ಸ್ವರಗಳ ಮಿಲನ ಭಾವಗಳ ಮೇಳಕ್ಕೆ!


ತೊಂಭತ್ತರ ದಶಕದಲ್ಲಿ ದೂರದರ್ಶನದ ಪ್ರೇಕ್ಷಕರಿಗೆ ಮರೆಯಲಾಗದ ಅನೇಕ ಕಾರ್ಯಕ್ರಮಗಳಲ್ಲಿ ಒಂದು ‘ಮಿಲೇ ಸುರ್ ಮೆರಾ ತುಮ್ಹಾರ’ ಎಂಬ ಐದು ನಿಮಿಷದ ಗೀತೆಯೂ ಒಂದು. ಇಂದು, ಇದೇ ಜನವರಿ ೨೬ಕ್ಕೆ ಅದೇ ಗೀತೆಯ ಹೊಸ ರೂಪ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ ಎಂದು ಕೇಳಿ ಮತ್ತೊಮ್ಮೆ ಮೂಲ ಹಾಡಿನ ಜಾಡು ಹಿಡಿದು ನಡೆದೆ ನಾನು. ಇದರ ಕಿರುಪರಿಚಯ ತಮಗೂ ಇಲ್ಲಿದೆ.

ಮೊದಲ ಬಾರಿಗೆ ೧೯೮೮ರ ಆಗಸ್ಟ್ ೧೫ರಂದು ದೆಹಲಿಯ ಕೆಂಪು ಕೋಟೆಯ ಮೇಲಿನಿಂದ ಪ್ರಧಾನಿಯವರ ಭಾಷಣದ ನೇರ ಪ್ರಸಾರ ಮುಗಿಯುತ್ತಿದ್ದಂತೆಯೇ ಮೊದಲ ಬಾರಿಗೆ ದೂರದರ್ಶನದಲ್ಲಿ ಸುಮಾರು ಐದು ನಿಮಿಷದ, ‘ಮಿಲೆ ಸುರ್ ಮೆರಾ ತುಮ್ಹಾರ’ (ಇದನ್ನು ‘ಎಕ್ ಸುರ್’ ಎಂದೂ ಕರೆಯಲಾಗುತ್ತದೆ) ಪ್ರಸಾರವಾಯಿತು. ಭಾರತದ ಹದಿನಾಲ್ಕು ಭಾಷೆಗಳಲ್ಲಿ (ಕನ್ನಡವೂ ಇದರಲ್ಲಿ ಸೇರಿದೆ) ನನ್ನ ಧ್ವನಿಗೆ ನಿಮ್ಮ ಧ್ವನಿಯ ಸೇರಿದಂತೆ ನಮ್ಮ ಧ್ವನಿಯು ಎನ್ನುವ ವಾಕ್ಯವನ್ನು ಪುನರುಚ್ಛರಿಸಲಾಗಿದೆ. ಭಾರತದ ವೈವಿಧ್ಯದಲ್ಲಿ ಏಕತೆ ಎನ್ನುವ ಮೂಲ ಕಲ್ಪನೆಯನ್ನು ಇಟ್ಟುಕೊಂಡು ಚಿತ್ರೀಕರಿಸಿರುವ ಈ ಗೀತೆಯನ್ನು ನೋಡುವುದು ಇಂದಿಗೂ ಮನೋಹರ ಅನುಭವ.

