ನಟರಂಗ್!


ಅತುಲ್ ಕುಲಕರ್ಣಿ ನಟಿಸಿರುವ, ಮರಾಠೀ ‘ನಟರಂಗ್’ ಎಂಬ ಚಿತ್ರದ ಪ್ರದರ್ಶನವನ್ನು ಅದರ ನಿರ್ಮಾಪಕರಾದ ಝೀ ಮರಾಠೀ ವಾಹಿನಿಯವರು ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದರು. ಅದನ್ನು ನೋಡಲು ಗೆಳೆಯರಾದ ಪರಮೇಶ್ವರ್ ಕರೆದಿದ್ದರು (ಇವರು ಝೀ ಕನ್ನಡವಾಹಿನಿಯಲ್ಲಿ ಕಥಾ ವಿಭಾಗದ ಮುಖ್ಯಸ್ಥರು). ಅಂದು ನಟರಾದ ಅತುಲ್ ಕುಲಕರ್ಣಿ ಹಾಗೂ ನಾನಾ ಪಾಟೇಕರ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಚಿತ್ರ ಮಹಾರಾಷ್ಟ್ರದ ಜನಪದ ಕಲೆ ತಮಾಷಾ ಹಿನ್ನೆಲೆಯಲ್ಲಿ ಬಂದಿರುವ ಈ ಚಿತ್ರ ಮಹಾರಾಷ್ಟ್ರದ ಖ್ಯಾತ ಲೇಖಕ ಆನಂದ್ ಯಾದವ್ ಅವರ ಕಾದಂಬರಿ ಆಧಾರಿತವಾಗಿದೆ. ಈ ಚಿತ್ರವನ್ನು ಸ್ವತಃ ಅತುಲ್ ಕುಲಕರ್ಣಿ, ನಾನಾ ಪಾಟೇಕರರಂಥಾ ದಿಗ್ಗಜರೊಡನೆ ನೋಡುವ ಅವಕಾಶ ನನಗೆ ಒದಗಿ ಬಂತು. ಪ್ರದರ್ಶನಕ್ಕೆ, ಕನ್ನಡ ಚಿತ್ರರಂಗದ, ರಮೇಶ್ ಅರವಿಂದ್, ಚೇತನ್, ಯೋಗೇಶ್ ಹೀಗೆ ಹಲವು ಪ್ರಸಿದ್ಧರು ಬಂದಿದ್ದರು.

