ಗುರುವರ್ಯರಿಗೆ ಒಂದು ನುಡಿನಮನ


ಶಬ್ದಗಳಲ್ಲಿ ಹಿಡಿದಿಡಲಾರದ್ದನ್ನು ವಾಕ್ಯದಲ್ಲಿ ಪೋಣಿಸುವ ಪ್ರಯತ್ನ ಮಾಡುತ್ತಿದ್ದೇನೆ ನಾನು. ಮೂರು ದಿನದಿಂದ ತುಡಿಯುತ್ತಿದ್ದರೂ ಇಂದು ಬರೆಯಲು ಆರಂಭಿಸಿದ್ದೇನೆ. ಜನವರಿ ಹತ್ತನೇ ತಾರೀಕಿನಂದು ಶಿಕಾರಿ ಚಿತ್ರದ ಸಂಕಲನ ಮಾಡುತ್ತಾ ಕುಳಿತಿದ್ದಾಗ ಪ್ರಾಥಸ್ಮರಣೀಯರಾದ ಗುರು ಎಸ್. ರಾಮಚಂದ್ರರ ನಿಧನದ ಸುದ್ದಿ ಬಂದಪ್ಪಳಿಸಿತು. ಅದೇ ಸಂಜೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದು ತಕ್ಷಣ ಅತ್ತ ಹೊರಟೆ. ಮರುದಿನ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ನೀವೂ ಓದಿರಬಹುದು. ಅವರ ವೃತ್ತಿಜೀವನದ ಸಾಧನೆಗಳನ್ನು ನೀವು ಈಗಾಗಲೇ ತಿಳಿದಿರಬಹುದು. ಆದರೆ ಇವೆಲ್ಲವಕ್ಕಿಂತ ಮೀರಿ ಅವರೊಡನೆ ನನಗಿದ್ದ ಸಂಬಂಧದ ಕುರಿತಾಗಿ ಬರೆಯಲು ಹೊರಟಿದ್ದೇನೆ ಇಲ್ಲಿ.

ನಾನು ಕನ್ನಡದಲ್ಲಿ ಸಧಬಿರುಚಿಯ ಚಿತ್ರವನ್ನು ಮೊದಲು ನೋಡಿದ್ದೆಂದರೆ ಅದು ಗಿರೀಶ್ ಕಾಸರವಳ್ಳಿಯವರ ಚಿತ್ರ ಘಟಶ್ರಾದ್ಧ. ಆಗಿನ್ನೂ ತಾಂತ್ರಿಕ ವಿಚಾರಗಳ ಕುರಿತಾಗಿ ಏನೂ ತಿಳಿದಿರಲಿಲ್ಲ. ಚಿತ್ರ ಸಂಪೂರ್ಣವಾಗಿ ಅರ್ಥವೂ ಆಗಿರಲಿಲ್ಲ. ಆ ಚಿತ್ರಕ್ಕೆ ಸಂಬಂಧಿಸಿದ್ದೆಲ್ಲವೂ ಪವಿತ್ರ ಎಂದು ಕಾಣುತ್ತಿತ್ತು, ಭಾಸವಾಗುತ್ತಿತ್ತು. ಕೆಲವು ಸಮಯದ ನಂತರ ಚಿತ್ರವನ್ನು ಶಾಸ್ತ್ರೀಯವಾಗಿ ಅಭ್ಯಸಿಸಲು ಆರಂಭಿಸಿದಾಗ ಅದರ ಕ್ಯಾಮರಾ ಕೆಲಸ ಎಸ್. ರಾಮಚಂದ್ರರವರದ್ದು ಎಂದು ತಿಳಿದು ಅಂದಿನಿಂದ ಅವರ ಬಗ್ಗೆ ಅದೊಂದು ವಿಚಿತ್ರ ಭಯ ಮಿಶ್ರಿತ ಗೌರವ. ಆಗಿನ್ನೂ ಭೇಟಿ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಮುಂದೆ ಮಾಲ್ಗುಡಿ ಡೇಸ್ ದಾರವಾಹಿಯೂ ಇವರದ್ದೇ ಕ್ಯಾಮರಾಚಳಕದಲ್ಲಿ ರೂಪಿತವಾದದ್ದು ಎಂದಾಗ ಮತ್ತಷ್ಟು ಗೌರವ, ಭಯ ಹೆಚ್ಚಳ. ಎಫ಼್.ಟಿ.ಐ.ಐನಲ್ಲಿ ಕಲಿಯುತ್ತಿರುವಾಗ ಗಿರೀಶ್ ಕಾಸರವಳ್ಳಿಯವರು, ಎಸ್. ರಾಮಚಂದ್ರ, ಎಚ್. ಎಂ ರಾಮಚಂದ್ರ ಇತ್ಯಾದಿ ಕನ್ನಡದ ಚಿತ್ರ ರಂಗದ ದಿಗ್ಗಜರು ಕಲಿತ ಜಾಗದಲ್ಲೇ ನಾನೂ ಕಲಿಯುತ್ತಿದ್ದೇನೆ ಎಂಬ ಪುಳಕ. ಇದೇ ಸಮಯದಲ್ಲಿ ಮಂಗಳೂರಲ್ಲಿ ಗಿರೀಶ್ ಕಾಸರವಳ್ಳಿಯವರು ಹಸೀನ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದರು. ನಾನೂ ಅದೇ ಸಮಯದಲ್ಲಿ ಊರಲ್ಲಿದ್ದ ಕಾರಣ ಚಿತ್ರೀಕರಣ ನೋಡಲು ಹೊರಟು ನಿಂತೆ. ಪುಣ್ಯಪುರುಷರ ಭೇಟಿಗೆ ಹೋಗುವ ಭಕ್ತನಂತೆ ಒಳಗೇ ಒಂಥರಾ ಭಯ, ಭಕ್ತಿ. ಅಷ್ಟರಲ್ಲಿ ಅದಕ್ಕೆ ಕ್ಯಾಮರಾ ಮಾಡುತ್ತಿರುವ ಎಸ್. ರಾಮಚಂದ್ರ ಬಹಳ ಮುಂಗೋಪಿ ಹುಷಾರಾಗಿರು ಎಂದು ನನಗೆ ಎಚ್ಚರಿಕೆ ಸಿಕ್ಕಿತ್ತು. ಸ್ಥಳಕ್ಕೆ ಹೋದಾಗ ರಾಮಚಂದ್ರ ಸರ್ ಟ್ರಾಕ್ ಮೇಲೆ ಕುಳಿತಿದ್ದರು. ನನ್ನ ಪರಿಚಯ ಮಾಡಿಕೊಂಡೆ. “ಹಾ! ಮಂಗಳೂರಿನವನೆಯೋ… ಸರಿ… ಎಫ಼್.ಟಿ.ಐ.ಐನಲ್ಲಿ ನಿರ್ದೇಶನ ಕಲಿಯುತ್ತಿದ್ದೀಯೋ ಸರಿ… ಒಳ್ಳೆಯದಾಗಲಿ” ಎಂದರು. ಸಧ್ಯ ಅವರಿಗೆ ಸಿಟ್ಟು ಹುಟ್ಟಿಸದೇ ಆಶಿರ್ವಾದ ಪಡೆದ ಸಂತೋಷದಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ವೃತ್ತಿಸಂಬಂಧವಾಗಿ ಬಂದು ನೆಲೆಸಿದಾಗಲೇ ಮತ್ತೆ ರಾಮಚಂದ್ರರನ್ನು ಕಾಣುವ ಅವಕಾಶ ಸಿಕ್ಕಿದ್ದು. ಸುಚಿತ್ರ ಚಿತ್ರ ಸಮೂಹದ ಸಕ್ರಿಯ ಸದಸ್ಯರಲ್ಲೊಬ್ಬರಾಗಿದ್ದ ರಾಮಚಂದ್ರರನ್ನು ಪ್ರತಿ ಆದಿತ್ಯವಾರ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ನಾನೂ ನನ್ನ ಗೆಳೆಯ ವಿಕ್ರಂ ಸೇರಿಕೊಂಡು ಗುಬ್ಬಚ್ಚಿಗಳು ಚಿತ್ರವನ್ನು ಮಾಡಲು ಹೊರಟಾಗ ರಾಮ ಚಂದ್ರರನ್ನೂ ಭೇಟಿಯಾಗಿ ಅವರ ಸಲಹೆ, ಆಶಿರ್ವಾದ ಪಡೆದಿದ್ದೆವು. ಹೀಗೆ ಆಗಿಂದಾಗ್ಗೆ ಭೇಟಿ, ಕೊಂಚ ಮಾತು ಆರಂಭವಾಗಿತ್ತು. ಅವರ ಬಗ್ಗೆ ಇದ್ದ ಗೌರವ ಇನ್ನಷ್ಟು ಹೆಚ್ಚಾಗುತ್ತಾ ಭಯ ಮಾಯವಾಗುತ್ತಾ ಸಾಗಿತ್ತು. ಖಂಡಿತ ಮಾತಿನ, ನಿಷ್ಕಪಟಿ, ತೀವ್ರ ಅಧ್ಯಯನಾಸಕ್ತಿಯುಳ್ಳ, ಚಟುವಟಿಕೆಯ ಮನುಷ್ಯ ರಾಮಚಂದ್ರರು.

