Category Archives: Daily Blog

ದಿನದ ಚಿಂತೆಗಳು

ಹರಿಯುವ ನೀರಿನ ಮಧುರ ಗಾನ…

ಹಿಂದೆ ಚಿತ್ರದಲ್ಲಿ ಧ್ವನಿ ಬಳಕೆಯ ಕುರಿತಾಗಿ ಬರೆದಿದ್ದೆ. ಇತ್ತೀಚೆಗೆ ಧ್ವನಿಯಲ್ಲಿ ಪ್ರಯೋಗಗಳನ್ನು ಮಾಡುತ್ತಿರುವವರ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿರಬೇಕಾದರೆ, ಒಂದು ಕುತೂಹಲಕಾರೀ ಪ್ರಯೋಗದ ಕುರಿತಾಗಿ ತಿಳಿದು ಬಂತು. eepeepeepep ಎಂಬ ಒಂದು ವೆಬ್ ಸೈಟ್ ಇದೆ. (ಅದನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ) ದಿನ ನಿತ್ಯ ಕೇಳಿಬರುವ ಅನೇಕ ಬಗೆಯ ಅಲಾರಾಂ ಧ್ವನಿಗಳನ್ನೇ ಬಳಸಿಕೊಂಡು ಸಂಗೀತ ಸಂಯೋಜನೆ ಮಾಡಿರುವ … ಓದನ್ನು ಮುಂದುವರೆಸಿ

Posted in Daily Blog, Film Craft | 5 ಟಿಪ್ಪಣಿಗಳು

ಗುರುವರ್ಯರಿಗೆ ಒಂದು ನುಡಿನಮನ

ಶಬ್ದಗಳಲ್ಲಿ ಹಿಡಿದಿಡಲಾರದ್ದನ್ನು ವಾಕ್ಯದಲ್ಲಿ ಪೋಣಿಸುವ ಪ್ರಯತ್ನ ಮಾಡುತ್ತಿದ್ದೇನೆ ನಾನು. ಮೂರು ದಿನದಿಂದ ತುಡಿಯುತ್ತಿದ್ದರೂ ಇಂದು ಬರೆಯಲು ಆರಂಭಿಸಿದ್ದೇನೆ. ಜನವರಿ ಹತ್ತನೇ ತಾರೀಕಿನಂದು ಶಿಕಾರಿ ಚಿತ್ರದ ಸಂಕಲನ ಮಾಡುತ್ತಾ ಕುಳಿತಿದ್ದಾಗ ಪ್ರಾಥಸ್ಮರಣೀಯರಾದ ಗುರು ಎಸ್. ರಾಮಚಂದ್ರರ ನಿಧನದ ಸುದ್ದಿ ಬಂದಪ್ಪಳಿಸಿತು. ಅದೇ ಸಂಜೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದು ತಕ್ಷಣ ಅತ್ತ ಹೊರಟೆ. ಮರುದಿನ … ಓದನ್ನು ಮುಂದುವರೆಸಿ

Posted in Daily Blog | 24 ಟಿಪ್ಪಣಿಗಳು

Trouble in FTII

Time and again the premier film school of India, the Film and Television Institute of India, Pune (FTII) has faced various threats to its existence and the students of respective batches have fought back hard and have been victorious. The … ಓದನ್ನು ಮುಂದುವರೆಸಿ