ಈ ಸಿನೆಮಾ ತಮಾಷಾ ಎನ್ನುವ ಜನಪದ ಕಲೆಯ ಸುತ್ತ ತಿರುಗುತ್ತದೆ. ಗುಣ ಎನ್ನುವ ಹಿಂದುಳಿದ ಸಮಾಜದ ವ್ಯಕ್ತಿಯೊಬ್ಬನ ಸಾಹಸಗಾಥೆ ಈ ಸಿನೆಮಾ. ಆತ ವೃತ್ತಿಯಲ್ಲಿ ಏನೇ ಆಗಿದ್ದರೂ ಪ್ರವೃತ್ತಿ ಮತ್ತು ಹೃದಯದಲ್ಲಿ ಅಪ್ಪಟ ಕಲಾವಿದ. ಊರಿನಲ್ಲಿ ಬಾವಿಯಿಂದ ನೀರೆತ್ತುವ ಕೆಲಸ ಮಾಡುವ ಈತ ಹಾಗೂ ಇವನಂತೆಯೇ ಇನ್ನೊಂದಷ್ಟು ಜನರು ಬಾವಿಗೆ ಮೋಟಾರ್ ಪಂಪ್ ಬಂದು ಕೆಲಸ ಕಳೆದು ಕೊಂಡು ಹತಾಷರಾಗಿ ಕುಳಿತಿರಲು, ಒಬ್ಬ ಊಟಕ್ಕೆ ದುಡ್ಡಿಲ್ಲ, ಇನ್ನೊಬ್ಬ ಬಟ್ಟೆಗೆ ದುಡ್ಡಿಲ್ಲ, ಮತ್ತೊಬ್ಬ ಮನೆ ರಿಪೇರಿಗೆ ದುಡ್ಡಿಲ್ಲ ಎಂದು ಹಲುಬುತ್ತಿರಲು, ಗುಣ ಅಯ್ಯೋ! ದುಡ್ಡಿಲ್ಲದೇ ನಾನು ತಮಾಷಾ ನೋಡಲು ಹೇಗೆ ಹೋಗಲಿ ಎಂದು ಕೊರಗಿ ಊರವರ ಅಚ್ಚರಿಯ ದೃಷ್ಟಿಗೆ ಗುರಿಯಾಗುವುದು ಅವನೊಳಗಿನ ಕಲಾವಿದನಿಗೊಂದು ಕನ್ನಡಿ. ಈ ಗುಣ ಊರಿನ ಕುಸ್ತಿಪಟುಗಳಲ್ಲು ಒಬ್ಬ. ದೇಹದಾರ್ಢ್ಯ ಹಾಗೂ ತನ್ನ ಹುರಿಮೀಸೆಗೆ ಪ್ರಸಿದ್ಧ ಈತನಿಗೆ ಕೆಲಸ ಕಳೆದುಕೊಂಡಾಗ ಅದಕ್ಕೆ ಒಂದೇ ಪರ್ಯಾಯ ಕಾಣುವುದು, ತನ್ನದೇ ಆದ ತಮಾಷಾ ತಂಡವನ್ನು ಕಟ್ಟುವುದು! ಕೆಲವು ಹತಾಷ ಗೆಳೆಯರಿಂದ ಅವನಿಗೆ ಪ್ರೋತ್ಸಾಹವೂ ಸಿಕ್ಕೇ ಬಿಡುತ್ತದೆ. ಅವರನ್ನೆಲ್ಲಾ ಸೇರಿಸಿಕೊಂಡು ಒಂದು ತಂಡ ಕಟ್ಟಲು ಗುಣ ಹೊರಟೇ ಬಿಡುತ್ತಾನೆ! ತಂಡ ಕಟ್ಟುವ, ಅವರು ಅಭ್ಯಾಸ ಮಾಡುವ ಚಿತ್ರಣವೆಲ್ಲಾ ಮುದನೀಡುವಂತೆ ಚಿತ್ರಿಸಲಾಗಿದೆ. ಇಷ್ಟರಲ್ಲಿ ಚಿತ್ರ ಒಂದು ಮುಖ್ಯ ತಿರುವನ್ನು ಪಡೆಯುತ್ತದೆ. ತಂಡದಲ್ಲಿ ಆಕರ್ಷಣೆಯಾಗಿ ನಪುಂಸಕನೊಬ್ಬನ ಪಾತ್ರವಿದ್ದರೇ ತಮಾಷಾಕ್ಕೆ ನಿಜವಾದ ಕಳೆ ಅದಿಲ್ಲದೇ ಪ್ರದರ್ಶನ ಸಾಧ್ಯವಿಲ್ಲ ಎನ್ನುವ ತಂಡದ ಅಭಿಪ್ರಾಯಕ್ಕೆ, ಗುಣನೇ ಬಲಿಯಾಗಬೇಕಾಗುತ್ತದೆ. ರಾಜ ನಟನಾಗಬೇಕು ಎಂದು ಆಸೆ ಪಟ್ಟಿದ್ದ ಗುಣನಿಗೆ ಈಗ ನಪುಂಸಕನ ಪಾತ್ರ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ!