ಗುಬ್ಬಚ್ಚಿಗಳು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಾಗ ನನ್ನ ಕುಟುಂಬಸ್ಥರು ಅನುಭವಿಸಿದಷ್ಟೇ ಸಂತೋಷ ಇವರೂ ಅನುಭವಿಸಿದ್ದರು. ಅಷ್ಟರಲ್ಲಾಗಲೇ ನಾನು ಮದುವೆಯಾಗಿದ್ದೆ. ನನ್ನ ಪತ್ನಿ ರಶ್ಮಿಯನ್ನು ತಮ್ಮ ಮಗಳಂತೇ ಭಾವಿಸಿ ನಮ್ಮಿಬ್ಬರನ್ನೂ ಗಾಢವಾಗಿ ಹಚ್ಚಿಕೊಂಡರು. ಇಂಥದ್ದೇ ಒಂದು ದಿನ ನನ್ನನ್ನು ಕರೆದು ತನ್ನ ಮನೆಯಲ್ಲಿ ಒಂದು ಬಾಡಿಗೆಗೆ ಕೊಡುವ ಭಾಗವಿದೆ. ನೀವಿಬ್ಬರೂ ಅಲ್ಲಿ ಬಂದಿದ್ದರೆ ನನಗೆ ಸಂತೋಷ ಎಂದರು. ಅವರ ಮನೆಯಿದ್ದದ್ದು ಬಹಳ ಒಳ್ಳೆಯ ಜಾಗದಲ್ಲಿ, ಅದಲ್ಲದೇ ಪೇಟೆಯ ಹೃದಯಭಾಗದಲ್ಲಿ, ನಾವಾಗ ಇದ್ದ ಮನೆಗಿಂತ ಬಹಳ ವಿಶಾಲವಾದ ಮನೆ ಇವೆಲ್ಲಕ್ಕಿಂತ ಹೆಚ್ಚಾಗಿ ಗುರುಗಳ ಸಾನಿಧ್ಯದಲ್ಲಿ ವಾಸ. ನನಗೆ ಇದಕ್ಕಿಂತ ಹೆಚ್ಚಿನದ್ದೇನು ಬೇಕು? ಆದರೆ ಅಂಥಾ ಒಳ್ಳೆಯ ಸ್ಥಳದಲ್ಲಿ ಮನೆ ಬಾಡಿಗೆ ಕಟ್ಟಲಾದೀತೇ ಎಂದು ನಮಗೆ ಸಂಶಯ. ನಮ್ಮ ದ್ವಂದ್ವ ಅರಿತ ಗುರುಗಳು, ಅರ್ಧಕ್ಕೂ ಕಡಿಮೆ ಬಾಡಿಗೆ ಹೇಳಿ, ಜೊತೆಗೆ ಯಾವ ಠೇವಣಿಯೂ ಬೇಡ ಎಂದು, ಜೊತೆಗೆ ಎಲ್ಲಾ ರೀತಿಯ ಸೌಕರ್ಯಗಳನ್ನೂ ಒದಗಿಸಿ ಈಗ ಬಾ ಎಂದರು. ನಾನೂ ರಶ್ಮಿಯೂ ಮೂಕವಿಸ್ಮಿತರಾದೆವು. “ಅಭಯ… ನಾನು ಮನೆಯನ್ನು ಕಟ್ಟಿ ಬಾಡಿಗೆಯಲ್ಲಿ ಜೀವಿಸಬೇಕಿಲ್ಲ. ನನ್ನ ಸರಳ ಜೀವನವನ್ನು ಸಮೃದ್ಧವಾಗಿ ಜೀವಿಸಲು ನನಗೆ ಸುದೈವದಿಂದ ಅನುಕೂಲವಿದೆ. ಸಾಯುವ ಮುನ್ನ, ನನ್ನ ಚಿತ್ರರಂಗದ ಹೊಸ ಪೀಳಿಗೆಗೆ ನಾನೇನು ಮಾಡಿದ್ದೇನೆ ಎಂದು ನನ್ನ ಮುಂದೆ ಪ್ರಶ್ನೆ ಏಳುತ್ತದೆ. ಹೀಗಾಗಿ ನೀನೂ ರಶ್ಮಿಯೂ ನಮ್ಮ ಕಣ್ಣೆದುರು ಇದ್ದರೆ, ಅಭಿವೃದ್ಧಿಹೊಂದಿದರೆ ಅಷ್ಟೇ ನನಗೆ ಸಂತೋಷ” ಎಂದರು ಗುರುಗಳು. ಎಂಥಾ ಮಾತು! ಆದರೆ ಈ ಮಾತನ್ನಾಡಿ ಕೇವಲ ನಾಲ್ಕೇ ತಿಂಗಳಲ್ಲಿ ಗುರುಗಳು ಹೀಗೆ ಅಕಾಲಿಕವಾಗಿ ನಮ್ಮನ್ನು ಬಿಟ್ಟುಹೋಗುತ್ತಾರೆಂದು ಅಂದು ನಾವ್ಯಾರೂ ಊಹಿಸಿಯೂ ಇರಲಿಲ್ಲ. ಗುರುಗಳಿಗೆ ಅದೇಕೆ ಅಂಥಾ ಅವಸರವೋ?

