ಚಂದ್ರಾ ಬೇರಟ್ ಹೆಸರು ಎಲ್ಲಾದರೂ ನೆನಪಾಗುತ್ತಾ? ಕಷ್ಟವೇ? ಇರಲಿ ನಾನೇ ಹೇಳ್ತೇನೆ. ಅಮಿತಾಬ್ ಬಚ್ಚನ್ ಎಂಬ ಹುಡುಗನನ್ನು ಇಟ್ಟುಕೊಂಡು ಡಾನ್ ಎಂಬ ಚಿತ್ರವನ್ನು ನಿರ್ದೇಶಿಸಿದ ಚಿತ್ರ ನಿರ್ದೇಶಕ ಇವರು. ಅವತ್ತಿನ ಕಾಲದಲ್ಲಿನ ಸ್ಟೈಲ್ ಸ್ಟೇಟ್ಮೆಂಟ್ ಆಗಿದ್ದ ವ್ಯಕ್ತಿ. ಜೀನತ್ ಅಮಾನರನ್ನು ತನ್ನ ಗರ್ಲ್ ಫ್ರಂಡ್ ಆಗಿದ್ದಳು. ಮದುವೆಯೂ ಆಗಬೇಕಿತ್ತು ನಾನು ಆಕೆಯನ್ನು ಎಂದು ಹೇಳಿಕೊಳ್ಳುವವರು ಈ ವ್ಯಕ್ತಿ. ಇವರನ್ನು ಇತ್ತೀಚೆಗೆ ಅಕಸ್ಮತ್ತಾಗಿ ಮುಂಬೈನಲ್ಲಿ ಒಂದು ಆಪ್ತ ಭೇಟಿಯಲ್ಲಿ ಮಾತನಾಡಿಸುವ ಅವಕಾಶ ಸಿಕ್ಕಿತ್ತು ನನಗೆ. ಎಪ್ಪತ್ತರ ದಶಕದಲ್ಲೇ ಮುಂಬೈಯಲ್ಲಿ ಸ್ಪೋರ್ಟ್ಸ್ ಕಾರು ಇಟ್ಟುಕೊಂಡು ಓಡಾಡುತ್ತಿದ್ದ ವ್ಯಕ್ತಿ, ಮುಂಬೈಯಲ್ಲಿ ಇದ್ದ ಕೇವಲ ಮೂರು ವಿ.ಸಿ.ಆರ‍್ ಗಳಲ್ಲಿ ಒಂದರ ಮಾಲಿಕರಾಗಿದ್ದವರು! ಹೀಗೆ ಆ ಕಾಲದ ಅವರ ನೆನಪಿನ ಸುರುಳಿಗಳು ಬಿಚ್ಚಿಕೊಂಡದ್ದು ನಮ್ಮ ಮಾತುಕಥೆಯ ಸಂದರ್ಭದಲ್ಲಿ. ಇದರ ಕುರಿತಾಗಿ ಒಂದಿಷ್ಟು ನಿಮ್ಮೊಂದಿಗೂ ಹಂಚಿಕೊಳ್ಳುವೆ.
