾರೈಸಿದರು. ಅಪ್ಪ-ಅಮ್ಮ ತುಸು ಆತಂಕ, ಬಹಳ ಹರುಷ ಪಟ್ಟರೆ; ಸಂಬಂಧಿಕರೆಲ್ಲರೂ, ಸಿನೆಮಾ ಜಗತ್ತಿಗೆ ಹೋಗಿ ಹಾಳಾಗಲಿರುವ ತಮ್ಮವನೊಬ್ಬನನ್ನು ಕನಿಕರದಲ್ಲಿ ನೋಡಬೇಕೋ, ಹರುಷದಲ್ಲೋ ಎಂದು ತುಸು ಗೊಂದಲದಲ್ಲೇ ಹಾರೈಸಿ ಬೀಳ್ಕೊಟ್ಟರು. ಪೂನಾ! ಇದೋ ಬಂದೆ ನಾನು!

[To read the previous episode, click here.]

This entry was posted in FTII diaries. Bookmark the permalink.

17 Responses to ಮೊದಲ ಕನಸು ಮೊದಲ ಪ್ರೀತಿ

 1. Gireesh Ullody ಹೇಳುತ್ತಾರೆ:

  Abhaya, I am hooked to your column, keep going buddy!

 2. Jayalakshmi ಹೇಳುತ್ತಾರೆ:

  Chittaradalli baruva ninna diary bahaLa kuthuuhalakaariyaagide, abhinandanegaLu.

 3. Vasu ಹೇಳುತ್ತಾರೆ:

  Kan Vas
  First Dream like first love comes unannounced and keeps going on until rude awakening by the reality of life. Some may get the dream come true others have a reality in life.
  Good dream atleast gives a moments of peace in mind. Good thoughts, Abhay keep writing….

  Vasu New York

 4. Ramchandra PN ಹೇಳುತ್ತಾರೆ:

  Dear Abhaya,
  Nice piece. Your article reminded me of my entrance exam / interview at FTII. We had an optional one week orientation course before the final interview. I choose to skip this optional orientation course because during the same time I had to go for an interview at Jamia Milia Mass Communication college in Delhi. When asked, I had lied ‘my grand mother was not well’ (She is no more now, may her soul rest in peace). I was sure my co-participants believed me. But I did get a feeling then that the authorities guessed that I am bluffing, but they did not tell me about it. I got through the interview… but after one and a half years of learning at FTII my classmate Pankaj Advani one day suddenly stops me under the wisdom tree and tells me with a naughty smile on his face, ‘You lied that day about your grand mother!’ He had seen thru me. I indeed had lied… but i was glad that I had made it.

 5. ಮಾಲಾ ಹೇಳುತ್ತಾರೆ:

  ಭಯ ಬರವುದ್ ಹೇಗೋ ನಿನಗೆ ನಿನ್ನ ಹೆಸರಲ್ಲೇ ಅಭಯ ಇದೆಯಲ್ಲೋ!

 6. sumathi ಹೇಳುತ್ತಾರೆ:

  Abhayavare
  idannu oadi bahala santhosha patte. kanasugale illada jeevanakke artha yenide heli. Kanasu kaanuttirabeku, yenannadaru sadhisabeku. mukhyavaagi manassakshige santhoshavaaguva haage nededukollabeku. nimma bannada lokada kansugalu nanasaagutta hogali.

 7. ಅಶೋಕವರ್ಧನ ಜಿ.ಎನ್ ಹೇಳುತ್ತಾರೆ:

  ಹುಟ್ಟಿದಾರಭ್ಯ ನಮ್ಮೊಡನೇ ಬೆಳೆದ ಅಭಯ ಪ್ರಥಮ ಬಾರಿಗೆ ಅಪರಿಚಿತ ಊರಿಗೆ ಪರೀಕ್ಷೆ ಬರೆಯಲು, ಅಂತರ್ವ್ಯೂಹ ಎದುರಿಸಲು ಕೊನೆಗೆ ಸೇರಿಕೊಳ್ಳಲು ಹೋದಾಗಲೂ ನಾನು / ನಾವು ಜೊತೆ ಕೊಡಲೇ ಇಲ್ಲ. ಇದು ನನ್ನ ವೃತ್ತಿಯ ಮಿತಿಯೋ ಅಭಯನ ಕನಸಿನ ಗಾಢವೋ (ಬೇಜವಾಬ್ದಾರಿಯೋ) ಇಂದಿಗೂ ನಮಗೆ ಬಗೆಹರಿದಿಲ್ಲ.
  ಅಭಯನ ಅಪ್ಪ

 8. ರಂಜಿತ್ ಹೇಳುತ್ತಾರೆ:

  baraha chennagide.. waiting for the next episode..:)

 9. Sharath Padaru ಹೇಳುತ್ತಾರೆ:

  Exciting read. But it’s too short 😦

 10. ಹೇಮಶ್ರೀ ಹೇಳುತ್ತಾರೆ:

  ಅಭಯ,
  ಖುಷಿಯಾಗಿದೆ ಬರಹ !
  ಆದ್ರೆ ತಿಂಗಳಿಗೆ ಒಂದೆಯಾ ?
  ಕಾಯುವುದು ಕಷ್ಟ ಮಾರಾಯಾ 🙂

 11. abhayaftii ಹೇಳುತ್ತಾರೆ:

  ಪ್ರತಿಕ್ರಿಯಿಸಿದವರೆಲ್ಲರಿಗೂ ಧನ್ಯವಾದ. FTII ಒಂದು ಕನಸಿನಂತೆ ಜೀವನದಲ್ಲಿ ಬಂದು ಹಾದು ಹೋಯಿತು. ಈಗ ಅದರ ದಿನಗಳ ದಾಖಲೀಕರಣ, ಅಲ್ಲಿ ನಾವು ಕಳೆದ ದಿನಗಳಂತೆಯೇ ಮಧುರ ಅನುಭವ.

 12. Geetha B. ಹೇಳುತ್ತಾರೆ:

  Hi Abhaya,

  the recent blog entry too is written beautifully. It is a joy to read a column written in beautiful Kannada. Keep it up!

 13. shailaja s bhat ಹೇಳುತ್ತಾರೆ:

  ಅಭಯ,
  ನಾನು ನಿನಗೆ ಪೂನಾದಲ್ಲಿ ಓದಲು ಸೀಟು ಸಿಕ್ಕಿದಾಗ ಸಂತೋಷಪಟ್ಟೆ, ನೀನು ಹಾಳಾಗಿಹೋದರೆ ಎಂದು ಕನಿಕರಿಸಲಿಲ್ಲ.ನಾನು ಇವತ್ತು ನಿನ್ನ ಹಳೆಯದನ್ನೂ ಓದಿದೆ,ಮುಂದಕ್ಕೆ ಕನ್ನಡದಲ್ಲಿ ಬರೆಯಲು ಪ್ರಯತ್ನಿಸುತ್ತೇನೆ.
  ಶೈಲ ಚಿಕ್ಕಮ್ಮ

 14. Subramanya ಹೇಳುತ್ತಾರೆ:

  Abhay Namaskara,
  Recently i have cleared the interview for FTII, and i have been selected for one year sound recording course, even i had the same feeling when i entered te insti gate……..
  Saadya vaadae nimma guidance beku….

  Subbu

 15. G.RAGHAVA REDDY(IPS RETD) ಹೇಳುತ್ತಾರೆ:

  My dear Abhya.On hearing this vedio, i feel proud that Iam an indian.A priceless musical bonanza of indian heritage depicting the real spirit of DIVERSITY IN UNITY.
  iCONGRATULATE YOU AND YOUR PROUD FAMILY FOR THE AWARDS PRESENTED.
  MAY GOD BLESS YOUR FAMILY BESTOWED WITH RICH ART AND CULTURE.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s