ದೂರದರ್ಶನವೋಂದೇ ಪ್ರಮುಖ ವಾಹಿನಿಯಾಗಿದ್ದ ಆ ಕಾಲದಲ್ಲಿ ಸರಕಾರವು ಜನತೆಗೆ ವಿವಿಧ ಸಂದೇಶಗಳನ್ನು ತಲುಪಿಸಲು ಐದು ನಿಮಿಷದ ಅನೇಕ ಕಿರು ಚಿತ್ರಗಳನ್ನು ತಯಾರಿಸುತ್ತಿತ್ತು. ‘ಏಕ್ ತಿತ್ಲೀ ಅನೇಕ್ ತಿತ್ಲಿಯಾಂ…’ ಹೀಗೆ ಆರಂಭವಾಗುತ್ತಿದ್ದ ಸಂದೇಶವೂ ನಿಮಗೆ ನೆನಪಿರಬಹುದು. ಹೀಗೆ ಆ ಕಾಲದಲ್ಲಿ ಭಾರತದಲ್ಲಿ ಲಭ್ಯವಾಗಿದ್ದ ಅತ್ಯುತೃಷ್ಟ ನಿರ್ಮಾಣದಲ್ಲಿ ದೂರದರ್ಶನ ಚಿತ್ರಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಇಂದು ದೂರದರ್ಶನದಲ್ಲಿ ಆ ಹೊಳಪು ಕಾಣೆಯಾಗಿರುವುದು ಬೇಸರ ತರಿಸುತ್ತದೆ. ಇಂದು ನೂರಾರು ದೃಶ್ಯ ವಾಹಿನಿಗಳು ನಮ್ಮ ದೇಶದಲ್ಲಿ ಕೆಲಸ ಮಾಡುತ್ತಿದ್ದು, ಇಡೀ ಕೆರೆಯೇ ಬಗ್ಗಡವಾಗಿದೆ. ವಾಹಿನಿಯಲ್ಲಿ ಶಿಷ್ಟತೆ ಮಾಯವಾಗುತ್ತಿದೆ. ಹೀಗೆ ಮುಸುಕಿದೀ ಮಬ್ಬಿನಲಿ, ಮತ್ತೊಮ್ಮೆ ಹಳೆಯ ನೆನಪು ಹುಟ್ಟುವಂತೆ ‘ಮಿಲೇ ಸುರ್ ಮೇರಾ ತುಮ್ಹಾರ’ ರೂಪುಗೊಳ್ಳುತ್ತಿರುವುದು ನಿಜಕ್ಕೂ ಆಹ್ಲಾದಕರ.

ಮೂಲ ಗೀತೆಯ ಚಿತ್ರದಲ್ಲಿ, ಆ ಕಾಲದ ಅನೇಕ ದಿಗ್ಗಜ ಕಲಾವಿದರು ಈ ಗೀತೆಯನ್ನು ರೂಪಿಸುವಲ್ಲಿ ಕೆಲಸ ಮಾಡಿದ್ದರು. ಅಮಿತಾಬ್ ಬಚ್ಚನ್, ಮಿಥುನ್ ಚಕ್ರವರ್ತಿ, ಕಮಲಾ ಹಾಸನ್, ರೇವತಿ, ಜಿತೇಂದ್ರ, ವಹಿದಾ ರೆಹಮಾನ್, ಹೇಮಾ ಮಾಲಿನಿ, ತನುಜ, ಶರ್ಮಿಳಾ ಟಾಗೋರ್, ಶಬನಾ ಅಝ್ಮಿ, ಓಂ ಪುರಿ, ಮೀನಾಕ್ಷಿ ಶೇಶಾದ್ರಿ, ಮಲ್ಲಿಕಾ ಸಾರಾಬಾಯ್, ಮೃಣಾಲ್ ಸೇನ್, ಭೀಮ್ ಸೇನ್ ಜೋಶಿ, ಬಾಲ ಮುರಳೀ ಕೃಷ್ಣ, ಲತಾ ಮಂಗೇಶ್ಕರ್, ನರೇಂದ್ರ ಹೀರ್ವಾನಿ, ಪ್ರಕಾಶ್ ಪಡುಕೋಣೆ, ಅರುಣ್ ಲಾಲ್, ಸಯ್ಯದ್ ಕೀರ್ಮಾನಿ ಹೀಗೆ ಅನೇಕ ಅಥಿರಥ ಮಹಾರಥರು ಈ ಐದು ನಿಮಿಷದಲ್ಲಿ ಹಾದು ಹೋಗುತ್ತಾರೆ. ಮೊದಲ ಬಾರಿಗೆ ಪ್ರಸಾರವಾಗುತ್ತಲೇ ಭಾರತದಾದ್ಯಂತ ಜನಪ್ರಿಯತೆಯನ್ನು ಗಳಿಸಿದ ಈ ಗೀತೆಗೆ ಲೂಯಿಸ್ ಬಾಂಕ್ಸ್ ಸಂಗೀತ ಸಂಯೋಜನೆ ಇದ್ದು, ಪೀಯೂಶ್ ಪಾಂಡೆ ಸಾಹಿತ್ಯ ರಚಿಸಿದ್ದಾರೆ. ಸುರೇಶ್ ಮಲ್ಲಿಕ್ ನಿರ್ದೇಶನ ಮಾಡಿದ್ದಾರೆ ಹಾಗೂ ಲೋಕ್ ಸೇವಾ ಸಂಚಾರ್ ಪರಿಷದ್ ಇದರ ನಿರ್ಮಾಪಕರು.

