ಈ ಕಥೆ ಆರಂಭವಾಗುವುದು ಒಂದು ಸಾವಿನಿಂದ. ಅದ್ಯಾವುದೋ ಅಂತರ ರಾಷ್ಟ್ರೀಯ ಓಟ ಸ್ಪರ್ಥೆಯಲ್ಲಿ ಗೆದ್ದ ಆಲ್ಬರ್ಟ್ ಪಿಂಟೋರವರಿಗೆ ಅಂದಿನ ಮುಖ್ಯಮಂತ್ರಿಗಳು ರಾಜ್ಯ ಸರಕಾರದ ಕಡೆಯಿಂದ ಒಂದು ೪೦-೬೦ ವಿಸ್ತೀರ್ಣದ ಸೈಟನ್ನು ಬೆಂಗಳೂರಿನಲ್ಲಿ ಕೊಟ್ಟರು. ಆದರೆ ಮಂಗಳೂರು ಮೂಲದ ಆಲ್ಬರ್ಟ್ ಪಿಂಟೋರಿಗೆ ಇದು ಗೊತ್ತೇ ಇರಲಿಲ್ಲ! ಆಲ್ಬರ್ಟ್ ಪಿಂಟೋರವರಿಗೆ ರಕ್ತದ ಒತ್ತಡ ಇದೆ ಅವರು ಸಿಟ್ಟು ಮಾಡಬಾರದು ಎಂದು ಅವರ ವೈದ್ಯರು ಹೇಳಿದ್ದರು. ಹಲವು ವರ್ಷಗಳ ನಂತರ ಪಕ್ಕದ ಗಲ್ಲಿಯ ಮಕ್ಕಳು ಕ್ರಿಕೆಟ್ ಆಡುತ್ತಾ ಚಂಡನ್ನು ತಮ್ಮ ಮನೆಯ ಕಿಟಕಿಗೆ ಹೊಡೆದದ್ದರಿಂದ ಸಿಟ್ಟುಗೊಂಡ ಆಲ್ಬರ್ಟ್ ಪಿಂಟೋ ರಕ್ತದ ಒತ್ತಡ ಹೆಚ್ಚಿ ದೈವಾಧೀನರಾದರು. “ಸೌಮ್ಯ ಸ್ವಭಾವದ, ಕರುಣಾಮಯಿ ತಂದೆಯ ನೆನಪಿನಲ್ಲಿ – ಮಕ್ಕಳು” ಎಂದು ಅಮೇರಿಕಾದಲ್ಲಿದ್ದ ಅವರ ಮಕ್ಕಳು ಮಂಗಳೂರಿನಲ್ಲಿ ಮಾತ್ರ ಪ್ರಕಟವಾಗುತ್ತಿದ್ದ ಪತ್ರಿಕೆಯೊಂದರಲ್ಲಿ ಅಶ್ರುತರ್ಪಣವನ್ನು ಎರಡು ಸಾವಿರ ರೂಪಾಯಿ ಕೊಟ್ಟು ಮುದ್ರಿಸಿದ್ದರು. ಬೆಂಗಳೂರಲ್ಲಿ ಆಲ್ಬರ್ಟ್ ಪಿಂಟೋಗಾಗಿ ಕಾದುಕೊಂಡಿದ್ದ ಸೈಟು ಈಗ ಅನಾಥವಾಗಿತ್ತು.
Continue reading
-
Recent comments…
- ಸಿಂಧೂ on ಆಲ್ಬರ್ಟ್ ಪಿಂಟೋರ ೪೦-೬೦
- Anarghya Vardhana on Mayor of Nelson city
- apkrishna on ಆಲ್ಬರ್ಟ್ ಪಿಂಟೋರ ೪೦-೬೦
- Gangadhar Melligeri on ಆಲ್ಬರ್ಟ್ ಪಿಂಟೋರ ೪೦-೬೦
- raoavg on ಆಲ್ಬರ್ಟ್ ಪಿಂಟೋರ ೪೦-೬೦
-
Recent Posts
So far…
-
Audience so far...
- 64,706 Friends
Categories
Contact me
abhayaftii@gmail.com
Kannada Film News
Times of India Head Lines