ನಾನೊಬ್ಬನೇ ಅದೃಷ್ಟವಂತನಲ್ಲ, ಗುರುಗಳು ತಮ್ಮ ವೃತ್ತಿಜೀವನದುದ್ದಕ್ಕೂ ಅನೇಕರನ್ನು ಪ್ರಭಾವಿತಗೊಳಿಸುತ್ತಾ, ಕನ್ನಡ ಚಿತ್ರರಂಗಕ್ಕೆ ಹೊಸತನವನ್ನು ತರುವ ಪ್ರಯತ್ನಕ್ಕೇ ತಮ್ಮ ವೃತ್ತಿಜೀವನವನ್ನೂ, ವೈಯಕ್ತಿಕ ಜೀವನವನ್ನೂ ಮುಡಿಪಾಗಿರಿಸಿಟ್ಟವರು. ವೃತ್ತಿಯಲ್ಲಿ ಕ್ಯಾಮರಾ ಸಹಚರಿಯಾದರೂ, ರಾಮಚಂದ್ರರ ಆಸಕ್ತಿಯ ಹರವು ತುಂಬಾ ವಿಸ್ತಾರವಾದದ್ದು. ಅಪಾರ ಓದುವಣಿಗೆ ಮಾಡುತ್ತಿದ್ದ ಇವರಿಗೆ ಕಂಪ್ಯೂಟರ್ ಜ್ಞಾನ ಚೆನ್ನಾಗಿತ್ತು. ಹೊಸ ತಂತ್ರಜ್ಞಾನದ ಸಾಧ್ಯತೆಗಳು, ಚಿತ್ರರಂಗದ ಆಗುಹೋಗುಗಳ ಪ್ರಜ್ಞೆ ಇವೆಲ್ಲವುಗಳ ಕಡೆಗೆ ಗುರುಗಳು ಸದಾ ಜಾಗೃತರಾಗಿದ್ದರು. ಬಹಳ ಸ್ವಾಭಿಮಾನಿ, ನಿಗರ್ವಿ ಅಪರೂಪದ ವ್ಯಕ್ತಿತ್ವವನ್ನು ಗುರುಗಳು ಹೊಂದಿದ್ದರು. ತಮ್ಮ ಮನೆಯ ನಲ್ಲಿಯ ವಾಶರ್ ಬದಲಿಸುವುದರಿಂದ ಹಿಡಿದು, ಕಡಿಮೆ ಖರ್ಚಿನಲ್ಲಿ ಕಚ್ಚಾ ಚಿತ್ರಮಂದಿರವನ್ನು ರೂಪಿಸುವಲ್ಲಿಯವರೆಗೆ ಎಲ್ಲದಕ್ಕೂ ಗುರು ರಾಮಚಂದ್ರರು ಸೈ. ಸಾವಯವ ಅಕ್ಕಿಯ ಹಿರಿಮೆ ಅರಿತಿದ್ದ ಅವರು, ಬೆಂಗಳೂರಿನ ಗಲ್ಲಿ ಗಲ್ಲಿಗಳನ್ನು ಸುತ್ತಿ ಎಲ್ಲಿ ಅತ್ಯಂತ ಒಳ್ಳೆಯ ಗುಣಮಟ್ಟದ ಸಾವಯವ ಅಕ್ಕಿ ಸಿಗುತ್ತದೆ ಎಂದು ಕಂಡುಹಿಡಿಯುವುದಾಗಲೀ, ನಲ್ಲಿಯಡಿಯಲ್ಲಿ ಇಡುವ ಇಟ್ಟಿಗೆ ಬೀಳುವ ನೀರಿನಲ್ಲಿ ಕರಗದಂತೆ ಮಾಡಲು ಅದಕ್ಕೆ ಕೆಂಪುಬಣ್ಣದ ಪೈಂಟ್ ಹೊಡೆಯುವುದಾಗಲಿ, ಚಿತ್ರರಂಗದ ತಮ್ಮ ಅನುಭವಗಳನ್ನು ಸ್ವಾರಸ್ಯಕರವಾಗಿ ವಿವರಿಸುವುದಾಗಲಿ, ಚಲನ ಚಿತ್ರವೊಂದನ್ನು ಛಿದ್ರಗೊಳಿಸಿ ಅದನ್ನು ವ್ಯಾಖ್ಯಾನಿಸುವುದೇ ಆಗಲಿ, ಹೊರದೇಶದ ಸಬ್ ಟೈಟಲ್ ಹೊಂದಿದ ಚಿತ್ರಗಳನ್ನು ಸಂಗ್ರಹಿಸಿ, ಅದನ್ನು ಇಲ್ಲಿನವರಿಗೆ ಓದಲು ಅನುಕೂಲವಾಗುವಂತೆ ಪರಿವರ್ತಿಸುವುದೇ ಆಗಲಿ, ಹೀಗೆ ಚಿತ್ರವಿಚಿತ್ರದ ಕೆಲಸಗಳನ್ನು ಮಾಡುತ್ತಾ ತೀವ್ರ ಜೀವನವನ್ನು ಜೀವಿಸುತ್ತಿದ್ದರು ನಮ್ಮ ಗುರುಗಳು ತಮ್ಮ ೬೫ನೇ ವಯಸ್ಸಿನಲ್ಲೂ. ಬೆಂಗಳೂರಿನಲ್ಲಿ ನಡೆಯುವ ಅನೇಕ ಸದಭಿರುಚಿಯ ಚಿತ್ರ ಚಟುವಟಿಕೆಗಳಲ್ಲಿ ವೇದಿಕೆಯ ಹಿಂದೆ, ಪಾದರಸದಂತೆ ಓಡಾಡುತ್ತಾ ಎಲ್ಲವನ್ನೂ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುತ್ತಾ, ಎಲ್ಲೂ ತನ್ನ ಹೆಸರು ಬರದಂತೆ, ತನ್ನ ತಾನು ಮೆರೆಯದ ಜಾಗೃತ ಪ್ರಜ್ಞೆಯೊಂದಿಗೆ ನಮ್ಮ ಗುರು ರಾಮಚಂದ್ರರು ಇದ್ದೇ ಇರುತ್ತಿದ್ದರು.