ಚಂದ್ರಾ… ಈಗ ‘ಡಾನ್’ ಚಿತ್ರದ ಬಗ್ಗೆ ಒಂದು ಪುಸ್ತಕವನ್ನು ಬರೆದಿದ್ದಾರೆ. ಇನ್ನೇನು ಅದು ಪ್ರಕಟಗೊಳ್ಳಲಿದೆ. ಡಾನ್ ಭಾರತೀಯ ಚಿತ್ರರಂಗದ ಮೈಲುಗಲ್ಲು ಚಿತ್ರಗಳಲ್ಲಿ ಒಂದು. ವಾಣಿಜ್ಯಾತ್ಮಕ ಚಿತ್ರವಾಗಿದ್ದ ಇದು, ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕೇಳರಿಯದಂಥಾ ಯಶಸ್ಸನ್ನು ಪಡೆದಿತ್ತು. ಇಂದಿಗೂ ಅದರ ಹಾಡುಗಳು, ಸಂಭಾಷಣೆಗಳು ಪ್ರಸಿದ್ಧವಾದವುಗಳು. ಅದರ ನಿರ್ದೇಶಕ ಚಂದ್ರಾ ಬೇರಟ್ ಎನ್ನುವ ಹುಡುಗ. ಈತ ಆಫ್ರಿಕಾದಲ್ಲಿ ಹುಟ್ಟಿ, ಬೆಳೆದವನು. ಪಾಶ್ಚಾತ್ಯ ಚಿತ್ರಗಳಿಂದ ಬಹಳಷ್ಟು ಪ್ರೇರೇಪಿತನಾಗಿದ್ದವನು. ಭಾರತೀಯ ಮೂಲದವನೇ ಆಗಿದ್ದರೂ, ಅವನ ಅಭಿವ್ಯಕ್ತಿ, ಪಾಶ್ಚಾತ್ಯವೇ ಆಗಿತ್ತು. ಭಾರತದಲ್ಲಿ ನಿರ್ದೇಶಕ ಮನೋಜ್ ಕುಮಾರ್ ಬಳಿ ಒಂದಷ್ಟು ಕಾಲ ಕೆಲಸ ಮಾಡಿ ಅನುಭವವನ್ನೂ ಈತ ಗಳಿಸಿದ್ದ. ಆ ಕಾಲದ ಅನೇಕ ಅನುಭವಗಳಿಂದ ಚಂದ್ರಾ ಮಾಗಿದ್ದಾರೆ. ಅವರೊಂದಿಗೆ ಹಳೇ ಕಾಲದ ಕಥೆಗಳನ್ನು ಕೇಳುವುದು ಬಹಳ ಆನಂದದಾಯಕವಾಗಿತ್ತು. ಅನೇಕ ವಿಷಯಗಳಂತೂ ನಂಬಲಿಕ್ಕೆ ಕಷ್ಟವಾದಾಗ, ಅದನ್ನು ಸಮರ್ಥಿಸುವಂತೆ ಅನೇಕ ಚಿತ್ರಗಳೂ ಇವೆ ಚಂದ್ರಾ ಬೇರಟ್ ಬಳಿ! ಸಧ್ಯದಲ್ಲಿ ಸಹಾರಾ ಸಂಸ್ಥೆಯ ಮುಂಬೈ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಬೇರಟ್ ಅವರನ್ನು ಅವರ ಕಛೇರಿಯಲ್ಲೇ ಸಂದಿಸಿದ್ದೆ.
ಈ ವ್ಯಕ್ತಿ ಡಾನ್ ಚಿತ್ರಕ್ಕಿಂತಲೂ ಮೊದಲೇ ಚಿತ್ರೋದ್ಯಮದಲ್ಲಿ ಇದ್ದವರು. ಅದೊಂದು ಸಂದರ್ಭದಲ್ಲಿ ಅವರು ದೆಹಲಿಗೆ ಹೋಗಿದ್ದಾಗ ಅಲ್ಲಿ ತೇಜಿ ಬಚ್ಚನ್ ರಾಷ್ಟ್ರ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿದ್ದರಂತೆ. ಅವರನ್ನು ಅದ್ಯಾವುದೋ ಕೆಲಸದಿಂದ ಕಾಣಲೆಂದು ಇವರು ಹೋದಾಗ ತೇಜೀ ಬಚ್ಚನ್ ಮಗ ತಾನು ಕಲ್ಕತ್ತಾದಲ್ಲಿ ಮಾಡುತ್ತಿರುವ ಕೆಲಸ ಬಿಟ್ಟು ಮುಂಬೈಗೆ ಬಂದು ಚಿತ್ರೋದ್ಯಮದಲ್ಲಿ ಸೇರಿಕೊಳ್ಳುವ ಆಸಕ್ತಿ ಹೊಂದಿರುವುದಾಗಿ ಹೇಳಿ ತನ್ನದೊಂದು ಚಿತ್ರವನ್ನು ಕೊಟ್ಟನಂತೆ. ಬೇರಟ್ ಇಂದಿಗೂ ಆ ಚಿತ್ರವನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದಾರೆ ಮಾತ್ರವಲ್ಲ, ಆ ಹುಡುಗನನ್ನು ತಮ್ಮ ಹೃದಯದಲ್ಲೇ ಇಟ್ಟುಕೊಂಡಿದ್ದಾರೆ. ಆ ಹುಡುಗನೇ ಇಂದು ದಂತಕಥೆಯಾಗಿರುವ ಅಮಿತಾಬ್ ಬಚ್ಚನ್! ಅಮಿತಾಬ್ ಬಚ್ಚನ್ ಕೂಡಾ ಅಷ್ಟೇ, ತನ್ನ ವೃತ್ತಿ ಜೀವನದ ಒಂದು ಪ್ರಮುಖ ಚಿತ್ರವನ್ನು ಕೊಟ್ಟ ಚಂದ್ರಾರನ್ನು ಮರೆತಿಲ್ಲ. ಇಂದಿಗೂ ಚಂದ್ರ ಅಮಿತಾಬ್ ಮನೆಯ ಒಬ್ಬ ಖಾಸ್ ವ್ಯಕ್ತಿಯಾಗಿದ್ದಾರೆ. ಅವರಿಬ್ಬರ ನಡುವಿನ ಅನೇಕ ಸವಿನೆನಪುಗಳನ್ನು ಇಂದಿಗೂ ಚಂದ್ರಾ ಮೆಲುಕು ಹಾಕಿ ಸಂತಸ ಪಡುತ್ತಾರೆ.