ಇಂದು ಮತ್ತೆ ಈ ಗೀತೆ ರೂಪಗೊಳ್ಳುತ್ತಿದೆ. ಈ ಹೊಸ ರೂಪದಲ್ಲಿ, ಶಂಕರ್ – ಎಹೆಸಾನ್ – ಲೋಯ್ ಸೇರಿದಂತೆ ಅನೇಕ ಯುವ ಪೀಳಿಗೆಯ ಸಂಗೀತಕಾರರು ಇಂದಿನ ಭಾರತದ ಮುಖವಾಗಲಿದ್ದಾರೆ. ಹೊಸ ರೂಪದಲ್ಲಿ ಚಿತ್ರೀಕರಣವಾಗಿ, ನಮ್ಮೆದುರು ಇದೇ ತಿಂಗಳಲ್ಲಿ ಬರಲಿದೆ ಹೊಸ ‘ಮಿಲೇ ಸುರ್ ಮೇರಾ ತುಮ್ಹಾರ’ ಬನ್ನಿ ಮತ್ತೆ ಜತೆಗೂಡಿಸೋಣ ಸ್ವರಗಳನ್ನು ಒಗ್ಗಟ್ಟಾಗಿ ನುಗ್ಗೋಣ ಹೊಸ ಭಾರತವನ್ನು ರೂಪಿಸುವಲ್ಲಿ ನಮ್ಮ ಕೊಡುಗೆಯನ್ನು ಕೊಡೋಣ.

This entry was posted in Daily Blog, Television. Bookmark the permalink.

9 Responses to ಸ್ವರಗಳ ಮಿಲನ ಭಾವಗಳ ಮೇಳಕ್ಕೆ!

 1. ಚೇತನ್ ಹೊಸಕೋಟೆ ಹೇಳುತ್ತಾರೆ:

  ಫಿರ್ ಮೆಲೇ ಸುರ್ ಮೇರಾ ತುಮ್ಹಾರ……ವೀಕ್ಷಿಸಿದೆ ಆಹ್ಲಾದಕರವಾಗಿದೆ ದೃಶ್ಯ ಸಂಯೋಜನೆ ಅದ್ಭುತ, ಸಂಗೀತ ಅತ್ಯದ್ಭುತ, ಸರೋದ್ ಸಂತೂರ್ ತಬಲ ಇನ್ನಿತರ ಭಾರತೀಯ ಮೇಳದ ದೇಶದ ಗೀತೆ ಮತ್ತೊಮ್ಮೆ ವಿವಿಧತೆಯಲ್ಲಿ ಏಕತೆ ಎಂಬ ಭಾರತೀಯ ಮೂಲ ಮಂತ್ರವನ್ನು ಜಪಿಸುವಂತೆ ಮಾಡಿದೆ… ಆದರೇ ಬಾಲಿವುಡ್ಡಿನ ಕಾರುಬಾರು….ಕನ್ನಡದ ನಿರ್ಲಕ್ಷ್ಯ ಬೇಸರ ಮೂಡಿಸಿದೆ…

  ಚೇತನ್

 2. my pen from shrishaila ಹೇಳುತ್ತಾರೆ:

  ಪ್ರೀತಿಯ ಅಭಯ,
  ಈ ನಿನ್ನ ಲೇಖನ ನನ್ನನ್ನು ನನ್ನ ಹಳೆ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ನಾವು ಸುಂದರ ಯೋಚನೆಗಳನ್ನು ಮಾಡಿದಾಗ ಲೋಕ ಸುಂದರವಾಗಿ ಕಾಣಲು ಸಹಾಯವಾಗುತ್ತದೆ.ನಿನ್ನ ವೃತ್ತಿ ನಮ್ಮಂತವರು ಲೋಕವನ್ನು ಅರ್ಥೈಸಲು, ಅದರ ವೈವಿಧ್ಯತೆಗಳನ್ನು ಕಾಣಲು ಸಹಾಯ ಮಾಡುತ್ತದೆ.ನಿನಗೆ ಶುಭವಾಗಲಿ.
  ಶೈಲಕ್ಕ