ತಮ್ಮ ಕಲಿಕೆಯ ದಿನಗಳಲ್ಲಿ ಮನೆಯವರಿಂದ ದುಡ್ಡಿಗೆ ಕೈಚಾಚಬಾರದೆಂದು ತಾವು ಕಲಿತಿದ್ದ ಫ್ರೆಂಚನ್ನು ಜಯಾಬಾಧುರಿಯವರಿಗೆ ಕಲಿಸುತ್ತಿದ್ದುದ್ದು (ಅವರೂ ಎಫ಼್.ಟಿ.ಐ.ಐ ಪದವೀಧರೆ) ನಮೀಬಿಯಾದ ಯಾವುದೋ ವಿದ್ಯಾರ್ಥಿಗೆ ಇಂಗ್ಲೀಷಲ್ಲಿ ನೋಟ್ಸ್ ಬರೆದುಕೊಡುತ್ತಿದ್ದುದು ಇತ್ಯಾದಿ ರೀತಿಯಲ್ಲಿ ಹಣ ಸಂಗ್ರಹಿಸುತ್ತಾ ವಿದ್ಯಾಭ್ಯಾಸ ಮಾಡಿದ ಅಪರೂಪದ ಸ್ವಾಭಿಮಾನಿ ನಮ್ಮ ಗುರುಗಳು. ಅದೇ ತಾವು ಇನ್ನೊಬ್ಬರಿಗೆ ಕೊಡುವ ಸಂದರ್ಭ ಬಂದಾಗ, ಬೆಚ್ಚದಿರುವ ಸ್ವಭಾವ ರಾಮಚಂದ್ರರದ್ದು. ಪುತ್ತೂರಿನ ಹುಡುಗನೊಬ್ಬ ಕ್ಯಾಮರಾ ಕಲಿಯಲು ಶ್ರಮಪಡುತ್ತಿದ್ದುದು ಹೇಗೋ ನಮ್ಮ ಗುರುಗಳಿಗೆ ಗೊತ್ತಾಗಿ ಅವನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ಅವನಿಗೆ ತಮ್ಮಲ್ಲಿದ್ದ ಲೈಟ್ ಮೀಟರನ್ನೂ ಕೊಟ್ಟು ಒಂದೆರಡು ವರ್ಷದಷ್ಟರಲ್ಲಿ ಅವನನ್ನು ಸ್ವಯಂಪೂರ್ಣ ಕ್ಯಾಮರಾ ಮನ್ ಮಾಡಿ ಒಂದು ಸ್ವತಂತ್ರ ಚಿತ್ರವನ್ನೂ ವಹಿಸಿಕೊಟ್ಟು ಅವನಿಗೊಂದು ದಾರಿ ತೋರಿಸಿದ ಉದಾಹರಣೆ ಸಧ್ಯದಲ್ಲಷ್ಟೇ ನನ್ನ ಅರಿವಿಗೆ ಬಂತು.