ಇನ್ನು ಡಾನ್ ಚಿತ್ರದ ಕುರಿತಾಗಿ ಅವರ ಅನೇಕ ನೆನಪುಗಳು ಆ ಚಿತ್ರವನ್ನು ಬೆರಗಿನಿಂದ ನೋಡಿ ಬೆಳೆದ ನನಗೆ ಬಹಳ ಕುತೂಹಲಕಾರಿಯಾಗಿತ್ತು. ಡಾನ್ ಚಿತ್ರದಲ್ಲಿ ಭಾರತದಲ್ಲೇ ಮೊದಲಬಾರಿಗೆ ಸಿನೆಮಾಕ್ಕಾಗಿ ಬ್ಲೂ ಮ್ಯಾಟ್ ಬಳಸಿದ್ದರಂತೆ. ಬ್ಲೂ ಮ್ಯಾಟ್ ಎಂದರೆ ಇಂದಿನ ಗ್ರೀನ್ ಸ್ಕ್ರೀನಿಗೆ ಸಮಾನವಾದ ತಂತ್ರಜ್ಞಾನ. ಹಿಂದೆಲ್ಲಾ ಬ್ಯಾಕ್ ಪ್ರೊಜೆಕ್ಷನ್ ಮಾಡಿ ಸಾಧಿಸುತ್ತಿದ್ದ ಕೆಲಸವನ್ನು ಮೊದಲಬಾರಿಗೆ ಬ್ಲೂ ಮ್ಯಾಟ್ ತಂತ್ರಜ್ಞಾನದಿಂದ ವಾಸ್ತವಕ್ಕೆ ಹೆಚ್ಚು ಹತ್ತಿರ ತಂದಿದ್ದರು ಇವರು. ಮತ್ತೊಂದು ದೃಶ್ಯದ ಬಗ್ಗೆ ಹೇಳುತ್ತಾ, ಅದ್ಯಾವುದೋ ದೃಶ್ಯದಲ್ಲಿ ವಾಹನ ಚಲಾಯಿಸುವ ಪಾತ್ರಕ್ಕೆ ನಿಜವಾಗಿ ಕಾರ್ ಬಿಡಲು ಬರುತ್ತಿರಲಿಲ್ಲವಂತೆ. ಅದಕ್ಕೆ ಚಂದ್ರಾ ಮಾಡಿದ್ದೇನೆಂದರೆ, ಆ ಪಾತ್ರದ ಕಾರು ನಿಂತಲ್ಲೇ ನಿಂತಿರುತ್ತದೆ ಮತ್ತು ಅದರ ಸುತ್ತಲಿನ ಕಾರುಗಳು ವೇಗದಲ್ಲಿ ಹಿಮ್ಮೊಗವಾಗಿ ಚಲಿಸುವಂತೆ ಏರ್ಪಡಿಸಿದ್ದರಂತೆ. ಹೀಗೆ ಪಾತ್ರ ಕುಳಿತಿದ್ದ ಕಾರು ಚಲಿಸಿದ ಅನುಭವವಾಗುವಂತೆ ಮಾಡಲಾಗಿತ್ತು.