ಕೊಬ್ಬಿದ್ದ ತನ್ನ ದೇಹವನ್ನಿಳಿಸಿಕೊಂಡು ಹೆಂಗಸರ ನಡೆ-ನುಡಿಗಳನ್ನು ಅನುಸರಿಸಿ ಗುಣ – ಅರ್ಧನಾರಿಯಾಗುತ್ತಾನೆ! ಹೀಗೆ ಕಲೆಗಾಗಿ ನಪುಂಸಕನ ವೇಷ ಹೊತ್ತವನಿಗೆ, ಕಲೆಯ ಕಡೆಗಿನ ನಿಷ್ಟೆ, ಸಮಾಜದಿಂದ ಅವನ ಕಲೆಗೆ ಸಿಗುವ ತಿರಸ್ಕಾರಗಳೆರಡರ ನಡುವೆ ಜೀವನ ಛಿದ್ರವಾಗುತ್ತಾ ಸಾಗುವುದು ಕಣ್ಣೆದುರಿನ ತಮಾಷಾದಂತೆ ನಡೆಯುತ್ತಾ ಸಾಗುತ್ತದೆ. ಈ ಸಿನೆಮಾ ನೋಡುತ್ತಿದ್ದಂತೆಯೇ,ನನಗೆ ನಮ್ಮಲ್ಲಿನ ಯಕ್ಷಗಾನದ ನೆನಪಾಯಿತು. ಹಿಂದೆ ಯಕ್ಷೋತ್ತಮ ಎಂಬ ಸಣ್ಣ ಚಿತ್ರ ನಿರ್ಮಾಣಕ್ಕಾಗಿ ಅನೇಕ ಹಿರಿಯ ಯಕ್ಷಗಾನ ಕಲಾವಿದರು, ಗುರುಗಳು, ಪಂಡಿತರೊಡನೆ ಮಾತನಾಡಿದಾಗ ತಿಳಿದ ಅನೇಕ ನೆನಪುಗಳು ಮರುಕಳಿಸಿತು. ಯಕ್ಷಗಾನದಂಥಾ ಕಲೆಗಳಲ್ಲಿ ಹೆಣ್ಣಿನ ಪಾತ್ರವನ್ನು ಇಂದಿನವರೆಗೂ ಪುರುಷರೇ ವಹಿಸುತ್ತಿರುವುದು. ಇತ್ತೀಚೆಗೆ ಕೆಲವು ಮಹಿಳಾ ಕಲಾವಿದರು, ಮಹಿಳಾ ತಂಡಗಳು ಚಾಲ್ತಿಗೆ ಬಂದಿದ್ದರೂ, ಅವುಗಳಲ್ಲಿ ಬಹುತೇಕ ಎಲ್ಲವೂ ಪ್ರಯೋಗ ರಂಗಭೂಮಿಯ ನೆಲೆಯಲ್ಲೇ ನಿಂತು ಬಿಟ್ಟಿವೆ. ಹಿಂದೆ ಪುರುಷರೇ ಹೆಣ್ಣಾಗಿ ನಟಿಸುತ್ತಿರಲು, ಅವರ ಹಾವ-ಭಾವ-ಭಂಗಿಗಳು ನಿಧಾನಕ್ಕೆ ಮೃದುವಾಗುತ್ತಾ ಅವರು ಹೆಣ್ಣುಗಳಂತೆಯೇ ಜೀವಿಸಲಾರಂಭಿಸುತ್ತಿದ್ದರು. ಊರಿನ ಧನಿಕರು ಅವರನ್ನು ತಮ್ಮ ವಿಕೃತ ಕಾಮಕ್ಕೆ ಬಳಸಿಕೊಂಡ ಕಥೆಗಳು ಇತ್ಯಾದಿಗಳು, ಜನಪದ ಕಲಾವಿದರ ಕುರಿತಾಗಿ ಸಮಾಜದವರಿಗಿದ್ದ ಉಪೇಕ್ಷೆಗೆ ಕಾರಣವಾಗುತ್ತಾ ಸಾಗಿತ್ತು. ಯಕ್ಷಗಾನವನ್ನೋ ಅಥವಾ ಕಂಪನಿ ನಾಟಕವನ್ನೋ ನೋಡಲು ಊರವರೆಲ್ಲಾ ಬರುತ್ತಿದ್ದರೂ, ದುಡ್ಡಿನ ಹೊಳೆ ಹರಿಸುತ್ತಿದ್ದರೂ, ಆ ಕಲಾವಿದರನ್ನು ಸಮಾಜದಲ್ಲಿ ತಮ್ಮ ಮನೆಯವರನ್ನಾಗಿ ನೋಡಲು ಯಾರೂ ಬಯಸುತ್ತಿರಲಿಲ್ಲ! ಅನಿವಾರ್ಯತೆಯಿಂದಲೋ, ಕಲೆಯ ಮೇಲಣ ಪ್ರೇಮದಿಂದಲೋ ಹೆಣ್ಣಾಗಿ ಅಭಿನಯಿಸುವ ಪುರುಷನ ಪ್ರಪಂಚದ ಪತನವನ್ನು ಯಕ್ಷಗಾನ, ತಮಾಷಾದಂಥಾ ಕಲೆಗಳ ಹಿರಿಯ ಕಲಾವಿದರು ನೋವಿನಿಂದಲೇ ನೆನಪಿಸುತ್ತಾರೆ.