ಯಕ್ಷಗಾನದ ತೀವ್ರ ಆಸಕ್ತಿ ಹೊಂದಿದ್ದ ಗುರುಗಳು, ನಾನು ಮಾಡಿದ ಯಕ್ಷಗಾನ ದಾಖಲೆಯ ಕಿರುಪ್ರಯತ್ನಗಳನ್ನೆಲ್ಲಾ ಸಂಗ್ರಹಿಸಿ, ಆಸಕ್ತಿಯಿಂದ ಗ್ರಹಿಸಿ, ಮುತುವರ್ಜೆಯಿಂದ ತಮ್ಮ ಸಲಹೆ, ಮಾರ್ಗದರ್ಶನವನ್ನು ಕೊಡುತ್ತಿದ್ದರು. ನನ್ನ ಬ್ಲಾಗನ್ನು ಸದಾ ಓದಿ ಬೆನ್ನು ತಟ್ಟುತ್ತಿದ್ದರು. ತಪ್ಪಿದ್ದರೆ ತಿದ್ದುತ್ತಿದ್ದರು, ಹೀಗೇ ಬರೆಯುತ್ತಿರು ಎಂದು ಪ್ರೋತ್ಸಾಹಿಸುತ್ತಿದ್ದರು. ಅವಕಾಶ ಸಿಕ್ಕಿದಾಗಲೆಲ್ಲಾ, ತಮ್ಮ ಚಿತ್ರ ರಂಗದ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು, ನನ್ನ ಅನುಭವದ ವಿಸ್ತಾರವನ್ನು ಹಿಗ್ಗಿಸುತ್ತಿದ್ದರು. ಇಂದು ಈ ಬ್ಲಾಗ್ ಬರವಣಿಗೆಯನ್ನು ಓದಲು ಅವರಿಲ್ಲ, ರಶ್ಮಿ ಮಾಡಿದ ಸಬ್ಸೀಗೇ ಸೊಪ್ಪಿನ ಬಜ್ಜಿಯನ್ನು ಸವಿದು ಕಾಫೀ ಹೀರಿ ವಾಹ್! ಎನ್ನಲು ಅವರಿಲ್ಲ, ಮಲ್ಲೇಶ್ವರಂನಲ್ಲಿ ಇಂಥಾ ಗಲ್ಲಿಯಲ್ಲಿ ಇಂಥಾ ಅಂಗಡಿಯಲ್ಲಿ ಸಾವಯವ ಅಕ್ಕಿಸಿಗುತ್ತದೆ ಎಂದು ಕಂಡು ಹಿಡಿದು ನಮಗೆ ಹೇಳಲು ಅವರಿಲ್ಲ, ನಿಜಾರ್ಥದಲ್ಲಿ ನನ್ನ ಮನೆಯೊಡೆಯ, ಗುರುವರ್ಯ ಎಸ್. ರಾಮಚಂದ್ರ ಸರ್… ಇನ್ನಿಲ್ಲ! ಇದು ಶಬ್ದದಲ್ಲಿ ಬರೆದರೆ, ಮಾತಿನಲ್ಲಿ ಹಂಚಿಕೊಂಡರೆ, ಕತ್ತಲಲ್ಲಿ ಮುಲುಗಿದರೆ ತೀರದ ದುಃಖಃ. ನಾನಿಂದು ವೃತ್ತಿಸಂಬಂಧೀ ಗುರುಗಳು, ವ್ಯಯಕ್ತಿಕವಾಗಿ ಪಿತೃಸಮಾನರೊಬ್ಬರನ್ನು ಹೀಗೆ ಕಳೆದುಕೊಂಡಿದ್ದೇನೆ.

This entry was posted in Daily Blog. Bookmark the permalink.

24 Responses to ಗುರುವರ್ಯರಿಗೆ ಒಂದು ನುಡಿನಮನ

  1. rukminimala ಹೇಳುತ್ತಾರೆ:

    ಗುರುಗಳಿಗೆ ಸಾರ್ಥಕ ನುಡಿನಮನ ಸಲ್ಲಿಸಿದ್ದೀಯ. ಅವರ ನಿರ್ಗಮನ ಮನಸ್ಸಿಗೆ ಘಾಸಿ ಕೊಟ್ಟಿತು.

  2. Prasad ಹೇಳುತ್ತಾರೆ:

    Thanks a Ton Abhaya,

    It is one of the most touching articles i have come across, Its been a privelege and Honour for us to know the legend personally as well… i am sure we will definitely break down after watching Hejjegalu…

    Our Sincere Condolences to the Family and our heartfelt wishes to you and Rashmi.

    Wishing you Success and Happiness forever.