 3. S Raghavendra Bhatta ಹೇಳುತ್ತಾರೆ:

  Preethiya Abhaya,

  nija hEla bEkendare eechina aavritti moola miLE sur geetheya pElava aNakavaagi kaaNisitu !!
  naanEnoo BaalivuDDina dvEshi allavaadaroo dEshada saamaajika mattu saamskritika badukina vividhate mattu gaaDhateyannu idu sOmkiddE illavalla!! addhooriya bennu hatti kOTi kOTi suridirabahudu. adara hattaru paTTu dOchalu kaarporaTariddaare.
  Kale elli? AdE sonne !!
  RaaghavEndra BhaTTa
  1 P M / 01 02 2010

 4. rukminimala ಹೇಳುತ್ತಾರೆ:

  you tube nalli hadu keli khushi patte. thanks

 5. ರಶ್ಮಿ. ಹೇಳುತ್ತಾರೆ:

  “ಮಿಲೇ ಸುರ್ ಮೇರಾ ತುಮ್ಹಾರಾ..” ಅಭಯ ಬರೆಯುತ್ತಿದುದು ನೋಡಿದ್ದೆ. ಗೊತ್ತಾಗಿರ್ಲಿಲ್ಲ, ಅದು ಇದೇ ವೀಡಿಯೋ ಕುರಿತು ಎಂದು. ಈ ಗೀತೆ ಬಿಡುಗಡೆಯಾದಾಗ ನಾನಿನ್ನೂ ಹುಟ್ಟೀಯೇ ಇರಲಿಲ್ಲ. ಹೇಗೋ ಎಲ್ಲೋ ಹಾಡು ಕೇಳಿದ್ದೇನೆ. ಇಂದು ಕೇಳಿದಾಗ ಯಾವುದೋ ಜನ್ಮದಲ್ಲಿ ಕೇಳಿದ ಹಾಗಾಗುತ್ತದೆ. ತಿಳುವಳಿಕೆ ಬರುವ ಹೊತ್ತಿಗಾಗಲೇ ಮನೆಗೆ ‘ಉದಯಾ TV’ ಯೂ ಬಂದಿತ್ತು!

 6. suhas ಹೇಳುತ್ತಾರೆ:

  nanna nenapinangaladalli innu e hadu ide sumaru thombhattu dashakada poorvardadalli e hadu hindi dooradarshanadalli baruttittu. Idara hosa avataravannu poornavagi naaninnu veekshisilla.

 7. Pallavi ಹೇಳುತ್ತಾರೆ:

  ಮೊದಲಿನ ಮಿಲೆ ಸುರ್ ಮನಸ್ಸಲ್ಲಿ ಹೇಗೆ ಅಚ್ಚೊತ್ತಿದೆ ಎಂದರೆ ಈಗಿನ ಹೊಸ ಹಾಡಿಗೆ ಅದನ್ನು ಅಳಿಸಿ ತನ್ನ ಛಾಪನ್ನು ಮೂಡಿಸಲು ಸಾಧ್ಯವಾಗಿಲ್ಲ.

 8. M S RAO ಹೇಳುತ್ತಾರೆ:

  The original was short and sweet and gave imporatnce to almost all. The new one is blown up(too long) and stands for bollywood and dynastic. A very very poor rating. it attracts only because of the original music..

 9. Sindhoo ಹೇಳುತ್ತಾರೆ:

  ಎಮ್. ಎಸ್. ರಾವ್ ಎಂಬವರು ಬರೆದ ಕಮೆಂಟ್ ನನಗೇನು ಅನಿಸಿತೋ ಅದನ್ನೇ ಹೇಳಿದೆ. ಅತಿ ಉತ್ಸಾಹದಿಂದ ಹೊಸ ಗೀತೆಗಾಗಿ ಕಾಯುತ್ತಿದ್ದ ನಾನು ಸಿನಿಮಾ ತಾರೆಯರು ಬೇರೆ ಬೇರೆ ರಾಗದಲ್ಲಿ ಒಂದೇ ಸಾಲನ್ನು ಪದೇ ಪದೇ ಹೇಳಿದ್ದನ್ನು ಕೇಳಿ ಬೇಸರಿಸಿಕೊಂಡೆ. ಬಹುಶಃ ಹಳೆಯ ಗೀತೆ ಅಷ್ಟು ಮೆಚ್ಚುಗೆಯಾದುದರಿಂದ ನಿರೀಕ್ಷೆಗಳು ಜಾಸ್ತಿಯಾಗಿ ಹೀಗನ್ನಿಸಿತೇನೋ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s