Posted in Daily Blog, Society | 4 ಟಿಪ್ಪಣಿಗಳು

ಭಾಮಿನಿ ಪ್ರಯೋಗದ ವಿಶೇಷ ದಾಖಲೀಕರಣ

ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಕ್ಕೆ ಸಾವಿರ ಸಂಭ್ರಮ ನಡೆದಿದ್ದ ಸಂದರ್ಭದಲ್ಲಿ, ಅವರ ಪ್ರದರ್ಶನದ ದಾಖಲೆಯಾಗಿದೆಯೇ ಇಲ್ಲವೇ? ಇಂಥದ್ದೊಂದು ದಾಖಲೆ ಬೇಕಲ್ಲವೇ? ಎಂದು ಯೋಚನೆ ತಲೆಯಲ್ಲಿ ಕೊರೆಯಲಾರಂಭಿಸಿತು. ಅವರನ್ನು ಒಂದೆರಡು ಬಾರಿ ಭೇಟಿ ಮಾಡಿಯಷ್ಟೇ ಗೊತ್ತಿತ್ತು. ಅಂಥಾ ದೊಡ್ಡ ಕಲಾವಿದರಿಗೆ ನೇರ ದೂರವಾಣಿಸುವಷ್ಟು ಸಲುಗೆ ನನಗಿರಲಿಲ್ಲ. ಆದರೆ ಮಂಗಳೂರಿನಲ್ಲಿರುವ ಅವರ ತಮ್ಮ ಮನೋಹರರು ನನಗೆ ಹತ್ತಿರವಾಗಿದ್ದರಿಂದ … ಓದನ್ನು ಮುಂದುವರೆಸಿ

Posted in Daily Blog | 3 ಟಿಪ್ಪಣಿಗಳು

ಜರ್ಮನಿ ಜಯಹೋ!

ಜಯ ಅಥವಾ ಜಯಕ್ಕ ನನ್ನ ಚಿಕ್ಕಜ್ಜನ ಮಗಳು. ಅಂದರೆ ನಿಜಾರ್ಥದಲ್ಲಿ ನನಗೆ ಇವಳು ಅತ್ತೆ ಆದರೆ ಬಳಕೆಯಿಂದ ಅಕ್ಕ ಇವಳು. ಸಂಗೀತದಲ್ಲಿ ಅಪಾರ ಆಸಕ್ತಿ ಇರುವ ಈಕೆ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತವಳೂ ಹೌದು. ಅವಳ ಗಂಡ, ಜ್ಞಾನಶೇಖರ್ ಬಾಶ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರು ತಮ್ಮ ಕೆಲಸದ ಮೇರೆಗೆ ಬಾಶ್ ಕಂಪನಿಯ ತವರು ಮನೆಯಾದ ಜರ್ಮನಿಗೆ … ಓದನ್ನು ಮುಂದುವರೆಸಿ

Posted in Berlinale, Daily Blog | 26 ಟಿಪ್ಪಣಿಗಳು

Shikari begins…

Dear friends, Shooting for my new film, Shikari will start from 21 May 2010. The legendary actor, Mammootty will be reaching Bangalore soon. Pre-production for the film is happening round the clock. So I will take your leave from the … ಓದನ್ನು ಮುಂದುವರೆಸಿ

Posted in Daily Blog | 12 ಟಿಪ್ಪಣಿಗಳು

ರಾಜೇಶ್ ಪಾಸಾಗಲಿ…!

ಮುಂದಿನ ಚಿತ್ರ, ‘ಶಿಕಾರಿ’ ನಿರ್ಮಣಕ್ಕೆ ತಯಾರಿಗಳು ಭರದಿಂದ ಸಾಗಿದೆ. ಒಂದು ಸಂಜೆ ಗೆಳೆಯ ರಾಜೇಶನ ದೂರವಾಣಿ ಕರೆ ಬಂತು. ಅವನು ಐ.ಎ.ಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದ! ಎಂಥಾ ಸಂತೋಷದ, ಸಂಭ್ರಮದ ಸಮಯ ಅದು! ಕಳೆದ ಸುಮಾರು ಹತ್ತು ವರುಷಗಳ ಸ್ನೇಹ ನಮ್ಮದು. ಅದರ ಉದ್ದಕ್ಕೂ ಐ.ಎ.ಎಸ್ ತಯಾರಿಯಲ್ಲಿ ರಾಜೇಶ ಕಳೆದ ದಿನಗಳು, ರಾತ್ರಿಗಳು ನನಗೆ ಗೊತ್ತು. … ಓದನ್ನು ಮುಂದುವರೆಸಿ

Posted in Daily Blog, Society | 9 ಟಿಪ್ಪಣಿಗಳು