    With Best Regards
    Prakruthi, Pooja & Prasad

  3. RAJESH N NAIK ಹೇಳುತ್ತಾರೆ:

    Abhaya, its difficult to believe he is no more…! I couldn’t believe myself when you broke the news. All I could do was to pay my tribute in silence and would still let the silence speak about a man, who carried a great reverence amongst us, mostly for his profound human qualities beyond anything else!
    I had seen him/interacted with him in Suchitra; and its difficult, for me personally, to imagine Suchitra without him! It was the same man, to my utter disbelief was always there next to the door at Suchitra screenings and had constantly reminded me of those old-time gate keepers in our cinema halls who are always there to guard the entrants. But here was a different man, who never allowed his stature to interfere, from discharging his ‘humble duty’ of guarding the taste of a generation.

    You were lucky that you could get that house, could get close to him and could enjoy the warmth of his personal affection more closely. I sincerely wished this bond have lasted for many more years – it would have benefited all of us!

    We are too weak before reality; nothing much we could do but to accept the vacuum, left behind by his untimely demise. But this isn’t like any other vacuum; albeit a stillness, its rather a bright-stillness which is capable of prompting us for self-seeing [Arabindo]. Its upto us to carry forward the ‘light’ / the legacy and all his good work and deliver it to the next generation. If we could sit at ‘the door’ and ‘guard’ the taste of our next generation, I think, that will be most befitting tribute to our beloved Ramachandra.

  4. appachi ಹೇಳುತ್ತಾರೆ:

    ಪ್ರಿಯ ಅಭಯಣ್ಣ,

    ಬಾರೀ ಲಾಯಕದಲ್ಲಿ ಬರೆದಿದ್ದೆಯ ಕಣೋ. ನಿಜ ಹೇಳ ಬೇಕಾದರೆ “ಕ್ಯಾಮೆರ ಮೇನ್” ಎ೦ಬ ಬಿರುದು “ಪೋಸ್ಟ ಮ್ಯಾನ್”, “ಡೆಲಿವರಿ ಮ್ಯಾನ್” ಎ೦ಬ೦ತೆ ಭಾಸವಾಗಿ ಅವರ ನಿಜ ಕೆಲಸ, ಯೋಗ್ಯತೆ ಅರೆಯದೆ ಮನಸ್ಸಿನಲ್ಲಿ ಅವರ ಬಗ್ಗೆ ಅಷ್ಟು ಗೌರವ ಬರುವುದಿಲ್ಲ. ಅ೦ತ ಮೌಡ್ಯದಲ್ಲಿರುವವರ ಅ೦ಧಕಾರವನ್ನು ನಿನ್ನ ವ೦ಶ ಪಾರ೦ಪರ್ಯವಾಗಿ ಬ೦ದ ಜಿ.ಟಿ.ನ್. ಶೈಲಿ ಲೇಖನದಿ೦ದ ದೂರಮಾಡಿದೆ. ಹಿರಿಯರಲ್ಲಿ ಭಕ್ತಿ, ಗತಿಸಿದವರಲ್ಲಿ ಭಾವನೆ, ಜ್ನಾನಕ್ಕೆ ಪ್ರಶ೦ಸೆ ಕೊಡುವ ನಿನ್ನ ಹಿರಿಮೆ ಹೀಗೇ ಮು೦ದುವರೆದು, ಶ್ರೀ ರಾಮಚ೦ದ್ರರು ಹಾಕಿ ಕೊಟ್ಟ ದಾರಿಯಲ್ಲಿ ಯಶಸ್ವಿಯಾಗಿ ಮು೦ದುವರೆಯುವವ೦ತನಾಗು ಅ೦ದು ಆಶಿರ್ವಧಿಸುವ
    ಆನ೦ದಾಪ್ಪಚ್ಚಿ

  5. Abhaya ಹೇಳುತ್ತಾರೆ:

    @ Anandappachi: Thanks for the feed back. Yes mostly the work of a cameraman goes unnoticed as they hardly come to lime light. Ramachandra sir was such a shy personality that he would never showcase him self in any public functions. So unless you were in to the films, one would hardly know the greatness of this human being. The entire film fraternity will miss him. But for me, and many students of his, it’s also a personal loss.

    @ Rajesh: You have put it beautifully. He was indeed one of the strong guards. He surely guarded the taste of several generations. With his own methods, he promoted good cinema. Money was never a criteria for this great guru. Being within the mayas of this world, he lived like a saint. He was a cinema saint. We will miss him.

  6. AP radhakrishna ಹೇಳುತ್ತಾರೆ:

    ಅಭಯ, ಮನಸ್ಸು ತಟ್ಟಿದ ಬರಹ. ದೊಡ್ಡವರ ಸಾಹಚರ್ಯ ನಮ್ಮಲ್ಲಿರುವ ದಡ್ಡತನವನ್ನು ಒಂದಷ್ಟು ಸರಿಸಿ ಸರಿ ದಾರಿ ತೋರಿಸುತ್ತ ಬಾಳಿಗೆ ಬೆಳಕಾಗುತ್ತದೆ. ಅಂಥವರು ಇಲ್ಲ ಅಂದಾಗ ಕಾಡುವ ನಿರಾಶೆ, ನೋವು ಬರವಣಿಗೆಗೆ ನಿಲುಕದು. ರಾಯರ ಸಾಹಚರ್ಯ ನಿನಗೆ ಸಿಕ್ಕಿದ್ದು ಭಾಗ್ಯ. ಅವರಿಂದು ಇಲ್ಲವಾದರೇನು – ಕೊಟ್ಟ ಪ್ರೀತಿ, ಮಾರ್ಗದರ್ಶನ ಇದೆಯಲ್ಲ – ಮುಂದೆ ಸಾಗಲು. ಶುಭವಾಗಲಿ.
    ರಾಧಮಾವ