ನಟರಂಗದಲ್ಲಿ, ಗುಣ ತನ್ನ ತಂಡವನ್ನು ಕಟ್ಟಿ, ತಾನೇ ನಪುಂಸಕನಾಗಿ ನಟಿಸಿ ತನ್ನ ಕುಟುಂಬದಿಂದ, ಸಮಾಜದಿಂದ ಬಹಿಷ್ಕಾರಗೊಂಡರೂ, ಚಿತ್ರದ ಕೊನೆಯಲ್ಲಿ ಕಲಾವಿದನಾಗಿಯೇ ಬಾಳುವ ಕನಸುಹೊತ್ತು ಮುನ್ನಡೆಯುತ್ತಾನೆ. ಒಂದು ಹಂತದಲ್ಲಿ ಅವನ ಆ ಬಾಳನ್ನು ಕಂಡು, ಹೆದರಿ ಅವನನ್ನು ತಿರಸ್ಕರಿಸಿದ್ದ ಅವನದೇ ತಮಾಷಾ ತಂಡದ ನಾಯಕಿ ಈಗ ಅವನೊಡನೆ ಜೀವನ ಸಾಗಿಸುವ ಆಸೆಯಲ್ಲಿ ಅವನ ಹಿಂದೆ ನಡೆಯುತ್ತಾಳೆ. ಚಿತ್ರ ಆರಂಭವಾಗುವುದು ಮತ್ತು ಕೊನೆಯಾಗುವುದು ಗುಣ ಒಂದು ಉನ್ನತ ಪ್ರಶಸ್ತಿಗೆ ಪಾತ್ರನಾಗುವ ಸನ್ನಿವೇಷದಲ್ಲಿ. ಜೀವನ ಸಾಧನೆಗೆ ಸಿಗುವ ಪ್ರಶಸ್ತಿ ಆತನಿಗೆ, ಅವನ ಕಲೆಗೆ, ಜೀವನ ಸಾಧನೆಗಾಗಿ ಸಿಕ್ಕಿರುತ್ತದೆ.

ಕಲಾವಿದನಾಗಿ ಅತುಲ್ ಕುಲಕರ್ಣಿ ಈ ಚಿತ್ರಕ್ಕಾಗಿ ಹಾಕಿರುವ ಶ್ರಮ ಅಪಾರ. ಅವರು ದೇಹವನ್ನು ಬೆಳೆಸಿ ಎಂಭತ್ತೈದು ಕೆ.ಜಿವರೆಗೆ ಬೆಳೆಸಿಕೊಂಡು ಮತ್ತೆ ಚಿತ್ರದಲ್ಲಿ ಅವರು ಹೆಣ್ಣಾಗಿ ಪರಿವರ್ತಿತರಾದಾಗಿನ ನಟನೆಗಾಗಿ ಹದಿನೈದು ಕೆ.ಜಿ ಇಳಿಸಿಕೊಂಡಿರುವುದು ಇವೆಲ್ಲಾ ಒಂದು ಭಾಗವಾದರೆ, ಹೆಣ್ಣಿನ ಹಾವಭಾವಗಳ ಅಧ್ಯಯನ, ನಟನೆಯ ಶೈಲಿ ಬದಲಾವಣೆ ಇತ್ಯಾದಿ ಕಲಾವಿದನಾಗಿ ಅತುಲ್ ರಿಗೆ ಇರುವ ಶ್ರದ್ಧೆಯನ್ನು ಎತ್ತಿತೋರಿಸುತ್ತದೆ. ಇನ್ನು ಇತರ ಕಲಾವಿದರೂ ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ನಟಿಸಿ ಚಿತ್ರಕ್ಕೆ ಅಂದವನ್ನು ತಂದುಕೊಟ್ಟಿದ್ದಾರೆ. ಒಟ್ಟಿನಲ್ಲಿ ಒಂದು ಅಪರೂಪದ ಚಿತ್ರವನ್ನು ನೋಡುವ ಅವಕಾಶವಾಯಿತು ‘ನಟರಂಗ್’ ಮೂಲಕ.

This entry was posted in Film reviews. Bookmark the permalink.

8 Responses to ನಟರಂಗ್!

  1. Pradeep ಹೇಳುತ್ತಾರೆ:

    Abhay: Thanks for the nice info. Marathi film industry, though most hurt by the bollywood mania has never allowed itself to die. We see a number of new experiments and original stories being conceived. Marathi film industry has asserted itself as a real hero. Bollywood might be for the world but I am here for Maharashtra, proves Marathi film industry. Wither Kannada industry? are they listening?