ಮತ್ತೆ ಹೊಸ ಡಾನ್ ಬಗ್ಗೆ (ಶಾರುಖ್ ಖಾನ್ ನಟನೆ ಇದ್ದಂಥಾದ್ದು) ಕೇಳಿದೆ. ಅವರನ್ನು ಚಿತ್ರ ನೋಡಲು ಕರೆದಿದ್ದರಂತೆ. ಚಿತ್ರ ನೋಡಿ ಹೊರಬಂದ ಮೇಲೆ ಚಿತ್ರ ಹೇಗಿದೆ ಎಂದು ಫರಾನ್ ಅಖ್ತರ್, ಶಾರುಖ್ ಖಾನ್ ಕೇಳಿದರಂತೆ. ಚೆನ್ನಾಗಿದೆ ಎಂದಷ್ಟೇ ಹೇಳಿ ಬಂದರಂತೆ. ಮತ್ತೆ ಜಾವೇದ್ ಅಖ್ತರ್ ಕರೆ ಮಾಡಿ, ಚಂದ್ರಾ… ನೀವೊಬ್ಬ ಜಂಟಲ್ ಮ್ಯಾನ್. ನೀವು ಬೇಕೆಂದಿದ್ದರೆ, ಈ ಚಿತ್ರವನ್ನು ಹರಿದು ಬಿಸಾಡಬಹುದಾಗಿತ್ತು. ಆದರೆ ಸಣ್ಣ ಮಕ್ಕಳನ್ನು ಕ್ಷಮಿಸಿ, ಪ್ರೋತ್ಸಾಹಿಸಿದ್ದೀರಿ ಎಂದು ವಿಶ್ವಾಸದ ನುಡಿಗಳನ್ನಾಡಿದರಂತೆ. ಮತ್ತೆ ಅದೇ ಕುರಿತು ಮಾತನಾಡುತ್ತಾ, ಚಂದ್ರಾ ಹೇಳಿದರು, ಹೊಸ ಡಾನ್ ಚಿತ್ರದ ಒಂದು ಸಾಹಸದ ಚಿತ್ರೀಕರಣಕ್ಕೆ ಸುಮಾರು ತೊಂಭತ್ತು ಲಕ್ಷ ಖರ್ಚು ಮಾಡಿದ್ದಾರೆ. ಆದರೆ ನನ್ನ ಇಡೀ ಚಿತ್ರದ ಬಜೆಟ್ ಅಷ್ಟಾಗಿತ್ತು! ನಾವು ನಮ್ಮ ಪರಿಚಯಸ್ತರ ಮನೆಗಳಲ್ಲಿ, ತೋಟಗಳಲ್ಲಿ ಚಿತ್ರೀಕರಿಸಿ ಮುಗಿಸಿದ್ದು ಈ ಚಿತ್ರವನ್ನು ಎಂದು ನಕ್ಕರು ಚಂದ್ರಾ.
ಆ ದಿನಗಳ, ಅನುಭವಗಳ ಸಾಗರದಲ್ಲಿ ಸುಮಾರು ನಾಲ್ಕು ಗಂಟೆ ಮಿಂದೆದ್ದು ಬಂದೆ ನಾನು ಅಂದು. ಮತ್ತೆ ಆ ಹಳೇ ಚಿತ್ರಗಳನ್ನು ನೋಡುವ ಆಸೆಯಾಗುತ್ತಿದೆ…
Dear Abhaya,
I didnot understand why he said new Don was not well made movie?
Was the acting bad or direction and production was bad?But excuse me I have not seen both old and New versions of Don.
Shailakka
Dear Abhaya,
I didnot understand why he said new Don was not well made movie?
Was the acting bad or direction and production was bad?But excuse me I have not seen both old and New versions of Don.
Shailakka
Is this the only film he directed???
no. he has directed one more film called Pyar Bhara Dil
he has been assisting many more films like
# Roti Kapada Aur Makaan (1974) (chief assistant director)
# Shor (1972) (assistant director)
# Purab Aur Pachhim (1970) (assistant director)
# Yaadgaar (1970) (assistant director)