  7. ಮರುಕೋರಿಕೆ (Pingback): ‘ಹಾ! ಮಂಗಳೂರಿನವನೆಯೋ..ಸರಿ..ನಿರ್ದೇಶನ ಕಲಿಯುತ್ತಿದ್ದೀಯೋ ಸರಿ..’ « ಅವಧಿ

  8. Govinda Rao V Adamane ಹೇಳುತ್ತಾರೆ:

    ತಮ್ಮ ಬದುಕು ರೂಪಿಸಿಕೊಳ್ಳಲು ನೆರವಾದ ಗುರುಗಳನ್ನು ಸ್ಮರಿಸಿಕೊಳ್ಳುವವರೇ ವಿರಳವಾಗಿರುವ ಇಂದಿನ ದಿನಗಳಲ್ಲಿ ನಿನ್ನ ನುಡಿನಮನ ಲೇಖನ ಓದಿ ಬಲು ಸಂತೋಷವಾಯಿತು. ಈ ಸದ್ಗುಣ ವೃತ್ತಿಯಲ್ಲಿ ನಿನ್ನನ್ನು ಬಲು ಎತ್ತರಕ್ಕೆ ಒಯ್ಯುವುದು ಖಚಿತ. ಭಾವ, ಸಂದರ್ಭಕ್ಕೆ ತಕ್ಕ ಶೈಲಿ. ಶುಭವಾಗಲಿ.

  9. nagaraja javali ಹೇಳುತ್ತಾರೆ:

    ಪ್ರಿಯ ಅಭಯ,
    ತುಂಬಾ ಹೃದಯಸ್ಪರ್ಶಿ ಲೇಖನ. ಭೌತಿಕವಾಗಿ ಅವರು ಈಗ ನಮ್ಮೊಂದಿಗೆ ಇಲ್ಲದಿದ್ದರೂ ನಿಮ್ಮ ಏಳಿಗೆಯನ್ನು ಬಯಸುತ್ತಿದ್ದ ಅವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ ಎಂದು ನಂಬಿದ್ದೇನೆ.

  10. yogesh ಹೇಳುತ್ತಾರೆ:

    ನಮಸ್ಕಾರ ಅಭಯ್, ರಾಮಚಂದ್ರರ ಮೇಲಿನ ನಿಮ್ಮ ಲೇಖನ ಚೆನ್ನಾಗಿದೆ. ನಿಮ್ಮ ಗುರು ಹಾಗು ಉಪಕಾರ ಸ್ಮರಣೆ ಸೂಕ್ತವಾಗಿದೆ.ನಿಮ್ಮಂತಹ ಎಸ್ಟೋ ಮಂದಿಗೆ ಅವರ ಮಾರ್ಗದರ್ಶನ ಬೇಕ್ಕಿತ್ತು. ಆದರೆ ವಿಧಿ ಲಿಖಿತವೆ ಬೇರೆ.

  11. ಪಂಡಿತಾರಾಧ್ಯ ಹೇಳುತ್ತಾರೆ:

    ಪ್ರೀತಿಯ ಅಭಯಣ್ಣ
    ದಿವಂಗತ ರಾಮಚಂದ್ರ ಅವರಿಗೆ ನೀನು ಸಲ್ಲಿಸಿರುವ ಶ್ರದ್ಧಾಂಜಲಿ ಓದಿದೆ.
    ಕಂಕಣ ಚಿತ್ರ ತೆಗೆಯುತ್ತಿದ್ದ ಸಮಯದಲ್ಲಿ ಅವರನ್ನು ಅದರಲ್ಲಿ ಪಾತ್ರವಹಿಸಿದ್ದ, ಜಿ ಎಚ್ ನಾಯಕರ ಶ್ರೀಮತಿ, ಮೀರಾ ನಾಯಕರ ಮನೆಯಲ್ಲಿ ನೋಡಿದ್ದೆ.
    ಅವರು ಇಷ್ಟು ಬೇಗ ಕಣ್ಮರೆಯಾದುದು ತಿಳಿದು ದುಃಖವಾಯಿತು.
    ಅವರು ನಿನ್ಮ್ಮನ್ನು ತಮ್ಮ ಹತ್ತಿರದಲ್ಲಿ ಇರಸಿಕೊಂಡ ವಿಷಯ ತಿಳಿದು ಸಂತೋಷವಾಯಿತು.
    ಅವರು ಇನ್ನೂ ಹೆಚ್ಚುಕಾಲ ಬಾಳಬೇಕಿತ್ತು.
    ಅವರಿಲ್ಲದೆ ನಿನಗೆ, ಮನೆಯೊಳಗೆ ಮನೆಯೊಡೆಯನಿಲ್ಲ ಅನ್ನಿಸಿರುವುದು ಸಹಜ.
    ಪಂಡಿತಜ್ಜ

  12. raj ಹೇಳುತ್ತಾರೆ:

    Dear Abhay sir, Please post this blog in english

  13. "netaji" ಹೇಳುತ್ತಾರೆ:

    ಬಹಳ ಚೆನ್ನಾಗಿತ್ತು ಅಭಯ.. ಶ್ರೀ ರಾಮಚಂದ್ರರಂತಹ ಮಹಾನ್ ಕಲಾವಿದರು ನಿನಗೆ ಆತ್ಮಿಯರಿದ್ದದು ನಿನ್ನ ಭಾಗ್ಯ.. ನನಗೆ ಎವರ್ ಬಗ್ಗೆ ತಿಲಿದಿರಿಲಿಲ್ಲ.. ಈ ನುಡಿಗಮನದ ಮೂಲಕ ಅವರ ಬಗ್ಗೆ ನಮಗೆಲ್ಲ ತಿಲಿಸಿದಕ್ಕ್ಕೆ ಧನ್ನ್ಯವಾದ.