  2. ಶೆಟ್ಟರು (Shettaru) ಹೇಳುತ್ತಾರೆ:

    ಕನ್ನಡ ಬ್ಲಾಗ ಲೋಕದ ಸಮೀಕ್ಷೆ: ನೀವೂ ಭಾಗವಹಿಸಿ ಮತ್ತು ನಿಮ್ಮ ಗೆಳೆಯರಿಗೂ ತಿಳಿಸಿ

    ಆತ್ಮೀಯರೆ,

    ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.

    ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.

    ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.

    http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..

    ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ shettaru@gmail.com ಗೆ ಮಿಂಚಂಚೆ ಕಳುಹಿಸಿ.

    ಧನ್ಯವಾದಗಳೊಂದಿಗೆ

    ಈರಣ್ಣ ಶೆಟ್ಟರು ಮತ್ತು ಗ್ರಂಥಪಾಲಕ ಗೆಳೆಯರು

  3. ಜಿ೦ಕೆ ಸುಬ್ಬಣ್ಣ, ಪುತ್ತೂರು. ಹೇಳುತ್ತಾರೆ:

    ತಮಾಷಾ ಬಗ್ಗೆ ಕೇಳಿ ಕುತೂಹಲವಿತ್ತು, ಮರಾಠೀ ರ೦ಗಗೀತೆಗಳ ಬಗ್ಗೆ ಅಪಾರ ಕುತೂಹಲವಿದೆ, ರ೦ಗಗೀತೆಗಳು ಉತ್ತರಾದಿ ಗಾಯನದಿ೦ದ ಪ್ರಭಾವಿತ ಅ೦ತೆಯೇ ಉತ್ತರಾದಿ ಗಾಯನ, ಅದರಲ್ಲೂ ಕಿರಾನಾ ಘರಾನಾ ರ೦ಗಗೀತೆಗಳಿ೦ದ ಪ್ರಭಾವಿತ ಇರಬೇಕು. (ಕಿರಾನಾ ಘರಾನಾ ಹೆಸರು ಕಿರಾಣಿ ಅ೦ಗಡಿ ಎ೦ಬ
    ಅರ್ಥ ಕೊಡುತ್ತದೆ, ಎ೦ದರೆ ಉತ್ತರದ ಹಲವು ಘರಾನಾಗಳ ಆಕರ್ಷಕ ಅ೦ಶಗಳನ್ನು ಚೌಚೌ ನ೦ತೆ ಅಳವಡಿಸಿಕೊ೦ಡ ಘರಾನಾ ಎ೦ಬ ಅರ್ಥ ಎ೦ದು ಓದಿದ
    ನೆನಪು. ಕಿರಾನಾ ಘರಾನಾ ಮೀರಜ್ ಸುತ್ತಲಿನದಲ್ಲವೇ, ಹಾಗಾಗಿ ಮರಾಠೀ ರ೦ಗಗೀತೆಗಳ ಪ್ರಭಾವ ಖ೦ಡಿತ ಇರುತ್ತದೆ) ತಮಾಷಾದ ಹಾಡುಗಳು ಬಹುಶಃ
    ರ೦ಗಗೀತೆಗಳಿಗಿ೦ತ ಲಘು. ನಮ್ಮ ಊರಲ್ಲಿ ಬಹುಶ: ಇದುವರೆಗೆ ಆಗಿಲ್ಲ. ತಿರುಗಾಟದವರೂ ಅಥವಾ ಮೂಡಬಿದ್ರೆಯಲ್ಲೂ ಆದ೦ತಿಲ್ಲ. ತಮಾಷಾ ಮಾದರಿ ಹಾಡುಗಳು
    ಬಾಲೀವುಡ್ ನಲ್ಲಿ ಕೂಡಾ ಅಷ್ಟಾಗಿ ಇರುವುದಿಲ್ಲ ಅಲ್ಲವೇ ? ಸಿನೆಮಾದಲ್ಲಾದರೂ ನೋಡಬಹುದೇನೋ ? ಒಳ್ಳೇ ಸಿನೆಮಾ ರಿವ್ಯೂ (ಸಿನೆಮಾ ಮತ್ತು ರಿವ್ಯೂ ಎರಡೂ
    ಒಳ್ಳೆಯದು) ಓದಿದ೦ತಾಯ್ತು. ವ೦ದನೆಗಳು.