  14. A.R Manikanth ಹೇಳುತ್ತಾರೆ:

    ಬರಹ ಮನಸ್ಸಿಗೆ ತಟ್ಟಿತು.ಇವತ್ತು ಪ್ರಜಾವಾಣಿ ಯಲ್ಲಿ ಪಿ.ಶೇಷಾದ್ರಿ ಕೂಡ ರಾಮಚಂದ್ರ ಅವರ ಬಗ್ಗೆ ಮನಕಲಕುವಂಥ ಲೇಖನ ಬರೆದಿದ್ದಾರೆ.ಒಂದು ತಲೆಮಾರಿಗೆ ಆದರ್ಶವಾಗುವಂಥ ವ್ಯಕ್ತಿತ್ವದ ಇಂಥ ಮಹನೀಯರ ಬದುಕು,ದೊಡ್ಡ ಗುಣಗಳ ಬಗ್ಗೆ ಅವರು ಬದುಕಿದ್ದಾಗಲೇ ಬರಹದ ಮೂಲಕ ತಿಳಿಸಿದರೆ ಚೆನ್ನ. ಅಲ್ಲವೇ?

  15. D S Ramaswamy ಹೇಳುತ್ತಾರೆ:

    A good tribute in abnormal fantasy. hope u vl carry d values he upgraded.

  16. Prakashchandra K ಹೇಳುತ್ತಾರೆ:

    Ramachandrarantha praathasmaraneeyarannu gurugalaagi padeda abhayasimhara nudi namana arthapoornavaagide. avarige guru krupe sadaa neralaagirali.

  17. S Raghavendra Bhatta ಹೇಳುತ್ತಾರೆ:

    Dear Abhaya,

    Somehow, the year 2010 has been an year of so many deaths of our beloved acquaintances and friends. In fact, we had met Sri Ramachandra at Delhi when he was to receive a national award there somewhere in 1977. As the host late Sri Narasimha Murthy Holla, the proprietor of the famous Madras Cafe at Karol Bagh was a distant but instantly most hospitable relative of mine in 1970s Sri Ramachandra was his maternal aunt’s son – Jaanatte maga as he was referred to then. Sri Ramachandra was most unassuming and ever responsive to affectionate advances from strangers like me also. The fact that he was actively associated with the new wave films which heralded a new age in Kannada film world is now history.

    Such a great man had taken interest in you speaks volumes about the values the elders should uphold in molding the younger generation which is clueless many a time as to what course to take in this chaotic world that they are faced with. May you emulate all those principles and ideals that you have inherited in the family and try to internalize them in such a manner as to repay the debt you owe to the society at large.

    Hosa varushada shubhaashayagaLu, haLataadaru taaraaQoo !!!

    S R Bhatta

  18. ಶಂಕರ ಐತಾಳ ಹೇಳುತ್ತಾರೆ:

    ನನ್ನ ಅಣ್ಣ ರಾಮಚಂದ್ರ ಅಥವಾ (ನಮ್ಮಕುಟುಂಬದವರೆಲ್ಲಾ ಕರೆಯುವ) ರಾಮಿಯ ಅಗಲುವಿಕೆಯಿಂದ ಉಂಟಾಗಿರುವ ಮನಸ್ಸಿನ ನೋವಿನ ಸ್ವಲ್ಪ ಶಮನ ನಿಮ್ಮ ಆತ್ಮೀಯ ಬರವಣಿಗೆ ನನಗೆ ನೀಡಿದೆ. ನಿಮ್ಮ ನುಡಿಯ ಮೂಲಕ ರಾಮಿ ನಮ್ಮ ಕುಟುಂಬದವರ ಹೊರಗಿನವರ ಜೊತೆ ಹೇಗೆ ಒಡನಾಡುತ್ತಿದ್ದ ಎಂಬುದು ನನಗೆ ಈಗ ಗೊತ್ತಾಗಿದೆ. ಸಾಗರದಾಚೆ ನೆಲಸಿರುವ ನನಗೆ ನಿಮ್ಮ ಮತ್ತು ಶೇಷಾದ್ರಿಯವರ ಲೇಖನಗಳು ನನ್ನ ಮನಸ್ಸನ್ನು ಕಲಕಿವೆ, ತಟ್ಟಿವೆ. ಇದಕ್ಕಾಗಿ ನಾನು ನಿಮಗೆ ಚಿರರುಣಿ. ಈ ಬೇಸಗೆಯಲ್ಲಿ ಬೆಂಗಳೂರಿಗೆ ಬಂದಾಗ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುವೆ.

    ಶಂಕ್ರ

  19. Sindhoo ಹೇಳುತ್ತಾರೆ:

    ಲೇಖನ ಇಷ್ಟವಾಯಿತು. ಚಿತ್ರರಂಗದ ಪರಿಚಯ ಜಾಸ್ತಿ ಇಲ್ಲದ ನನಗೆ ನಿಮ್ಮ ಗುರುವಿನ ಪರಿಚಯ ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು.

  20. Rathnakar ಹೇಳುತ್ತಾರೆ:

    dear abhay,
    I heard through your dad a few months back about your rented house story . legendary cameraman had more to tell through his way of living. you are blessed by his love and care,make it a strenghth. his memory will make you a man with more missions,all the best

  21. ಜಯಲಕ್ಷ್ಮಿ ಹೇಳುತ್ತಾರೆ:

    ಮನ ಕಲಕುವ ಲೇಖನ

  22. muthamma ಹೇಳುತ್ತಾರೆ:

    Hai abhaya,

    nima gurugala bage niv barediru salugalu nima vykthithwavanu mathastu hechisuthade.

  23. Subru Bhat ಹೇಳುತ್ತಾರೆ:

    Thanks for sharing your thoughts and experiences with such a noble person. All the best.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s