  4. Rajesh Naik ಹೇಳುತ್ತಾರೆ:

    Very interesting….!!
    Marathi cinema is getting really serious these days! long back i watched SHWASH- it was really a good work. i heard of another film- TINGALKYA [or something], a good friend of mine suggested me that its a must -watch. this also sounds like a good work- wish to watch it sometime.

  5. Niranjan Kaggere ಹೇಳುತ್ತಾರೆ:

    Adhbuta. Shwaas, Gabreecho Paus nantara mattondu sundara marathi cinema. Parichayisiddakke Dhanyavada.

  6. Sharath P S ಹೇಳುತ್ತಾರೆ:

    Atul Kulakarni has been tweeting about Natarang from quite a few days. I wish to watch it sometime.
    If you want to explore good Marathi cinema, this list might help – http://passionforcinema.com/best-of-marathi-cinema-2000-2009-part-1/

  7. B Suresha ಹೇಳುತ್ತಾರೆ:

    ಇದೊಂದು ಅಪರೂಪದ ಮಾನವೀಯ ಗುಣಗಳನ್ನುಳ್ಳ ಚಿತ್ರ ಈ ಚಿತ್ರದ ಡಿವಿಡಿ ಪ್ರತಿಯನ್ನು ಮರಾಠಿ ಗೆಳೆಯರೊಬ್ಬರು ನೀಡಿದ್ದರಿಂದಾಗಿ ನಾನೂ ಈ ಚಿತ್ರವನ್ನು ನೋಡಿದೆ.
    ಅತುಲ್ ಅವರ ನಟನೆಯಂತೂ ಮರೆಯಲಾಗದಂತಹುದು.
    ಈ ಸಿನಿಮಾ ನೋಡುತ್ತಾ ನನಗೆ ಗಿರೀಶ್ ಕಾಸರವಳ್ಳಿಯವರ ’ಬಣ್ಣದ ವೇಷ’ ಸಿನಿಮಾ ನೆನಪಿಗೆ ಬಂತು. ಗಿರೀಶರ ಚಿತ್ರದಲ್ಲಿ ನಟನೆ ಸಾಮಾಜಿಕ ಮತ್ತು ಆರ್ಥಿಕ ಆಯಾಮಾವಾಗಿ ಅನಾವರಣಗೊಳ್ಳುವುದಿಲ್ಲ. ಆದರೆ ’ನಟರಂಗ್’ ಒಂದು ವರ್ಗದ ಜನರ ಸಮಸ್ಯೆಯನ್ನು ಮಾತಾಡುತ್ತಲೇ ಒಬ್ಬ ನಟ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಛಿದ್ರವಾಗುವುದನ್ನ ತೋರುತ್ತದೆ.
    ಮೂಲ ಕಾದಂಬರಿಯನ್ನು ನಾನು ಓದಲಾಗಿಲ್ಲ. ಈ ಸಿನಿಮಾ ನನಗೆ ಮೂಲ ಕಾದಂಬರಿಯನ್ನು ಓದಲು ಪ್ರೇರಣೆ ನೀಡಿದೆ ಎನ್ನುವುದಂತು ಸತ್ಯ.
    ಮತ್ತೆ ಈ ಸಿನಿಮಾನ ನೆನಪಿಸಿದ್ದಕ್ಕೆ ವಂದನೆಗಳು.
    ನಾವು ಹೊರದೇಶದ ಪ್ರಯೋಗಗಳ ಬಗ್ಗೆ ಮಾತಾಡುವ ಹಾಗೆಯೇ ಹೆಚ್ಚು ಹೆಚ್ಚಾಗಿ ನಮ್ಮ ದೇಶದೊಳಗೆ ಆಗುತ್ತಿರುವ ಪ್ರಯೋಗಗಳ ಬಗ್ಗೆ ಮಾತಾಡಬೇಕು. ಆಗ ಮಾತ್ರ ಹೊಸ ಹುರುಪು ಸಮನಾಂತರ ಚಿತ್ರ ಚಳುವಳಿಗೆ ದಕ್ಕುವುದು ಸಾಧ್ಯ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s